OnlyFans: ಹಾಲಿವುಡ್ನ ಅದ್ಭುತ ಹಾಗೂ ಜನಪ್ರಿಯ ‘ಹ್ಯಾರಿ ಪಾಟರ್’ನ ಕೆಲವು ಸರಣಿಗಳಲ್ಲಿ ಅಭಿನಯಿಸಿರುವ ನಟಿ ಜೆಸ್ಸಿ ಕೇವ್, ತಾವು ತೆಗೆದುಕೊಂಡ ಒಂದು ಕಟು ನಿರ್ಧಾರದಿಂದ ಆದ ಅವಾಂತರವನ್ನು ಇದೀಗ ಪರಿ ಪರಿಯಾಗಿ ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಾಗಿಣಿ ಪ್ಲೇಯಿಂಗ್ 11 ! 6 ಭಾಷೆಗಳ 11 ಸಿನಿಮಾಗಳಲ್ಲಿ ಬಿಜಿಯಾದ ಸ್ಯಾಂಡಲ್ವುಡ್ ನಟಿ
ಹ್ಯಾರಿ ಪಾಟರ್ ಸಿನಿಮಾದಲ್ಲಿ ಲಾವೆಂಡರ್ ಬ್ರೌನ್ ಎಂಬ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೆಸ್ಸಿ, ಈ ವರ್ಷದ ಆರಂಭದಲ್ಲಿ ‘ಓನ್ಲಿ ಫ್ಯಾನ್ಸ್’ ಎಂಬ ವಯಸ್ಕರ ಜಾಲತಾಣ ಆ್ಯಪ್ಗೆ ಸೇರಿದ್ದರು. ಇದಕ್ಕೆ ಸೇರುವ ಉದ್ದೇಶವನ್ನು ಮೊದಲೇ ಸ್ಪಷ್ಟಪಡಿಸಿದ್ದ ನಟಿ, ‘ತನಗೆ ಸಾಲ ತೀರಿಸುವ ಅಗತ್ಯತೆ ಮತ್ತು ಅನಿವಾರ್ಯತೆ ಎದುರಾಗಿದೆ. ಹೀಗಿರುವ ಕಾರಣ ಅದೊಂದು ಉದ್ದೇಶದಲ್ಲಿ ಈ ಜಾಲತಾಣಕ್ಕೆ ಬಂದಿರುವೆ. ಇಲ್ಲಿ ನಾನು ಲೈಂಗಿಕತೆ ಪ್ರದರ್ಶಿಸುವುದು ಅಥವಾ ಬೆಂಬಲಿಸುವ ಕೆಲಸ ಮಾಡೋದಿಲ್ಲ’ ಎಂದು ಹೇಳಿ ಶುರು ಮಾಡಿದ್ದರು.
ತನ್ನ ಉದ್ದೇಶವನ್ನು ಮೊದಲೇ ಸ್ಪಷ್ಟ ಹಾಗೂ ಗಟ್ಟಿಯಾಗಿ ಹೇಳಿದ್ದರೂ ಕೆಲವರು ನಿಮ್ಮ ಎದೆ ಭಾಗ ಸೇರಿದಂತೆ ದೇಹದ ಖಾಸಗಿ ಅಂಗಗಳನ್ನು ಪ್ರದರ್ಶಿಸಿ ಎಂದು ನಟಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆ. ಇಷ್ಟೇ ಅಲ್ಲದೆ ಅಂತಹ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರಿಂದ ತೀರ ಬೇಸರಗೊಂಡ ಜೆಸ್ಸಿ, ಕಡೆಗೂ ಓನ್ಲಿ ಫ್ಯಾನ್ಸ್ ಎಂಬ ಫ್ಲಾಟ್ಫಾರ್ಮ್ನಿಂದ ಹೊರ ನಡೆದಿದ್ದಾರೆ.
ಇದನ್ನೂ ಓದಿ: ಈ ವಾರ ಒಟಿಟಿಗೆ ಎಂಟ್ರಿಕೊಟ್ಟ 24 ಚಿತ್ರಗಳಿವು! ಯಾವೆಲ್ಲ ಸಿನಿಮಾಗಳು ತೆರೆಕಂಡಿವೆ? ಇಲ್ಲಿದೆ ಪಟ್ಟಿ | OTT Films
ಈ ಬಗ್ಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದ ಜೆಸ್ಸಿ, “ನಿಜಕ್ಕೂ ಇದು ಅಸಹ್ಯಕರ. ಇಲ್ಲಿ ನನಗೆ ಅನೇಕರು ತುಂಬಾ ಅಸಭ್ಯ, ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದಾರೆ. ನಾನು ಮಾಡಲು ಬಯಸದ ವಿಡಿಯೊಗಳನ್ನು ಹಾಕುವಂತೆ ಒತ್ತಾಯಿಸುತ್ತಾರೆ. ಲೈಂಗಿಕ ವಿಷಯಕ್ಕೆ ಸಂಬಂಧಿಸಿದಂತೆ ಏನ್ನನ್ನೂ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ನಿಮ್ಮ ದೇಹದ ಅಂಗಾಂಗಳು ಮತ್ತು ಖಾಸಗಿ ದೃಶ್ಯಗಳನ್ನು ಹಂಚಿಕೊಳ್ಳುವಂತೆ ಕೇಳುತ್ತಾರೆ. ಇದನ್ನೂ ಮಾಡದ್ದಕ್ಕೆ ಸಬ್ಸ್ಕ್ರೈಬರ್ಸ್ ಅಕೌಂಟ್ ಬಿಟ್ಟು ಹೋಗ್ತಾರೆ” ಎಂದಿದ್ದಾರೆ.
“ನಟಿ ಮತ್ತು ಬರಹಗಾರ್ತಿಯಾಗಿ ಕಳೆದ 18 ವರ್ಷಗಳಲ್ಲಿ ನಾನು ಮಾಡಿದ ಸಾಧನೆಯೇನು? ಸಂಪಾದಿಸಿದ್ದೇನು? ಎಂದು ಹೇಳಿಕೊಳ್ಳಲು ಅಥವಾ ತೋರಿಸಲು ನನ್ನ ಬಳಿ ಏನೂ ಉಳಿದಿಲ್ಲ. ನನ್ನ ಬಳಿಯಿದ್ದ ಹಣವೆಲ್ಲ ಮನೆ ಬಾಡಿಗೆ ಕಟ್ಟಲು ಮತ್ತು ಯುಟ್ಯೂಬ್ ವಿಡಿಯೋಗಳಿಗೆ ಖರ್ಚಾಯಿತು” ಎಂದು ಸಾಮಾಜಿಕ ಜಾಲತಾಣ ಖಾತೆ ‘ಸಬ್ಸ್ಟಾಕ್’ನಲ್ಲಿ ವಿವರವಾಗಿ ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).
ಇದನ್ನೂ ಓದಿ: ಗುತ್ತಿಗೆದಾರರಿಂದ ಬಿಬಿಎಂಪಿ ಮುಖ್ಯ ಆಯುಕ್ತರ ಭೇಟಿ: ಅಧಿಕಾರಿಗಳ ಸಮ್ಮುಖದ ಸಭೆಗೆ ಒತ್ತಾಯ
ಏನಿದು ‘ಓನ್ಲಿಫ್ಯಾನ್ಸ್’
ಇದೊಂದು ವಯಸ್ಕರ ಫ್ಲಾಟ್ಫಾರ್ಮ್ ಆಗಿದ್ದು, ಇಲ್ಲಿ ಜಾಗತಿಕ ಬಳಕೆದಾರರು ಲಭ್ಯವಿದ್ದಾರೆ. ಯಾರು ಬೇಕಾದರೂ ಇಲ್ಲಿ ತಮ್ಮದೊಂದು ಖಾತೆಯನ್ನು ತೆರೆದು, ತಮಗೆ ಅನಿಸಿದ ವಿಷಯವನ್ನು ಹಂಚಿಕೊಳ್ಳಬಹುದಾಗಿದೆ. ಎಲ್ಲಾ ಹೊಸ ಹೊಸ ವಿಷಯಕ್ಕೂ ಜಾಗವಿದ್ದರೂ ಬಳಕೆದಾರರು ಆಸಕ್ತಿ ತೋರುವುದು ಮಾತ್ರ ಲೈಂಗಿಕತೆಗೆ. ತಮ್ಮ ಅಕೌಂಟ್ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳುವ ಫ್ಯಾನ್ಸ್ಗೆ ಖಾಸಗಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಇದು ಫ್ಯಾನ್ಸ್ ಮತ್ತು ಆ ಖಾತೆಯ ಹ್ಯಾಂಡಲ್ ಮಾಡುವ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಹೊರಗಿನವರಿಗೆ ಕಾಣಿಸುವುದಿಲ್ಲ. ದೃಶ್ಯ ಹಂಚಿಕೊಳ್ಳುವ ವ್ಯಕ್ತಿ ಮತ್ತು ಫ್ಯಾನ್ಸ್ಗಳ ನಡುವೆ ಪಾರದರ್ಶಕತೆ ಇರುತ್ತದೆ. ಓನ್ಲಿಫ್ಯಾನ್ಸ್‌ನಲ್ಲಿ ಶೇ.98ರಷ್ಟು ವಯಸ್ಕರ ವಿಷಯವೇ ತುಂಬಿದೆ ಎಂಬುದು ಗಮನಾರ್ಹ,(ಏಜೆನ್ಸೀಸ್).
ಮುಂದಿನ 2 ದಿನಗಳ ಕಾಲ ಭಾರೀ ಮಳೆ! ಈ 13 ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ | IMD Alert