IMD Alert: ಪ್ರತಿ ವರ್ಷಕ್ಕಿಂತ ಈ ವರ್ಷ ವಾಡಿಕೆಗೂ ಮೊದಲೇ ಮುಂಗಾರು ಪ್ರವೇಶಿಸಲಿದ್ದು, ಈಗಾಗಲೇ ಹಲವು ರಾಜ್ಯಗಳಲ್ಲಿ ಬಿರುಸಿನ ಮಳೆ ಸುರಿಯಲಾರಂಭಿಸಿದೆ. ಈ ಮಧ್ಯೆ ಹವಾಮಾನ ಇಲಾಖೆಯಿಂದ ಹೊಸ ಪ್ರಕಟಣೆಯೊಂದು ಹೊರಬಿದ್ದಿದೆ.

ಇದನ್ನೂ ಓದಿ: ಪ್ರೇಯಸಿಯ ಪೋಷಕರಿಂದ ತಿರಸ್ಕಾರ! ದ್ವೇಷದ ಕಿಚ್ಚಿಗೆ ಹಾರಿಹೋಯ್ತು ಅಮಾಯಕನ ಪ್ರಾಣ | Grudge
ಬಂಗಾಳ ಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯಗಳಿಂದ ಮುಂಗಾರಿನ ಪ್ರವೇಶ ಶೀಘ್ರವೇ ಆಗಲಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಅವಧಿಗೂ ಮೊದಲೇ ಭಾರೀ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಹಲವು ಮರಗಳು ಧರೆಗೆ ಉರುಳಿ, ಪ್ರಾಣಹಾನಿ ಸಂಭವಿಸಿದೆ.
13 ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ
ಮೇ.17 ಮತ್ತು 18ರಂದು ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ತ್ರಿಪುರ, ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು ಪುದುಚೆರಿ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಶನಿವಾರ ಮತ್ತು ಭಾನುವಾರ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).
ಐಎಂಡಿ ಪ್ರಕಟಣೆ ಲಿಂಕ್:
ಪ್ರೇಯಸಿಯ ಪೋಷಕರಿಂದ ತಿರಸ್ಕಾರ! ದ್ವೇಷದ ಕಿಚ್ಚಿಗೆ ಹಾರಿಹೋಯ್ತು ಅಮಾಯಕನ ಪ್ರಾಣ | Grudge