ಸಿನಿಮಾ

ಸಿಎಂ ಆಗೋದು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ

ಬೆಂಗಳೂರು: ಈ ಚುನಾವಣೆಯಲ್ಲಿ 123 ಸ್ಥಾನ ಗೆದ್ದು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ. ಆದರೆ, ಕೆಲ ಮಾಧ್ಯಮಗಳಲ್ಲಿ ಸುಳ್ಳು ಸಮೀಕ್ಷೆಗಳನ್ನು ಬಿತ್ತರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ದೂರಿದ್ದಾರೆ. ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿಯ ಪೀಣ್ಯ 2ನೇ ಹಂತ ರಾಜಗೋಪಾಲನಗರ, ಸುಂಕದಕಟ್ಟೆ ಮೂಲಕ ರೋಡ್ ಶೋ ಹಾಗೂ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ: ಯಾರ ಪಾಲಾಗಲಿದೆ ಸಕ್ಕರೆ ನಾಡಿನ ಸಿಹಿ? ಭದ್ರಕೋಟೆ ಉಳಿಸಿಕೊಳ್ಳಲು ಕೈ, ದಳ ಕಸರತ್ತು, ಕಮಲ ಪಾಳಯ ಪ್ರದರ್ಶಿಸಲಿದೆಯೇ ತಾಕತ್ತು?

ಮೊನ್ನೆಯಷ್ಟೇ ಕಾಂಗ್ರೆಸ್ 116 ಸೀಟು ಗೆಲ್ಲುತ್ತದೆ ಎಂದು ಹೇಳಿದ್ದರು. ನಿನ್ನೆ ಆಗಲೇ ಬಿಜೆಪಿ 116 ಸೀಟು ಗೆಲ್ಲುತ್ತದೆ. ಜೆಡಿಎಸ್ 22 ರಿಂದ 28 ಸ್ಥಾನ ಪಡೆಯಲಿದೆ ಎಂದು ಬಿತ್ತರಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎಷ್ಟು ಕುತಂತ್ರ ನಡೆಸಿದರೂ ಕುಮಾರಸ್ವಾಮಿ ಸಿಎಂ ಆಗೋದನ್ನ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯದ ಜನತೆ ನೆಮ್ಮದಿಯ ಜೀವನ ನಡೆಸಬೇಕು

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ 30 ರಿಂದ 40 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ನನಗಿದೆ. ಜೆಡಿಎಸ್ ಭದ್ರಕೋಟೆಗಳಾದ ಹಾಸನ, ತುಮಕೂರು, ಮಂಡ್ಯ,ರಾಮನಗರ ಜಿಲ್ಲೆಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ನನಗೆ ಆರೋಗ್ಯ ತೊಂದರೆ ಇದ್ದರೂ ರಾಜ್ಯದೆಲ್ಲೇಡೆ ಸುತ್ತಿದ್ದೇನೆ. ರಾಜ್ಯದ ಜನತೆ ನೆಮ್ಮದಿಯ ಜೀವನ ನಡೆಸಬೇಕು ಎಂಬುದು ನನ್ನ ಜೀವನದ ಕೊನೆಯ ಆಸೆ ಎಂದರು.

ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ದಾಸರಹಳ್ಳಿ ಜನತೆಗೆ ವಿಶೇಷ ಆದ್ಯತೆ ನೀಡಿ ಅವರ ಸಮಸ್ಯೆ ಬಗೆಹರಿಸುವ ಮೂಲಕ ಋಣ ತೀರಿಸುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಇದನ್ನೂ ಓದಿ: ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ: ಅಣ್ಣಾಮಲೈಗೆ ಬುದ್ಧಿ ಇದ್ಯಾ ಇಲ್ವಾ ಗೊತ್ತಿಲ್ಲ

ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ಮಾತನಾಡಿ, ಅಭಿವೃದ್ಧಿ ಹಾಗೂ ನೆಮ್ಮದಿಗಾಗಿ ನನಗೆ ಮತ ನೀಡಿ ಎಂದು ಮನವಿ ಮಾಡಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ. ಕುಮಾರಸ್ವಾಮಿಯವರ ಪಂಚರತ್ನ ಯೋಜನೆಯಿಂದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

Latest Posts

ಲೈಫ್‌ಸ್ಟೈಲ್