More

    ಸ್ನೇಹಿತೆಯ ಮಾಜಿ ಗಂಡನನ್ನೇ ಮದುವೆಯಾಗುತ್ತಿದ್ದಾರಾ ಹನ್ಸಿಕಾ?

    ಪ್ಯಾರಿಸ್​: ನಟಿ ಹನ್ಸಿಕಾ ಮೋಟ್ವಾನಿ, ಸೋಹೈಲ್​ ಕಠೂರಿಯಾ ಎಂಬಾತನನ್ನು ಮದುವೆಯಾಗುತ್ತಿರುವುದು, ಸೋಹೈಲ್​ ಇತ್ತೀಚೆಗಷ್ಟೇ ಹನ್ಸಿಕಾಗೆ ಪ್ಯಾರಿಸ್​ನ ಐಫೆಲ್​ ಟವರ್​ ಎದುರು ಪ್ರಪೋಸ್​ ಮಾಡಿದ್ದು ಗೊತ್ತಿರುವ ವಿಷಯವೇ. ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ಸೊಹೈಲ್​ ಬೇರೆ ಯಾರೂ ಅಲ್ಲ, ಹನ್ಸಿಕಾಳ ಗೆಳತಿಯ ಮಾಜಿ ಪತಿಯಂತೆ ಮತ್ತು ಆತನಿಗೆ ಇದು ಎರಡನೆಯ ಮದುವೆಯಂತೆ!

    ಇದನ್ನೂ ಓದಿ: ‘ಪಠಾಣ್​’ ನಂತರ ‘ಪಠಾಣ್​ 2’? ಹಿಂಟ್​ ಕೊಟ್ಟ ಕಿಂಗ್ ಖಾನ್​

    ಹೌದು, ಮೂಲಗಳ ಪ್ರಕಾರ, ಹನ್ಸಿಕಾ ಅವರ ಬೆಸ್ಟ್​ಫ್ರೆಂಡ್​ ರಿಂಕಿಯ ಮಾಜಿಯ ಪತಿಯೇ ಈ ಸೋಹೈಲ್​ ಅಂತೆ. 2016ರಲ್ಲಿ ಗೋವಾದಲ್ಲಿ ಈ ರಿಂಕಿ ಮತ್ತು ಸೋಹೈಲ್​ ಮದುವೆಯಾಗಿತ್ತಂತೆ. ಅಷ್ಟೇ ಅಲ್ಲ, ಈ ಮದುವೆಯ ಸಂಗೀತ್​ನಲ್ಲಿ ಹನ್ಸಿಕಾ ನೃತ್ಯ ಮಾಡುತ್ತಿರುವ ವಿಡಿಯೋಗಳೂ ಇವೆಯಂತೆ. ಹೀಗೆ ದೊಡ್ಡ ಮಟ್ಟದಲ್ಲಿ ಮದುವೆಯಾದ ರಿಂಕಿ ಮತ್ತು ಸೋಹೈಲ್​ ನಡುವೆ ಕೆಲವು ಕಾಲದ ನಂತರ ಸಂಬಂಧ ಹಳಿಸಿದೆ. ಆ ನಂತರ ಇಬ್ಬರೂ ದೂರವಾದರಂತೆ.

    ಈ ಕಥೆಯಲ್ಲಿ ಹನ್ಸಿಕಾ ಯಾವಾಗ ಎಂಟ್ರಿ ಕೊಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ ರಿಂಕಿಯಿಂದ ದೂರವಾದ ಸೋಹೈಲ್​, ಈಗ ಹನ್ಸಿಕಾ ಅವರನ್ನು ಎರಡನೆಯ ಮದುವೆಯಾಗುತ್ತಿದ್ದಾರೆ. ರಿಂಕಿ ಜತೆಗೆ ಸಂಬಂಧ ಯಾಕೆ ಹಳಿಸಿತು ಮತ್ತು ಹನ್ಸಿಕಾ ಜತೆಗೆ ಹೊಸ ಸಂಬಂಧ ಹೇಗೆ ಕುದುರಿತು ಎಂಬ ಕಥೆ ಇನ್ನಷ್ಟೇ ಗೊತ್ತಾಗಬೇಕಿದೆ. ಒಟ್ಟಿನಲ್ಲಿ ರಿಂಕಿಯಿಂದ ದೂರವಾದ ಸೋಹೈಲ್​, ಈಗ ಹನ್ಸಿಕಾ ಜತೆಗೆ ಮದುವೆಯಾಗುವುದಕ್ಕೆ ತಯಾರಿ ನಡೆಸಿದ್ದಾರೆ.

    ಇದನ್ನೂ ಓದಿ: ಹಾಲಿವುಡ್ ಸಾಹಸ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಸಮಂತಾ!

    ಹನ್ಸಿಕಾ ಮತ್ತು ಸೋಹೈಲ್​ ಮದುವೆ ಡಿಸೆಂಬರ್​ 4ರಂದು ಜೈಪುರದ ಮಂಡೋಟ ಫೋರ್ಟ್​ನಲ್ಲಿ ನಡೆಯಲಿದೆ. ಡಿ. 2ರಂದು ಮೆಹಂದಿ ಕಾರ್ಯಕ್ರಮವಿದ್ದು, ಮರುದಿನ ಸಂಗೀತ್​ ಆಯೋಜಿಸಲಾಗಿದೆ. ಡಿ. 4ರ ಮುಂಜಾನೆ ಹಳದಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಮದುವೆ ನಡೆಯಲಿದೆ.

    65 ಕೋಟಿ ರೂ. ಕೊಟ್ಟು ಡ್ಯೂಪ್ಲೆ ಬಂಗ್ಲೆ ಖರೀದಿಸಿದರಂತೆ ಜಾಹ್ನವಿ ಕಪೂರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts