Grudge: ತಾನು ಪ್ರೀತಿಸಿದ ಹುಡುಗಿಯನ್ನು ತನಗೆ ಮದುವೆ ಮಾಡಿಕೊಡದೆ ಇನ್ಯಾವುದೋ ವ್ಯಕ್ತಿಯೊಂದಿಗೆ ವಿವಾಹ ಮಾಡಿಸಿಕೊಟ್ಟರು ಎಂಬ ಕೋಪದಿಂದ ಪ್ರೇಯಸಿಯ ಗಂಡನನ್ನೇ ಬರ್ಬರವಾಗಿ ಹತ್ಯೆಗೈದ ಪಾಗಲ್ ಪ್ರೇಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ತಾನು ಪ್ರೀತಿಸಿದ ಹುಡುಗಿಯನ್ನು ತನಗೆ ಕೊಟ್ಟು ಮದುವೆ ಮಾಡದೆ ಇನ್ಯಾರೋ ವ್ಯಕ್ತಿಯೊಂದಿಗೆ ವಿವಾಹ ಮಾಡಿಸಿದರು ಎಂದು ಪ್ರೇಯಸಿಯ ಪತಿಯನ್ನೇ ಕೊಲೆಗೈಯುವ ಮೂಲಕ ಆರೋಪಿ ತನ್ನ ಸೇಡನ್ನು ತೀರಿಸಿಕೊಂಡ ಘಟನೆ ಆಂಧ್ರಪ್ರದೇಶದ ರಾಜಮುಂಡ್ರಿಯಲ್ಲಿ ವರದಿಯಾಗಿದೆ. ಅಮಾಯಕ ವ್ಯಕ್ತಿ ಕೊಲೆಯಾದ ಕೆಲವೇ ದಿನಗಳಲ್ಲಿ ಆರೋಪಿಯನ್ನು ಕೆಪಿಎಚ್‌ಬಿ ಕಾಲೋನಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಾಲನಗರ ಡಿಸಿಪಿ ಸುರೇಶ್ ಕುಮಾರ್, ಎಸಿಪಿ ಶ್ರೀನಿವಾಸ ರಾವ್ ಮತ್ತು ಸಿಐ ರಾಜಶೇಖರ್ ರೆಡ್ಡಿ ಗುರುವಾರ (ಮೇ.15) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಆರೋಪಿಯನ್ನು ಕಾಕಿನಾಡದ ಪಂಪೇನ ಅಯ್ಯಪ್ಪಸ್ವಾಮಿ ಅಲಿಯಾಸ್ ಪವನ್ (27) ಎಂದು ಗುರುತಿಸಲಾಗಿದೆ. ಶ್ರಾವಣಿ ಸಂಧ್ಯಾ ಎಂಬ ಹುಡುಗಿಯನ್ನು ಈತ ಪ್ರೀತಿಸುತ್ತಿದ್ದ. ಆದ್ರೆ, ಇದು ಒನ್ ವೇ ಲವ್. ಆಕೆಯನ್ನು ಮದುವೆ ಆಗುವ ಆಸೆ ವ್ಯಕ್ತಪಡಿಸಿದ್ದ ಈತ, ನೇರವಾಗಿ ಯುವತಿಯ ಪೋಷಕರು ಮತ್ತು ಸಂಬಂಧಿಕರೊಂದಿಗೆ ಮದುವೆ ವಿಚಾರ ಪ್ರಸ್ತಾಪಿಸಿದ್ದ. ಇದಕ್ಕೆ ಒಪ್ಪದ ಯುವತಿಯ ಪೋಷಕರು, ಆತನ ನಡವಳಿಕೆ ಸರಿಯಿಲ್ಲ ಎಂದು ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
ಇದನ್ನೂ ಓದಿ: ಮತ್ತೆ ಕೊರೊನಾ ಭೀತಿ; ಸಿಂಗಾಪುರ, ಹಾಂಕಾಂಗ್ ಭಾಗಗಳಲ್ಲಿ ಅಪ್ಪಳಿಸಿದ ಹೊಸ ಅಲೆ| Covid-19
ಇದಾಗಿ ಕೆಲವೇ ತಿಂಗಳಲ್ಲಿ ರಾಜಮಂಡ್ರಿ ಬಳಿಯ ಕೊರುಕೊಂಡ ಮಂಡಲದ ಮುಳಗಾಡು ಗ್ರಾಮದ ಕಲ್ಲ ವೆಂಕಟರಮಣ ಎಂಬ ವ್ಯಕ್ತಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದ ಕುಟುಂಬಸ್ಥರು, ಮಗಳ ನೆಮ್ಮದಿಯ ಜೀವನಕ್ಕೆ ಶುಭಹಾರೈಸಿದ್ದರು. ಈ ವಿಷಯ ತಿಳಿದ ಪವನ್, ಪ್ರೇಯಸಿಯ ನಿವಾಸ ಬಳಿ ಹೋಗಿ, ಆಗಾಗ್ಗೆ ಆಕೆಯ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸಿದ್ದ. ಸಮಯ ನೋಡಿಕೊಂಡು ಮೇ.10ರ ಮಧ್ಯರಾತ್ರಿ, ವೆಂಕಟರಮಣ ಮೇಲೆ ಏಕಾಏಕಿ ದಾಳಿ ನಡೆಸಿದ ಪವನ್, ಸ್ನೇಹಿತರಾದ ಗುಪ್ಪಳ ಶಿವರಾಮಕೃಷ್ಣ (20), ರಾಜಮಹೇಂದ್ರವರಂ ಅನಿಲ್ (19), ನಂಬಿಗರಿ ಸಾಯಿಕುಮಾರ್ (20) ಮತ್ತು ಮತ್ತೊಬ್ಬನ ಸಹಾಯದಿಂದ ವೆಂಕಟರಮಣನ ಹೃದಯಕ್ಕೆ ಚಾಕುವಿನಿಂದ ಇರಿದು, ಕೊಲೆಗೈದಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗುಬ್ಬಳ ಶಿವರಾಮಕೃಷ್ಣ, ರಾಜಮಹೇಂದ್ರವರಂ ಅನಿಲ್ ಮತ್ತು ನಂಬಿಗರಿ ಸಾಯಿಕುಮಾರ್ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿದ್ದ ಪವನ್ನನ್ನು ಇದೀಗ ಅರೆಸ್ಟ್ ಮಾಡಿದ್ದಾರೆ,(ಏಜೆನ್ಸೀಸ್).