blank

ನಿಮಗೆ ಜ್ವರ ಬಂದ್ರೆ ಈ ರೀತಿ ಮಾಡ್ತೀರಾ? ಈ ವಿಷಯಗಳನ್ನು ನೀವು ಖಂಡಿತ ತಿಳಿದುಕೊಳ್ಳಲೇಬೇಕು? Fever

Fever

Fever : ದೇಹದ ಉಷ್ಣತೆಯು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾದಾಗ, ಜನರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ಬಂದಾಗ ಕೆಲವರು ಸ್ವಯಂ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಆ ರೀತಿ ಮಾಡಬಾರದು. ಅಂತಹ ಸಂದರ್ಭಗಳಲ್ಲಿ ಜ್ವರದ ತೀವ್ರತೆ ಹೆಚ್ಚಾಗುವ ಮತ್ತು ಆರೋಗ್ಯಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ತಜ್ಞರು ಜ್ವರ ಬಂದಾಗ ವೈದ್ಯರನ್ನು ಸಂಪರ್ಕಿಸಲು ಸೂಚಿಸುತ್ತಾರೆ.

ಜ್ವರ ಬಂದಾಗ ವೈದ್ಯರ ಬಳಿ ಹೋದಂತ ಸಂದರ್ಭದಲ್ಲಿ ಕೆಲವು ರೀತಿಯ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳದಂತೆ ಅವರು ಸೂಚಿಸುತ್ತಾರೆ. ಅಲ್ಲದೆ, ಜ್ವರ ಇದ್ದಂತ ಸಮಯದಲ್ಲಿ ಸಾಮಾನ್ಯವಾಗಿ ಏನನ್ನೂ ತಿನ್ನಲು ಸಹ ಇಷ್ಟವಾಗುವುದಿಲ್ಲ. ಏನೇ ತಿಂದರೂ ಅದು ರುಚಿಸುವುದಿಲ್ಲ. ಅಲ್ಲದೆ, ತಿಂದರೆ ಕಹಿ ಅನುಭವ ಸಹ ಆಗುತ್ತದೆ.

ಕಹಿ ಅಂತ ತಿನ್ನೋದನ್ನೇ ಬಿಟ್ಟುಬಿಡಬಾರದು. ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನೀವು ಉತ್ತಮ ಆಹಾರವನ್ನು ಸೇವಿಸಬೇಕು. ಅದೇ ರೀತಿ, ನೀವು ತಿನ್ನಬಾರದ ಕೆಲವು ಆಹಾರಗಳಿವೆ ಮತ್ತು ನೀವು ಮಾಡಬಾರದ ಕೆಲವು ವಿಷಯಗಳು ಸಹ ಇವೆ. ಅವುಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ಇದನ್ನೂ ಓದಿ: ರಜೆ ಕೊಡದಿದ್ದಕ್ಕೆ ಮೇಲಧಿಕಾರಿ ಸೇರಿ ನಾಲ್ವರು ಸಹೋದ್ಯಗಿಗಳಿಗೆ ಚಾಕು ಇರಿದ ಸರ್ಕಾರಿ ನೌಕರ! Govt Employee

ಜ್ವರ ಬಂದಾಗ ಯಾವುದೇ ಕಾರಣಕ್ಕೂ ನೀವು ತಣ್ಣೀರಿನಿಂದ ಸ್ನಾನ ಮಾಡಬಾರದು. ಏಕೆಂದರೆ, ತಣ್ಣೀರಿನ ಸ್ನಾನ ಒಳ್ಳೆಯದಲ್ಲ. ನೀವು ತಣ್ಣೀರಿನಲ್ಲಿ ಸ್ನಾನ ಮಾಡಿದರೆ, ನೀವು ನಡುಗಬಹುದು ಮತ್ತು ನಿಮ್ಮ ದೇಹದ ಉಷ್ಣತೆ ಇನ್ನಷ್ಟು ಕಡಿಮೆಯಾಗಬಹುದು. ಇದಿಷ್ಟೇ ಅಲ್ಲದೆ, ನೀವು ತಣ್ಣನೆಯ ಆಹಾರವನ್ನು ಸಹ ಸೇವಿಸಬಾರದು. ಅಂದರೆ, ಐಸ್ ಕ್ರೀಮ್​ನಂತಹ ವಸ್ತುಗಳು, ಸೋಡಾ ಹಾಗೂ ಆಲ್ಕೋಹಾಲ್ ಕುಡಿಯಬೇಡಿ. ಇದರೊಂದಿಗೆ ಕೆಫೀನ್ ಹೊಂದಿರುವ ಪಾನೀಯಗಳನ್ನು ಸಹ ಕುಡಿಯಬೇಡಿ. ಇವು ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು.

ಇನ್ನು ಜ್ವರ ಬಂದಾಗ ಅನೇಕ ಜನರು ಕಂಬಳಿ ಹಾಕಿಕೊಂಡು ಮಲಗುತ್ತಾರೆ. ಆದರೆ, ಆ ರೀತಿ ಮಾಡಬಾರದು. ಏಕೆಂದರೆ, ಕಂಬಳಿ ಹಾಕಿಕೊಂಡು ಮಲಗಿದರೆ ಅವರ ದೇಹದ ಉಷ್ಣತೆ ಇನ್ನೂ ಹೆಚ್ಚಾಗುತ್ತದೆ. ಇನ್ನು ಜ್ವರ ಕಡಿಮೆ ಮಾಡಲು ದೇಹಕ್ಕೆ ಶಕ್ತಿ ಮತ್ತು ಪೋಷಕಾಂಶಗಳು ಬೇಕಾಗುತ್ತವೆ. ಅದಕ್ಕಾಗಿಯೇ ಉತ್ತಮ ಪೌಷ್ಟಿಕಾಂಶವನ್ನು ಸೇವಿಸಬೇಕು. ಹಾಲು ಮತ್ತು ಹಣ್ಣುಗಳನ್ನು ತಿನ್ನುವುದು ಬಹಳ ಉತ್ತಮ. ಮಕ್ಕಳಿಗೆ ಜ್ವರ ಬಂದಾಗ, ಅವರು ಏನನ್ನೂ ತಿನ್ನುವುದಿಲ್ಲ. ಬಲವಂತವಾಗಿ ಕಡಿಮೆ ಪ್ರಮಾಣದಲ್ಲಿಯಾದರೂ, ಅವರಿಗೆ ಪೌಷ್ಟಿಕ ಆಹಾರವನ್ನು ನೀಡಬೇಕು. ದೇಹಕ್ಕೆ ಸರಿಯಾದ ರೀತಿಯಲ್ಲಿ ವಿಶ್ರಾಂತಿ ನೀಡದೆ ಆಯಾಸವನ್ನು ಉಂಟುಮಾಡುವ ಯಾವುದನ್ನೂ ಮಾಡಬಾರದು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ದಕ್ಷಿಣ ಕನ್ನಡದಲ್ಲಿ ದೆವ್ವದ ಕಾಟಕ್ಕೆ ಕಂಗಾಲಾದ ಕುಟುಂಬ: ಮೊಬೈಲ್​ ಕ್ಯಾಮೆರಾದಲ್ಲಿ ವಿಚಿತ್ರ ಮುಖ ಸೆರೆ! Ghost

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

Share This Article

ಈ ಬೇಸಿಗೆಯಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು ಗೊತ್ತಾ? Summer Clothes

Summer Clothes: ಬೇಸಿಗೆಯಲ್ಲಿ ಸುಡುವ ಬಿಸಿಲು ಮತ್ತು ಬೆವರಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಆಹಾರ ಕ್ರಮವನ್ನು ಬದಲಿಸಿಕೊಳ್ಳುತ್ತೇವೆ.…

ಹೆಚ್ಚಾದರೆ ದೇಹದ ಬೊಜ್ಜು ಭವಿಷ್ಯವಾದೀತು ನಜ್ಜುಗುಜ್ಜು

‘ಏನಾದ್ರೂ ಮಾಡಿ ಹೇಗಾದ್ರೂ ಮಾಡಿ ಸಾರ್, ಈ ಹೊಟ್ಟೆ ಕರಗಿ ಮೊದಲಿನಂತಾದರೆ ಸಾಕು. ನನಗಿನ್ನೂ ಮದುವೆಯಾಗಿಲ್ಲ.…

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…