ಈತನೇ ಈ ಬಾರಿಯ ಅತ್ಯಂತ ದುಬಾರಿ ಆಟಗಾರ... ಹತ್ತು ಐಪಿಎಲ್​ ತಂಡಗಳ ರಿಟೇನ್​ ಪಟ್ಟಿ ಹೀಗಿದೆ... IPL Retention List

IPL Retention List
Published on

IPL Retention List : ಸದ್ಯ ಕ್ರೀಡಾಭಿಮಾನಿಗಳ ಕುತೂಹಲ ಇಂಡಿಯನ್ ಪ್ರೀಮಿಯರ್ ಲೀಗ್-2025 ನ ರಿಟೇನ್​ ಪಟ್ಟಿ ಮೇಲಿದೆ. ಕ್ರಿಕೆಟ್ ವಲಯದಲ್ಲಿ ರಿಟೇನ್​ ಪಟ್ಟಿ ಹಾಟ್ ಟಾಪಿಕ್ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯು ಉಳಿಸಿಕೊಳ್ಳಲು ಬಯಸುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಅಕ್ಟೋಬರ್ 31 ರವರೆಗೆ ಸಮಯವನ್ನು ನೀಡಿತ್ತು. ಆ ಸಮಯ ಬಂದೇ ಬಿಟ್ಟಿದೆ. ಇಂದು ಸಂಜೆ 5 ಗಂಟೆಯೊಳಗೆ ಎಲ್ಲ ತಂಡಗಳು ತಮ್ಮ ತಮ್ಮ ರಿಟೇನ್​ ಪಟ್ಟಿಯನ್ನು ಸಲ್ಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಹತ್ತು ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರನ್ನು ಈಗಾಗಲೇ ಅಂತಿಮಗೊಳಿಸಿವೆ ಎಂದು ತಿಳಿದುಬಂದಿದೆ.

ರಿಟೇನ್​ ಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಂಡಿದೆ ಮತ್ತು ಯಾರನ್ನು ಕೈಬಿಟ್ಟಿದೆ ಎಂಬುದರ ಕುರಿತು ಊಹಾಪೋಹಗಳು ಕೂಡ ಹರಿದಾಡುತ್ತಿದೆ. ಅಲ್ಲದೆ, ಈ ಬಾರಿ ಆಟಗಾರರ ಮೇಲೆ ಐಪಿಎಲ್​ ಫ್ರಾಂಚೈಸಿಗಳು ಕೋಟಿಗಟ್ಟಲೆ ಹಣ ಸುರಿಯಲಿದ್ದಾರೆ ಎಂಬ ನಿರೀಕ್ಷೆಯನ್ನು ಕ್ರಿಕೆಟ್​ ಉತ್ಸಾಹಿಗಳು ವ್ಯಕ್ತಪಡಿಸುತ್ತಿದ್ದಾರೆ. ಯಾವ ತಂಡ ಯಾರನ್ನು ಉಳಿಸಿಕೊಂಡಿದೆ? ಎಷ್ಟು ಹಣ ವ್ಯಯಿಸಿದೆ? ಜೇಬಿನಲ್ಲಿ ಎಷ್ಟು ಹಣ ಉಳಿದಿದೆ? ದುಬಾರಿ ಆಟಗಾರನ್ಯಾರು? ಎಂಬಿತ್ಯಾದಿ ವಿಷಯಗಳ ಬಗ್ಗೆ ಅಂದಾಜು ಮಾಹಿತಿ ಇಲ್ಲಿದೆ.

ಅದಕ್ಕೂ ಮುನ್ನ IPL-2025 ಮೆಗಾ ಹರಾಜಿಗೆ BCCIಯ ರಿಟೇನ್​ ಪಾಲಿಸಿ ಏನಿದೆ ಎಂಬುದರ ಬಗ್ಗೆ ನಾವು ತಿಳಿದುಕೊಳ್ಳೋಣ. ನಿಯಮಗಳ ಪ್ರಕಾರ ಈ ಬಾರಿ ಪ್ರತಿ ತಂಡಗಳ ಬಜೆಟ್​ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್​ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್​ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್​ ಮಾಡಿದರೆ, ಹರಾಜಿನಲ್ಲಿ 3 ಆರ್​ಟಿಎಂ ಬಳಸಬಹುದಾಗಿದೆ. 4 ಆಟಗಾರರ ರಿಟೇನ್​ ಮಾಡಿದರೆ 2 ಆರ್​ಟಿಎಂ ಬಳಸಬಹುದು. ಆರ್​ಟಿಎಂ ಪ್ರಕಾರ ಹರಾಜಿನಲ್ಲಿ ಆಟಗಾರನೊಬ್ಬನಿಗೆ ತಂಡವೊಂದು ಗರಿಷ್ಠ ಮೊತ್ತದ ಬಿಡ್​ ಸಲ್ಲಿಸಿದಾಗ ಆತನ ಮೂಲ ತಂಡ ಆರ್​ಟಿಎಂ ಮೂಲಕ ಅದೇ ಮೊತ್ತಕ್ಕೆ ತನ್ನಲ್ಲಿಯೇ ಉಳಿಸಿಕೊಳ್ಳಬಹುದಾಗಿದೆ. 5+1 ಆಟಗಾರರ ರಿಟೇನ್​ಗೆ ಬಿಸಿಸಿಐ ಅವಕಾಶ ಕಲ್ಪಿಸಿರುವುದರಿಂದ, ಇದು ಐಪಿಎಲ್​ ಇತಿಹಾಸದಲ್ಲೇ ಗರಿಷ್ಠ ಆಟಗಾರರ ರಿಟೇನ್​ ಅವಕಾಶವಾಗಿದೆ. 2018ರ ಮೆಗಾ ಹರಾಜಿಗೆ ಮುನ್ನ 5 ಆಟಗಾರರ ರಿಟೇನ್​ಗೆ ಅವಕಾಶ ನೀಡಿದ್ದು ಇದುವರೆಗಿನ ಗರಿಷ್ಠವಾಗಿತ್ತು.

ಕೆಲವು ತಂಡಗಳು ಕೆಲವು ಆಟಗಾರರನ್ನು ಬಿಡಲು ಸಿದ್ಧವಾಗಿಲ್ಲ. ಅಲ್ಲದೆ, ಅವರ ಬೇಡಿಕೆಗೆ ಅನುಗುಣವಾಗಿ ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇಂತಹ ಫ್ರಾಂಚೈಸಿಗಳಿಗೆ ಬಿಸಿಸಿಐ ಸಡಿಲಿಕೆ ನೀಡಿದೆ. ಅವರು ಉಳಿಸಿಕೊಳ್ಳಲು ಬಯಸುವ ಮೊದಲ ಐದು ಕ್ರಿಕೆಟಿಗರಿಗೆ, ಅವರು ಗರಿಷ್ಠ ಮಿತಿ 75 ಕೋಟಿ ರೂ.ವರೆಗೂ ಖರ್ಚು ಮಾಡಬಹುದು. ನಾವೀಗ ಎಲ್ಲ ಐಪಿಎಲ್​ ಫ್ರಾಂಚೈಸಿಗಳ​ ರಿಟೇನ್​ ಅಂದಾಜು ಪಟ್ಟಿಯನ್ನು ನೋಡೋಣ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು

1. ವಿರಾಟ್ ಕೊಹ್ಲಿ : 18 ಕೋಟಿ ರೂಪಾಯಿ

2. ಫಾಫ್ ಡುಪ್ಲೆಸಿಸ್ : 14 ಕೋಟಿ ರೂಪಾಯಿ

3. ಮೊಹಮ್ಮದ್ ಸಿರಾಜ್ : 11 ಕೋಟಿ ರೂಪಾಯಿ

4. ಯಶ್ ದಯಾಳ್ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

5. ಅನುಜ್ ರಾವತ್ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

* ಆರ್​ಟಿಎಂ ಕಾರ್ಡ್​ ಹಕ್ಕು

* ವಾಲೆಟ್‌ನಲ್ಲಿ ಉಳಿದಿರುವ ಹಣ: 69 ಕೋಟಿ ರೂಪಾಯಿ

ಮುಂಬೈ ಇಂಡಿಯನ್ಸ್

1. ಹಾರ್ದಿಕ್ ಪಾಂಡ್ಯ : 18 ಕೋಟಿ ರೂಪಾಯಿ

2. ಜಸ್ಪ್ರೀತ್ ಬುಮ್ರಾ : 14 ಕೋಟಿ ಕೋಟಿ ರೂಪಾಯಿ

3. ತಿಲಕ್ ವರ್ಮಾ : 11 ಕೋಟಿ ಕೋಟಿ ರೂಪಾಯಿ

4. ಸೂರ್ಯಕುಮಾರ್ ಯಾದವ್ : 18 ಕೋಟಿ ಕೋಟಿ ರೂಪಾಯಿ

5. ನಮನ್ ಧೀರ್ (ಅನ್‌ಕ್ಯಾಪ್ಡ್) : 4 ಕೋಟಿ ಕೋಟಿ ರೂಪಾಯಿ

6. ಆಕಾಶ್ ಮಧ್ವಲ್ (ಅನ್‌ಕ್ಯಾಪ್ಡ್) : 4 ಕೋಟಿ ಕೋಟಿ ರೂಪಾಯಿ

* ಪರ್ಸ್‌ನಲ್ಲಿ ಉಳಿದಿರುವ ಮೊತ್ತ: 51 ಕೋಟಿ ರೂಪಾಯಿ

ಕೋಲ್ಕತ್ತ ನೈಟ್ ರೈಡರ್ಸ್

1. ಶ್ರೇಯಸ್ ಅಯ್ಯರ್ : 18 ಕೋಟಿ ರೂಪಾಯಿ

2. ಸುನಿಲ್ ನಾರಾಯಣ್ : 14 ಕೋಟಿ ರೂಪಾಯಿ

3. ರಿಂಕು ಸಿಂಗ್ : 11 ಕೋಟಿ ರೂಪಾಯಿ

4. ಆಂಡ್ರೆ ರಸೆಲ್ : 18 ಕೋಟಿ ರೂಪಾಯಿ

5. ಹರ್ಷಿತ್ ರಾಣಾ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

6. ಆಂಗ್ಕ್ರಿಶ್ ರಘುವಂಶಿ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

* ಪರ್ಸ್‌ನಲ್ಲಿ ಉಳಿದಿರುವ ಹಣ: 55 ಕೋಟಿ ರೂಪಾಯಿ

ಚೆನ್ನೈ ಸೂಪರ್​​ ಕಿಂಗ್ಸ್​

1. ರುತುರಾಜ್ ಗಾಯಕವಾಡ್​ : 18 ಕೋಟಿ ರೂಪಾಯಿ

2. ಮತೀಶ ಪತಿರಾಣ : 14 ಕೋಟಿ ರೂಪಾಯಿ

3. ರಚಿನ್ ರವೀಂದ್ರ : 11 ಕೋಟಿ ರೂಪಾಯಿ

4. ರವೀಂದ್ರ ಜಡೇಜಾ : 18 ಕೋಟಿ ರೂಪಾಯಿ

5. ಎಂಎಸ್ ಧೋನಿ (ಅನ್‌ಕ್ಯಾಪ್ಡ್- ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟಿಗ) : 4 ಕೋಟಿ ರೂಪಾಯಿ

* ಆರ್​ಟಿಎಂ ಕಾರ್ಡ್  ಹಕ್ಕು

* ವಾಲೆಟ್‌ನಲ್ಲಿ ಉಳಿದಿರುವ ಹಣ: 51 ಕೋಟಿ ರೂಪಾಯಿ

ರಾಜಸ್ಥಾನ ರಾಯಲ್ಸ್​

1. ಸಂಜು ಸ್ಯಾಮ್ಸನ್ : 18 ಕೋಟಿ ರೂಪಾಯಿ

2. ಜಾಸ್ ಬಟ್ಲರ್ : 14 ಕೋಟಿ ರೂಪಾಯಿ

3. ರಿಯಾನ್ ಪರಾಗ್ : 11 ಕೋಟಿ ರೂಪಾಯಿ

4. ಯಶಸ್ವಿ ಜೈಸ್ವಾಲ್ : 18 ಕೋಟಿ ರೂಪಾಯಿ

5. ಸಂದೀಪ್ ಶರ್ಮಾ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

* ಆರ್​ಟಿಎಂ ಹಕ್ಕು

* ಪರ್ಸ್​ನಲ್ಲಿ ಉಳಿದಿರುವ ಹಣ : 55 ಕೋಟಿ ರೂಪಾಯಿ

ಲಖನೌ ಸೂಪರ್‌ಜೈಂಟ್ಸ್

1. ನಿಕೋಲಸ್ ಪೂರನ್ : 18 ಕೋಟಿ ರೂಪಾಯಿ

2. ಮಾರ್ಕಸ್ ಸ್ಟೊಯಿನಿಸ್ : 14 ಕೋಟಿ ರೂಪಾಯಿ

3. ಮಯಾಂಕ್ ಯಾದವ್ : 11 ಕೋಟಿ ರೂಪಾಯಿ

4. ಆಯುಷ್ ಬಡೋನಿ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

5. ಮೊಹ್ಸಿನ್ ಖಾನ್ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

* ಆರ್​ಟಿಎಂ ಕಾರ್ಡ್ ಹೊಂದುವ ಹಕ್ಕು

* ವಾಲೆಟ್‌ನಲ್ಲಿ ಉಳಿದಿರುವ ಮೊತ್ತ: 69 ಕೋಟಿ ರೂಪಾಯಿ

ಪಂಜಾಬ್​ ಕಿಂಗ್ಸ್​

1. ಅರ್ಷದೀಪ್ ಸಿಂಗ್ : 18 ಕೋಟಿ ರೂಪಾಯಿ

2. ಸ್ಯಾಮ್ ಕರಣ್ : 14 ಕೋಟಿ ರೂಪಾಯಿ

3. ಕಾಗಿಸೊ ರಬಾಡ : 11 ಕೋಟಿ ರೂಪಾಯಿ

4. ಅಶುತೋಷ್ ಶರ್ಮಾ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

5. ಪ್ರಭಾಸಿಮ್ರಾನ್ ಸಿಂಗ್ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

* ಆರ್​ಟಿಎಂ ಕಾರ್ಡ್ ಹೊಂದುವ ಹಕ್ಕು

* ವಾಲೆಟ್‌ನಲ್ಲಿ ಉಳಿದಿರುವ ಹಣ: 69 ಕೋಟಿ ರೂಪಾಯಿ

ಡೆಲ್ಲಿ ಕ್ಯಾಪಿಟಲ್ಸ್​

1. ರಿಷಭ್​ ಪಂತ್ : 18 ಕೋಟಿ ರೂಪಾಯಿ

2. ಅಕ್ಷರ್ ಪಟೇಲ್ : 14 ಕೋಟಿ ರೂಪಾಯಿ

3. ಕುಲದೀಪ್ ಯಾದವ್ : 11 ಕೋಟಿ ರೂಪಾಯಿ

4. ರಸಿಖ್ ಸಲಾಮ್ ದಾರ್ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

5. ಅಭಿಷೇಕ್ ಪೊರೆಲ್ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

* ಆರ್​ಟಿಎಂ ಕಾರ್ಡ್ ಹೊಂದುವ ಹಕ್ಕು

ವಾಲೆಟ್‌ನಲ್ಲಿ ಉಳಿದಿರುವ ಹಣ: 69 ಕೋಟಿ ರೂಪಾಯಿ

ಸನ್​ ರೈಸರ್ಸ್​ ಹೈದರಾಬಾದ್​

1. ಹೆನ್ರಿಕ್ ಕ್ಲಾಸೆನ್ : 23 ಕೋಟಿ ರೂಪಾಯಿ (ಸದ್ಯದ ಮಾಹಿತಿಯ ಪ್ರಕಾರ ಈ ಬಾರಿಯ ರಿಟೇನ್ ಪಟ್ಟಿಯಲ್ಲಿ ಅತ್ಯಂತ ದುಬಾರಿ ಆಟಗಾರ)

2. ಪ್ಯಾಟ್ ಕಮ್ಮಿನ್ಸ್ : 18 ಕೋಟಿ ರೂಪಾಯಿ

3. ಅಭಿಷೇಕ್ ಶರ್ಮಾ : 14 ಕೋಟಿ ರೂಪಾಯಿ

4. ಟ್ರಾವಿಸ್ ಹೆಡ್ : 14 ಕೋಟಿ ರೂಪಾಯಿ

5. ನಿತೀಶ್ ರೆಡ್ಡಿ : 6 ಕೋಟಿ ರೂಪಾಯಿ

* ಆರ್​ಟಿಎಂ ಕಾರ್ಡ್ ಹೊಂದುವ ಹಕ್ಕು

* ವಾಲೆಟ್‌ನಲ್ಲಿ ಉಳಿದಿರುವ ಹಣ: 45 ಕೋಟಿ ರೂಪಾಯಿ

ಗುಜರಾತ್​ ಟೈಟಾನ್ಸ್​

1. ಶುಭಮನ್ ಗಿಲ್​ : 18 ಕೋಟಿ ರೂಪಾಯಿ

2. ಮೊಹಮ್ಮದ್ ಶಮಿ/ಡೇವಿಡ್ ಮಿಲ್ಲರ್ : 14 ಕೋಟಿ ರೂಪಾಯಿ

3. ಸಾಯಿ ಸುದರ್ಶನ್ : 11 ಕೋಟಿ ರೂಪಾಯಿ

4. ರಶೀದ್ ಖಾನ್ : 18 ಕೋಟಿ ರೂಪಾಯಿ

5. ರಾಹುಲ್ ತೆವಾಟಿಯಾ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

6. ಮೋಹಿತ್ ಶರ್ಮಾ (ಅನ್‌ಕ್ಯಾಪ್ಡ್) : 4 ಕೋಟಿ ರೂಪಾಯಿ

* ಪರ್ಸ್‌ನಲ್ಲಿ ಉಳಿದಿರುವ ಹಣ: 51 ಕೋಟಿ ರೂಪಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net