blank

ರಜೆ ಕೊಡದಿದ್ದಕ್ಕೆ ಮೇಲಧಿಕಾರಿ ಸೇರಿ ನಾಲ್ವರು ಸಹೋದ್ಯಗಿಗಳಿಗೆ ಚಾಕು ಇರಿದ ಸರ್ಕಾರಿ ನೌಕರ! Govt Employee

Govt Employee

Govt Employee : ರಜೆಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ಸರ್ಕಾರಿ ನೌಕರನೊಬ್ಬ ತನ್ನ ಮೇಲಧಿಕಾರಿ ಸೇರಿದಂತೆ ನಾಲ್ವರಿಗೆ ಚಾಕು ಇರಿದಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಿನ್ನೆ (ಫೆ.06) ನಡೆದಿದೆ.

ಚಾಕು ಇರಿದ ಸರ್ಕಾರಿ ನೌಕರನನ್ನು ಅಮಿತ್​ ಕುಮಾರ್​ ಸರ್ಕಾರ್​ ಎಂದು ಗುರುತಿಸಲಾಗಿದೆ. ಈತ ಕೋಲ್ಕತದ ನ್ಯೂ ಟೌನ್ ಟೆಕ್ನಿಕಲ್ ಬಿಲ್ಡಿಂಗ್‌ನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ರಜೆಯ ಅವಶ್ಯಕತೆ ಇದ್ದ ಕಾರಣ ಅಮಿತ್​ ಸರ್ಕಾರ್, ರಜೆ ನೀಡುವಂತೆ ಮಾಡಿದ್ದರು. ಆದರೆ, ಅವರ ಮೇಲಧಿಕಾರಿ ರಜೆ ಅರ್ಜಿಯನ್ನು ತಿರಸ್ಕರಿಸಿದರು.

ಇದಾದ ಬಳಿಕ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ತಮ್ಮ ಕಚೇರಿಯೊಳಗೆ ಮೇಲಧಿಕಾರಿ ಹಾಗೂ ಸಹೋದ್ಯೋಗಿಗಳೊಂದಿಗೆ ವಾಗ್ವಾದ ನಡೆಸಿದರು. ಕೋಪದಲ್ಲಿ ತಾಳ್ಮೆ ಕಳೆದುಕೊಂಡ ಸರ್ಕಾರ್​, ಚಾಕುವಿನಿಂದ ದಾಳಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

ಈ ಘಟನೆಯಲ್ಲಿ ಅಮಿತ್ ಸರ್ಕಾರ್ ಅವರ ಕಚೇರಿಯ ಭದ್ರತಾ ಸಿಬ್ಬಂದಿಯೊಬ್ಬರು ಸಹ ಗಾಯಗೊಂಡಿದ್ದಾರೆ. ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಚಾಕುವನ್ನು ಕೆಳಗೆ ಎಸೆಯುವಂತೆ ಖಡಕ್​ ಸೂಚನೆ ನೀಡಿದರು. ಆದೇಶ ಪಾಲಿಸಿದ ಅಮಿತ್​ ಸರ್ಕಾರ್ ಚಾಕುವನ್ನು ಕೈಬಿಟ್ಟ ಬಳಿಕ ಆತನನ್ನು ಬಂಧಿಸಲಾಯಿತು.

ಇದನ್ನೂ ಓದಿ: ಇದು 1983ರ ವಿಶ್ವಕಪ್​ ಫೈನಲ್​ ನೆನಪಿಸಿತು; ಟೀಮ್ ಇಂಡಿಯಾ ಯುವ ಕ್ರಿಕೆಟಿಗನ ಆಟಕ್ಕೆ ರೈನಾ ಪ್ರಶಂಸೆ | IND vs ENG ODI

ಆರೋಪಿ ಸರ್ಕಾರ್ ಕೈಯಲ್ಲಿ ಚಾಕು, ಬೆನ್ನ ಹಿಂದೆ ಬ್ಯಾಗ್​ ಮತ್ತು ಇನ್ನೊಂದು ಕೈಯಲ್ಲಿ ಇನ್ನೊಂದು ಚೀಲ ಹಿಡಿದುಕೊಂಡು ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ. ದಾರಿಹೋಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆತನನ್ನು ಚಿತ್ರೀಕರಿಸುವಾಗ, ತನ್ನ ಹತ್ತಿರ ಬರದಂತೆ ಚಾಕು ತೋರಿಸಿ ಬೆದರಿಸುತ್ತಿರುವುದು ವಿಡಿಯೋದಲ್ಲಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತನ್ನ ಸಹೋದ್ಯೋಗಿಗಳು ತನ್ನ ತಂದೆಯ ಬಗ್ಗೆ ಅಸಭ್ಯವಾಗಿ ಮಾತನಾಡಿದರು. ಇದರಿಂದ ನನಗೆ ಕೋಪ ಬಂತು. ಹೀಗಾಗಿ ಚಾಕುವಿನಿಂದ ದಾಳಿ ಮಾಡಿದೆ ಎಂದು ಆರೋಪಿ ಸರ್ಕಾರ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆದಾಗ್ಯೂ, ಈ ಪ್ರಕರಣದಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳನ್ನು ತನಿಖಾ ಸಂಸ್ಥೆಗಳು ಇನ್ನೂ ಪರಿಶೀಲಿಸಬೇಕಾಗಿದೆ. ಚಾಕುವಿನ ಮೂಲ ಮತ್ತು ಅದನ್ನು ಹೇಗೆ ಪಡೆದುಕೊಂಡನು? ಆರೋಪಿಗೆ ಮಾನಸಿಕ ಸಮಸ್ಯೆಗಳೇನಾದರೂ ಇದೆಯೇ? ಎಂಬ ಆಯಾಮದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

ದಕ್ಷಿಣ ಕನ್ನಡದಲ್ಲಿ ದೆವ್ವದ ಕಾಟಕ್ಕೆ ಕಂಗಾಲಾದ ಕುಟುಂಬ: ಮೊಬೈಲ್​ ಕ್ಯಾಮೆರಾದಲ್ಲಿ ವಿಚಿತ್ರ ಮುಖ ಸೆರೆ! Ghost

Share This Article

ನಾನ್​ವೆಜ್​ ಪ್ರಿಯರಿಗೆ ಶಾಕಿಂಗ್​ ನ್ಯೂಸ್​: ವಾರಕ್ಕೆ 300 ಗ್ರಾಂ ಚಿಕನ್ ತಿಂದ್ರೆ ಈ ಕಾಯಿಲೆ​ ಬರೋ ಸಾಧ್ಯತೆ ಇದೆ! Chicken

Chicken : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…

ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು ಕಾರಣವೇನು? mobile ಸುರಕ್ಷಿತವಾಗಿ ಬಳಸುವುದು ಹೇಗೆ?

mobile: ಮೊಬೈಲ್ ಫೋನ್‌ಗಳು ನಮ್ಮ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿ ಮಾರ್ಪಟ್ಟಿವೆ. ಮೊಬೈಲ್ ಫೋನ್ ಸ್ಫೋಟಗಳು…