Rajat Patidar: ಇದೇ ಮೇ.17ರಿಂದ ಐಪಿಎಲ್ 18ನೇ ಆವೃತ್ತಿ ಪುನಾರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಮತ್ತೊಮ್ಮೆ ಆರ್‌ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಲಿದೆ. ಈಗಾಗಲೇ ಸತತ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇಆಫ್ಗೆ ಲಗ್ಗೆಯಿಡುವ ಅಪಾರ ವಿಶ್ವಾಸವನ್ನು ಹೊಂದಿದೆ. ಇದಕ್ಕೆ ಆಟಗಾರರ ಹುಮ್ಮಸ್ಸು, ಪ್ರದರ್ಶನವೇ ಕಾರಣ.

ಇದನ್ನೂ ಓದಿ: ದಿನದಿಂದ ದಿನಕ್ಕೆ ದರದಲ್ಲಿ ಕುಸಿತ; ಈ ತಿಂಗಳ ಅಂತ್ಯದೊಳಗೆ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ!? ಹೀಗಿದೆ ಕಾರಣ | Gold Price
ದ್ವಿತೀಯ ಇನ್ನಿಂಗ್ಸ್ ಶುರುವಿಗೂ ಮುನ್ನವೇ ಇದೀಗ ಹೊಸ ಬಾಂಬ್ ಸಿಡಿಸಿರುವ ಆರ್‌ಸಿಬಿ ನಾಯಕ ರಜತ್ ಪಟೀದಾರ್, “2022ರ ಹರಾಜು ಪ್ರಕ್ರಿಯೆ ಆರಂಭದ ಸಮಯದಲ್ಲಿ ನನಗೆ ಆರ್‌ಸಿಬಿ ಫ್ರಾಂಚೈಸಿಯಿಂದ ಸಂದೇಶ ಬಂದಿತ್ತು. ನೀವು ರೆಡಿಯಿರಿ ನಿಮ್ಮನ್ನು ಹರಾಜಿನಲ್ಲಿ ಖರೀದಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆಗ ನನ್ನ ಮನಸ್ಸಿನ ಮೂಲೆಯಲ್ಲಿ ಒಂದು ಆಳವಾದ ನಂಬಿಕೆ ಮೂಡಿತ್ತು. ಖಂಡಿತವಾಗಿ ಈ ಬಾರಿ ನನ್ನನ್ನು ಕರೆದುಕೊಳ್ಳುತ್ತಾರೆ. ನಾನು ಆರ್‌ಸಿಬಿ ಪರ ಆಡಬಹುದು ಎಂದು. ಆದರೆ, ನುಡಿದಂತೆ ಅವರು ನಡೆಯಲಿಲ್ಲ. ಇದು ನನ್ನಲ್ಲಿ ಭಾರೀ ಬೇಸರ ಮೂಡಿಸಿತ್ತು ಹಾಗೂ ಕೆರಳಿಸಿತ್ತು” ಎಂದು ಇತ್ತೀಚಿಗೆ ನಡೆದ ಪಾಡ್ಕಾಸ್ಟ್ನಲ್ಲಿ ಹೇಳಿದ್ದಾರೆ.
ಚೊಚ್ಚಲ ಐಪಿಎಲ್ ಕಪ್
ಪ್ರಸಕ್ತ ವರ್ಷದ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುತ್ತಿರುವ ಹೊಸ ಕ್ಯಾಪ್ಟನ್ ರಜತ್ ಪಾಟಿದಾರ್, ಐಪಿಎಲ್ 18ನೇ ಆವೃತ್ತಿಯ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಈ ಸೀಸನ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿದ್ದು, 8 ಪಂದ್ಯಗಳನ್ನು ಗೆದ್ದು, ಮೂರು ಪಂದ್ಯಗಳನ್ನು ತವರಿನಲ್ಲಿ ಸೋತಿದೆ. ಪ್ರಸ್ತುತ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ಈ ಬಾರಿಯಾದರೂ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದು ಸಂಭ್ರಮಿಸಲಿ ಎಂಬುದು ಅಸಂಖ್ಯಾತ ಆರ್‌ಸಿಬಿ ಅಭಿಮಾನಿಗಳ ಆಶಯವಾಗಿದೆ,(ಏಜೆನ್ಸೀಸ್).
ಮೇ.17, ಜೆರ್ಸಿ ನಂ.18! ಕ್ರಿಕೆಟ್ ಪ್ರಿಯರಿಗೆ ‘ಕಿಂಗ್ ಕೊಹ್ಲಿ’ ಅಭಿಮಾನಿಗಳ ವಿಶೇಷ ಮನವಿ ಇದು | Virat Kohli