ಲೈಂಗಿಕ ದೌರ್ಜನ್ಯ ಭೀತಿಗೊಳಗಾಗಿದ್ದ ಬಾಲಕಿ ಮನೆಗೆ ಸಚಿವೆ ಜೊಲ್ಲೆ ಭೇಟಿ

shashikala jolle
Published on

ಮಧುಗಿರಿ: ಅತ್ಯಾಚಾರ ಯತ್ನಕ್ಕೊಳಗಾಗಿದ್ದ 7 ವರ್ಷದ ಬಾಲಕಿ ಮನೆಗೆ ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ ಸಚಿವ ಶಶಿಕಲಾ‌ ಜೊಲ್ಲೆ ಭೇಟಿ ನೀಡಿ ಬಾಲಕಿ ಹಾಗೂ ಪೋಷಕರಿಗೆ ಆತ್ಮಸ್ಥೈರ್ಯ ತುಂಬಿದರು.

ಮೈದನಹಳ್ಳಿ ಗ್ರಾಮದಲ್ಲಿ ನ.19ರಂದು 7 ವರ್ಷದ ಬಾಲಕಿ ಮೇಲೆ‌ ಅತ್ಯಾಚಾರ ಯತ್ನ ನಡೆದಿತ್ತು. ಈ ಪ್ರಕರಣದ ಸುದ್ದಿ ತಿಳಿದ ಸಚಿವೆ ಶಶಿಕಲಾ ಗುರುವಾರ ಬಾಲಕಿ ಮನೆಗೆ ಭೇಟಿ ನೀಡಿ ಆಕೆಗೆ ಧೈರ್ಯ ತುಂಬಿದರು. ಪೋಷಕರ ಜತೆ ಕೆಲ ಹೊತ್ತು ಮಾತನಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.

ಅತ್ಯಾಚಾರಕ್ಕೆ ಯತ್ನಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿ, ಫೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net