ಸಿನಿಮಾ

ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ: ಮಣಿಕಂಠ ರಾಠೋಡ್ ಹಾಗೂ ಅಣ್ಣಾಮಲೈ ವಿರುದ್ಧ ವಾಗ್ದಾಳಿ

ಕಲಬುರಗಿ: ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ ನಡೆಸಿದ್ದು, ಬಿಜೆಪಿ ಮೇಲೆ ವಾಗ್ದಾಳಿ ಮಾಡಿದ್ದಾರೆ. ಇದೇ ಸಂದರ್ಭ ಸರ್ಕಾರಿ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, “ಬಿಜೆಪಿಯವರು ಇಡಿ ರಾಜ್ಯದಲ್ಲಿ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಬಿಜೆಪಿಯವರು ಹತಾಶೆಗೆ ಒಳಗಾಗಿದ್ದಾರೆ ಚುನಾವಣೆ ಸಂಧರ್ಭದಲ್ಲಿ ಜಾತಿ , ಧರ್ಮ , ತಂದು ವ್ಯೆಯಕ್ತಿವಾಗಿ ಜಗಳ ಹಚ್ಚೊದಕ್ಕೆ ಮುಂದಾಗಿದ್ದಾರೆ. ಬಿಜೆಪಿಯವರಿಗೆ ಕರ್ನಾಟಕ ಕೈ ತಪ್ಪಿದ್ರೆ ಮುಜುಗರ ಆಗುತ್ತೆ ಎಂದು ಕೇಂದ್ರ ಸರ್ಕಾರಿ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳೊಕೆ‌ ಮುಂದಾಗಿದ್ದಾರೆ.

ಕಲಬುರಗಿಯಲ್ಲಿ ನಿನ್ನೆ ಐಟಿ ಅಸ್ತ್ರವನ್ನ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನ ಕಡಿವಾಣ ಹಾಕಲು ಪ್ರಯತ್ನ ಮಾಡ್ತಿದ್ದಾರೆ. ನಿನ್ನೆ ವಾಹೇದ್ ಅಲಿ , ಮೊಹ್ಮದ್ ಜಹಾಗಿರದಾರ್ , ಅರವಿಂದ್ ಚಹ್ವಾಣ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಅರವಿಂದ ಚಹ್ವಾಣ್ ಮನೆ‌ ಮೇಲೆ ದಾಳಿ ಮಾಡಿದ್ದಾರೆ, ಹೊಟೇಲ್, ಸ್ಟೋನ್ ಕ್ರಷರ್ ಮೇಲೆ ದಾಳಿ ಮಾಡಿದ್ದಾರೆ

ಅರವಿಂದ ಚಹ್ವಾಣ್ ಅವರ ತಾಯಿ ಮನೆಯಲ್ಲಿ ಒಬ್ಬರೇ ಇದ್ದಾಗ ದಾಳಿ ಮಾಡಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದಾಗ ಬಿಜೆಪಿಯವರ ಪಾಲಿಗೆ ಎಲ್ಲರು ಕಳ್ಳರು ಸುಳ್ಳರು. ಬಿಜೆಪಿಗೆ ಸೇರಿದ ಮೇಲೆ ಅವರೆಲ್ಲರು ದೇಶಪ್ರೇಮಿಗಳು ರಾಷ್ಟ್ರ ಭಕ್ತರು. ಅರವಿಂದ ಚಹ್ವಾಣ್ ಎರಡು ವಾರ ಆಯ್ತು ಬಿಜೆಪಿಗೆ ಬಂದು. ಎರಡೇ ವಾರದಲ್ಲಿ ಅರವಿಂದ್ ಚಹ್ವಾಣ್ ಅಕ್ರಮ ಆಸ್ತಿಗಳಿಗೆ ಮಾಡಿದ್ರಾ

ಎರಡೇ ವಾರದಲ್ಲಿ ಇವರು ಕೆಟ್ಟವರಾಗಿ ಬಿಟ್ಟರಾ ಹೇಗೆ. ಅರವಿಂದ್ ಚಹ್ವಾಣ್ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿರೋದಕ್ಕೆ ಐಟಿ ರೈಡ್ ಮೂಲಕ ತೊಂದ್ರೆ ಕೊಡುವ ಸಂದೇಶ ಸಾರಿದ್ದಾರೆ. ಇದರಿಂದ ನಾವ್ಯಾರು ಹೇದರುವವರು ಇಲ್ಲ. ನೀವು ಪ್ರಾಮಾಣಿಕವಾಗಿ ಇದ್ದರೆ ಕೆಕೆಆರ್​ಡಿಬಿ ಅಕ್ರಮ ಆಗಿರೋದ್ರ ಬಗ್ಗೆ ಸಿಎಜಿ ವರದಿ ಕೊಟ್ಟಿದೆ. ಅಕ್ರಮ ಆಗಿರೋದರ ಬಗ್ಗೆ ವರದಿ ಕೊಟ್ಟರು ಅವರ ಮನೆ‌ ಮೇಲೆ ಯಾಕೆ ಐಟಿ ದಾಳಿ ಇಲ್ಲ?

ಚಿಂಚೋಳಿ ಅಂಸದ ಚಿಂಚೋಳಿ ಶಾಸಕ ಒಂದೆ ರೋಡ್ ಐವತ್ತು ಬಾರಿ ಟೆಂಡರ್ ಆಗಿದೆ ಅವರ ಮನೆ ಮೇಲೆ ಯಾಕೆ ಐಟಿ ದಾಳಿ ಆಗಿಲ್ಲ. ಡಿಸಿಸಿ ಬ್ಯಾಂಕ್ ನಲ್ಲಿ ರೈತರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ರು ಸರ್ಕಾರಕ್ಕೆ ಕೇಳಿಸಿಲ್ವಾ? ಜನ ಬಿಜೆಪಿ ಅಭ್ಯರ್ಥಿ ವಿರುದ್ದ ಆಕ್ರೋಷ ಹೊರ ಹಾಕಿದ್ರೆ ದಾಳಿ ಮಾತ್ರ ಕಾಂಗ್ರೆಸ್ ಅವರ ಮೇಲೆ ಆಗುತ್ತೆ…

ಬಿಜೆಪಿಯವರು ಸೋಲಿನ ಹತಾಶೆಯಿಂದ ಅವರ ನಾಯಕರಾದ ಮೋದಿ , ಅಮಿತ್ ಶಾ ಕಾಲಿಗೆ ಬಿದ್ದಿ ಹೇಗಾದ್ರು ಮಾಡಿ ಗೆಲ್ಲಿಸಿ ಅಂತಾ ಕೇಳಿದ್ದಾರೆ. ಹಾಗಾಗಿ ಅವರು ಕೇಂದ್ರದ ಸಂಸ್ಥೆಗಳನ್ನ ಬಳಕೆ ಮಾಡಿಕೊಂಡಿದ್ದಾರೆ. ಈ ಬಾರಿ ಕಲಬುರಗಿಯಲ್ಲಿ ನಮ್ಮ ಕಾಂಗ್ರೆಸ್ ಬಾವುಟ ಹಾರಿಸೋದು ನಿಶ್ಚಿತ.

ಮಣಿಕಂಠ ರಾಠೋಡ್ ಆಡಿಯೋ ಬಾಂಬ್ ವಿಚಾರ

ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿ ಅಭ್ಯರ್ಥಿ ಇತ್ತೀಚೆಗೆ ನೀಡಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಬಹಳ ಬುದ್ದಿವಂತ ಅಲ್ಲ ಅವನು. ಅವನು ಏನಿದ್ರು ಅಕ್ಕಿ ಪಕ್ಕಿ ಲೇವಲ್ ಅಲ್ಲೆ ಇದ್ದಾನೆ. ಅದಕ್ಕೆ ಚಿತ್ತಾಪುರಕ್ಕೆ ಉಸ್ತುವಾರಿಯ ಸುಪಾರಿ ಕೊಟ್ಟಿರೋದು ರವಿಕುಮಾರ್ ಅವರಿಗೆ. ಬಿಜೆಪಿಯವರು ಹತಾಶರಾಗಿದ್ದಾರೆ ,

ರವಿಕುಮಾರ್ ಅವರಿಗೆ ಈ ಹಿಂದೆನೇ ಕೇಳಿದ್ದೆನೆ. ಜೇವರ್ಗಿ, ಅಫಜಲಪುರ ಟಿಕೆಟ್ ಮಾರಾಟ ಆಗಿದೆಯಾ ಅಂತಾ ಕೇಳಿದ್ದೆ. ಮೋದಿಯವರು ಅವರು ಪೈಟರ್ ರವಿಗೆ ನಮಸ್ಕಾರ ಹಾಕಿದಾಗ ಗೋತ್ತಾಯ್ತು, ಮಣಿಕಂಠನಿಗೆ ಸಾಷ್ಟಾಂಗ ಹಾಕಿ ಬಿಡ್ತಾರೆ ಅಂತ ಕಾಣಿಸುತ್ತದೆ. ಮೋದಿ ಚಿತ್ತಾಪುರಕ್ಕೆ ಬರದೆ ಇರೋದಕ್ಕೆ ಬಹಳ ನಿರಾಸೆ ಆಗಿದೆ ನನಗೆ

ಇದೇ ಮಣಿಕಂಠ ಈ ಹಿಂದೆ ನವೆಂಬರ್​ನಲ್ಲಿ ನನಗೆ ಶೂಟ್ ಮಾಡ್ತೆನೆ ಅಂತಾ ಕ್ಯಾಮರಾ ಮುಂದೆ ಹೇಳಿದ್ದ. ಬಿಜೆಪಿಯವರು ಮಾತೆತ್ತಿದ್ರೆ ರಾಮ ರಾಜ್ಯ ಕಟ್ಟತ್ತೆವೆ ಅಂತಾ ಹೇಳ್ತಾರೆ. ರಾಮರಾಜ್ಯವನ್ನ ರೌಡಿಗಳ ಜೊತೆ ಕಟ್ಟತ್ತಿರಾ ಹೇಗೆ? ಬಿಜೆಪಿಯವರು ಎಂತಹವರನ್ನ ಟಿಕೆಟ್ ಕೊಟ್ಟಿದ್ದರಿ ಅಂತಾ ಯೋಚನೆ ಮಾಡಲಿ
ವಿಶ್ವನಾಥ್ ಪಾಟೀಲ್ ಅವರ ಕಾಲು ಧೋಳಿನಷ್ಟು ಅನುಭವ ಇಲ್ಲ ರವಿಕುಮಾರ್ ಗೆವಿಶ್ವನಾಥ್ ಪಾಟೀಲ್ ಅವರನ್ನ ಖರಿದಿ ಮಾಡಿದ್ದಿವಿ ಅಂತಾ ಚಿತ್ತಾಪುರದಲ್ಲಿ ಬಂದು ಹೇಳಲಿ ರವಿಕುಮಾರ್ ಗ್ರಾಂ ಪಂ ಗೆಲ್ಲೊಕೆ ಆಗೋದಿಲ್ಲ

ಕೆಲಸಕ್ಕೆ ಬಾರದೇ ಇರುವ ಐಎಎಸ್ ಅಧಿಕಾರಿ ಅಣ್ಣಾಮಲೈ!

ಅವನು ಯಾರೋ ಕೆಲಸಕ್ಕೆ ಬಾರದೆ ಇರೋ ಐಪಿಎಸ್ ಆಫಿಸರ್ ಅಣ್ಣಾಮಲೈ ಹೇಳ್ತಾರೆ. ರಾಜಕೀಯ ಒತ್ತಡದಿಂದ ಮಣಿಕಂಠ ಮೇಲೆ ಕೇಸ್ ಹಾಕ್ತಾರೆ ಅಂತಾ. ಅಣ್ಣಾಮಲೈಗೆ ಬುದ್ದಿ ಇದೇನಾ ಇಲ್ಲಾ ಅಂತಾ ಗೋತ್ತಿಲ್ಲ. ಐಪಿಎಸ್ ಓದಿದವರು ಹೇಗೆ ಮಾತಾಡಬೇಕು ಅಂತಾ ತಿಳಿದುಕೊಳ್ಳಲಿ

ಅಣ್ಣಾಮಲೈ ಡಿಸಿಪಿ ಇದ್ದಾಗ ರಾಜಕೀಯ ಒತ್ತಡದಿಂದಲೆ ಎಲ್ಲಾ ಕೇಸ್ ಮಾಡ್ತಿದ್ದಾರೆ. ಬಿಜೆಪಿಯವರು ಮನದಾಳದ ಮಾತು ಏನು ಅಂತಾ ಹೇಳಲಿ ಖರ್ಗೆ ಕುಟುಂಬದ ಬಗ್ಗೆ. ಆ ಆಡಿಯೋವನ್ನ ನಾನು ಮಾಡಿಸಿದ್ದೆನೆ ಅಂತಾ ಹೇಳ್ತಾ ಇದ್ದಾರಲ್ಲ, ತನಿಖೆ ಮಾಡಿಸಿ ಸರ್ಕಾರ ಅವರದ್ದೆ ಇದೆಯಲ್ಲ” ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

Latest Posts

ಲೈಫ್‌ಸ್ಟೈಲ್