More

    ಚಲಿಸುತ್ತಿರುವ ಕಾರಿನ ಮೇಲೆ ಯುವಕನ ಪುಷ್-ಅಪ್ಸ್​​: ಪ್ರಕರಣ ದಾಖಲಿಸಿದ ಪೊಲೀಸ್​

    ಗುರುಗ್ರಾಮ್‌: ಚಲಿಸುತ್ತಿದ್ದ ಕಾರಿನ ಮೇಲೆ ಪುಷ್-ಅಪ್ಸ್​ ಮಾಡಿದ ಯುವಕನನ್ನು ಬಂಧಿಸಿರುವ ಘಟನೆ ದೆಹಲಿ ಬಳಿಯ ಗುರುಗ್ರಾಮ್​ನಲ್ಲಿ ನಡೆದಿದೆ.

    ಇದನ್ನೂ ಓದಿ: IPL 2023: ಐಪಿಎಲ್​ ಟ್ರೋಫಿ ಜತೆಗೆ ವೀಕ್ಷಕರ ಹೃದಯವನ್ನೂ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​!

    ದೃಶ್ಯದಲ್ಲಿ ಏನಿದೆ?
    ನಡುರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಛಾವಣಿಯ ಮೇಲೆ ವ್ಯಕ್ತಿಯೊರ್ವ ಪುಷ್-ಅಪ್ ಮಾಡುತ್ತಿರುವುದರ ಜತೆಗೆ ಇಬ್ಬರು ಸ್ನೇಹಿತರು ತಮ್ಮ ದೇಹವನ್ನು ಹೊರಹಾಕಿ ಡಾನ್ಸ್​ ಮಾಡುವುದನ್ನು ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.

    ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪೊಲೀಸರು ತಕ್ಷಣವೇ ಕ್ರಮಕೈಗೊಂಡು ಅಕ್ರಮಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡು ಆರೋಪಿ ಲೋಕೇಶ್​ನನ್ನು ಬಂಧಿಸಿದ್ದಾರೆ ಹಾಗೂ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ 6,500 ರೂ.ದಂಡವನ್ನು ವಿಧಿಸಿದ್ದಾರೆ.

    ಇನ್ನು, ಈ ಕುರಿತು ಮಾತನಾಡಿದ ನಗರ ಸಂಚಾರ ಪೊಲೀಸರು, ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಬೇಡಿ. ಮತ್ತು ಇತರರ ಪ್ರಾಣಕ್ಕೆ ಅಪಾಯವನ್ನುಂಟು ಮಾಡದಂತೆ ವಾಹನ ಚಲಾಯಿಸಿ ಎಂದು ವಿನಂತಿಸಿಕೊಂಡಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts