ನನ್ನ ಮನೆಗೆ ನುಗ್ಗಿ ಬಲವಂತವಾಗಿ ಮಗಳಿಗೆ ತಾಳಿ ಕಟ್ಟೇಬಿಟ್ಟ: ಪ್ಲೀಸ್​.. ನನ್ನ ಮಗಳನ್ನು ಕಾಪಾಡಿ...

Marriage-2
Published on

ಹಾಸನ: ನನ್ನ ಮಗಳಿಗೆ ಇಷ್ಟವಿಲ್ಲದಿದ್ದರೂ ಬೆದರಿಸಿ ಮದುವೆಯಾಗಿದ್ದಾನೆ. ಬಲವಂತವಾಗಿ ಮದುವೆ ಆಗಿದ್ದಕ್ಕೆ ಆಕೆ ವಿಷ ಸೇವಿಸಿದ್ದಾಳಂತೆ. ಈಗ ಆಕೆ ಎಲ್ಲಿದ್ದಾಳೆಂದು ಗೊತ್ತಿಲ್ಲ. ದಯವಿಟ್ಟು ನನ್ನ ಮಗಳನ್ನ ಹುಡುಕಿ ಕೊಡಿ, ಆಕೆ ಎಲ್ಲೇ ಇದ್ದರೂ ಚೆನ್ನಾಗಿರಬೇಕು... ಎಂದು ಯುವತಿಯ ತಾಯಿ ಗೋಳಾಡಿದ್ದಾರೆ.

ಬೇರೊಬ್ಬನ ಜತೆ ಮದುವೆ ನಿಶ್ಚಯವಾಗಿದ್ದ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ಮಧುಮಗಳ ಮನೆಗೆ ಸ್ನೇಹಿತರೊಂದಿಗೆ ಬಂದ ಅರೆಕೆರೆ ಗ್ರಾಮದ ಸತೀಶ್ ಎಂಬಾತ ಆಕೆಗೆ ತಾಳಿ ಕಟ್ಟಿದ್ದ ಪ್ರಕರಣ ಇದು. ನನ್ನ ಮಗಳನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಮನೆಗೆ ನುಗ್ಗಿದ ಆತ ಬೆದರಿಸಿ ತಾಳಿಕಟ್ಟಿ ಕರೆದೊಯ್ದಿದ್ದಾನೆ ಎಂದು ಯುವತಿ ಪಾಲಕರು ಸಕಲೇಶಪುರ ನಗರ ಠಾಣೆ ಮೆಟ್ಟಿಲೇರಿದ್ದರು. ಇದೀಗ ಆ ಯುವತಿ ವಿಷ ಸೇವಿಸಿದ್ದಾಳಂತೆ! ಇದನ್ನೂ ಓದಿರಿ ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಜಿತ್ ಕೃಷ್ಣ ಎಂಬಾತನ ಜತೆ ಯುವತಿಗೆ ಮದುವೆ ನಿಶ್ಚಯವಾಗಿದೆ. ಜನವರಿ 25ರಂದು ನಿಗಧಿಯಾಗಿರುವ ಮದುವೆಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಅಷ್ಟರಲ್ಲಿ ಯುವತಿ ಮನೆಗೆ ಅಂದ್ರೆ .21ರಂದು ಎಂಟ್ರಿಕೊಟ್ಟ ಸತೀಶ್​ ಎಂಬಾತ, ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಬೆದರಿಸಿ ತಾಳಿಕಟ್ಟಿ ಕರೆದೊಯ್ದ. ನನ್ನ ಮಗಳ ಪ್ರಾಣಕ್ಕೆ ಬೆದರಿಕೆ ಇದೆ, ಆಕೆಯನ್ನು ರಕ್ಷಿಸಿ ಎಂದು ಪೊಲೀಸರ ಮೊರೆ ಹೋಗಿದ್ದರು.

ಇಂದು ಬೆಳಗ್ಗೆ ಯುವಕ ಸತೀಶ್​ ಮನೆ ಬಳಿಗೆ ಮಗಳನ್ನು ನೋಡಲೆಂದು ಆಕೆ ಪಾಲಕರು ಹೋಗಿದ್ದು. ಅಲ್ಲಿ ಯುವತಿ ಮತ್ತು ಸತೀಶ್​ ಇರಲಿಲ್ಲ. ಆಕೆಯ ಫೋನ್ ಸ್ವಿಚ್ ಆಪ್ ಆಗಿದೆ. ಸತೀಶ್​ ಫೋನ್ ರಿಸೀವ್​ ಮಾಡುತ್ತಿಲ್ಲ. ನಿಮ್ಮ ಮಗಳು ವಿಷ ಸೇವಿಸಿದ್ದಾಳೆಂದು ಪಕ್ಕದ ಮನೆಯವರು ನಮಗೆ ಹೇಳಿದರು ಎಂದು ವಿವರಿಸಿದ ಯುವತಿಯ ತಾಯಿ ಲತಾ, ನನ್ನ ಮಗಳು ಎಲ್ಲಿದ್ದಾಳೆಂದು ಗೊತ್ತಿಲ್ಲ. ಬಲವಂತದ ಮದುವೆಯಿಂದ ಆತನ ಮನೆಯಲ್ಲಿ ಮಗಳು ವಿಷ ಸೇವಿಸಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ದಯವಿಟ್ಟು ನನ್ನ ಮಗಳನ್ನು ಹುಡುಕಿಕೊಡಿ. ಆಕೆ ಎಲ್ಲಿದ್ದರೂ ಚೆನ್ನಾಗಿರಲಿ ಎಂದು ಪೊಲೀಸರನ್ನ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net