More

    ಜೆಡಿಎಸ್​ಗೆ ಮತ ಹಾಕಬೇಡಿ ಎನ್ನುವ ಅಧಿಕಾರ ಮೋದಿಗೆ ಇದೆಯಾ? ಮಾಜಿ ಪ್ರಧಾನಿ ಪ್ರಶ್ನೆ

    ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ಗುಡುಗಿದ್ದರು. ಎರಡೂ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಾ ಬರುತ್ತಿವೆ. ಜೆಡಿಎಸ್​ಗೆ ನೀಡುವ ಮತ ಕಾಂಗ್ರೆಸ್​ ಪಾಲಾಗುತ್ತದೆ. ಅಂತೆಯೇ ಜೆಡಿಎಸ್​ಗೆ ಮತ ನೀಡುವುದರಿಂದ ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲಿದೆ ಎಂದು ಹೇಳಿದ್ದರು.

    ಇದನ್ನೂ ಓದಿ: ವಿಜಯಪುರ | ಹಾಡಹಗಲೇ ಗುಂಡಿನ ದಾಳಿ; ಸ್ಥಳದಲ್ಲಿಯೇ ಪ್ರಾಣಬಿಟ್ಟ ರೌಡಿಶೀಟರ್

    ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ?

    ಇದೀಗ ಈ ವಿಚಾರವಾಗಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮೋದಿ ಪ್ರಧಾನಿಯಾದ 10 ವರ್ಷದಲ್ಲಿ ಕರ್ನಾಟಕದಲ್ಲಿ ಏನು ಅಭಿವೃದ್ಧಿ ಆಗಿದೆ. ಈ ಬಗ್ಗೆ ತೀರ್ಮಾನ ಮಾಡುವ ರಾಜಕೀಯ ಪ್ರಬುದ್ದತೆ ನಾಡಿನ ಜನರಿಗಿದೆ. ಮೋದಿ ಹೇಳಿಕೆಗೆ ಪ್ರತಿಕ್ರಿಯೆ ಆಗತ್ಯ ಇಲ್ಲ. ಏಳೂವರೆ ಕೋಟಿ ಜನರಿಗೆ ತೀರ್ಪು ಕೊಡುವ ಶಕ್ತಿ ಇದೆ. ಜೆಡಿಎಸ್​ಗೆ ಮತ ಕೊಡಬೇಡಿ ಎಂದು ಹೇಳುವ ಅಧಿಕಾರ ಮೋದಿ ಅವರಿಗೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಸಿದ್ದರಾಮಯ್ಯ ಪರ ಪ್ರಚಾರ; ಶಿವರಾಜ್ ಕುಮಾರ್​ಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ!

    ತೀರ್ಪು ಕೊಡುವ ಅಧಿಕಾರ ನಾಡಿನ ಜನರಿಗಿದೆ

    ಜೆಡಿಎಸ್​ಗೆ ಮತ ಕೊಡಬೇಡಿ ಎಂದು ಹೇಳುವ ಅಧಿಕಾರ ಮೋದಿ ಅವರಿಗೆ ಇದೆಯಾ? ಆದರೆ ತೀರ್ಪು ಕೊಡುವ ಅಧಿಕಾರ ನಾಡಿನ ಜನರಿಗೆ ಇದೆ. ಹೇಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನಾತ್ಮಕವಾಗಿ ತೀರ್ಪು ನೀಡುವ ಹಕ್ಕು ಜನರಿಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಏನು ಕೊಡುಗೆ ಕೊಟ್ಟಿದ್ದಾರೆ ಎಂಬ ಪ್ರಬುದ್ದತೆ ಜನರಲ್ಲಿದೆ ಎಂದು ಮಾಜಿ ಪ್ರಧಾನಿ ಎಚ್​​.ಡಿ.ದೇವೇಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts