ಮಗು ನೋಡಿಕೊಳ್ಳುವ ನೆಪದಲ್ಲಿ ಅತ್ಯಾಚಾರ! ರಕ್ತಸ್ರಾವದಿಂದ ಒದ್ದಾಡುತ್ತಿತ್ತು ಕಂದಮ್ಮ...

rape
Published on

ರಾಣೆಬೆನ್ನೂರ: ಏನೂ ಅರಿಯದ ಕಂದಮ್ಮ ಮೇಲೆ ಕಾಮುಕನೊಬ್ಬ ಅಟ್ಟಹಾಸ ಮೆರೆದಿದ್ದು, ತೀವ್ರ ನೋವು-ರಕ್ತಸ್ರಾವದಿಂದ ಮಗು ನರಳಿದೆ.

ರಾಣೆಬೆನ್ನೂರಿನ ವಸದವರ ಓಣಿಯ ಮನೆಯೊಂದರಲ್ಲಿ ಪಕ್ಕದ ಮನೆಯ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಚನ್ನಪ್ಪ ಬಸವರಾಜಪ್ಪ ಎಮ್ಮೇರ (42) ಎಂಬಾತ ಅತ್ಯಾಚಾರ ಎಸಗಿದ್ದಾನೆ.

ಸಂತ್ರಸ್ತ ಮಗುವಿನ ತಂದೆ-ತಾಯಿ ಕೃಷಿ ಕೆಲಸಕ್ಕೆ ಹೋಗುವಾಗ ನಿತ್ಯವೂ ಮಗಳನ್ನು ಚನ್ನಪ್ಪನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಇದನ್ನೇ ದುರುಪಯೋಗ ಮಾಡಿಕೊಂದ ಚನ್ನಪ್ಪ, ಗುರುವಾರ ಮಗುವನ್ನು ತನ್ನ ರೂಮಿಗೆ ಕರೆದುಕೊಂಡು ಅತ್ಯಾಚಾರ ಎಸಗಿ ಎಸ್ಕೇಪ್​ ಆಗಿದ್ದ.

ಆರೋಪಿ ಚನ್ನಪ್ಪ
ಆರೋಪಿ ಚನ್ನಪ್ಪ

ಮಧ್ಯಾಹ್ನ ಪಾಲಕರು ಬಂದು ನೋಡಿದಾಗ ಮಗು ಚನ್ನಪ್ಪನ ಕೋಣೆಯಲ್ಲಿ ರಕ್ತಸ್ರಾವದಿಂದ ಒದ್ದಾಡುತ್ತಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net