More

    VIDEO| ಉರ್ಫಿ ಜಾವೇದ್​​ ತೊಟ್ಟ ಬಟ್ಟೆಯನ್ನು ಮೊದಲ ಬಾರಿಗೆ ಮೆಚ್ಚಿದ ನೆಟ್ಟಿಗರು!

    ಮುಂಬೈ: ಸೋಶಿಯಲ್​ ಮೀಡಿಯಾ ಸ್ಟಾರ್​​ ಉರ್ಫಿ ಜಾವೇದ್ ತನ್ನದೆ ಆಗಿರುವ ವಿಭಿನ್ನವಾದ ಸ್ಟೈಲ್​​ಗೆ ಹೆಸರುವಾಸಿಯಾಗಿದ್ದಾರೆ. ಇವರು ಧರಿಸುವ ಬಟ್ಟೆ ಯಾವ ಸ್ಟಾರ್​​ ನಟ-ನಟಿಯರಿಗೂ ಕಮ್ಮಿ ಇಲ್ಲ ಎನ್ನುವಷ್ಟು ಸ್ಟೈಲಿಶ್​​ ಆಗಿರುತ್ತದೆ.

    ಉರ್ಫಿ ಜಾವೇದ್ ಕಾಸ್ಟ್ಯೂಮ್​ ವಿಚಾರದಲ್ಲಿ ಟ್ರೋಲ್ ಆಗಿದ್ದೇ ಹೆಚ್ಚು.  ಆದರೆ ಇದೀಗ ಊರ್ಫಿ ಜಾವೆದ್​​ ಜಾಕೆಟ್‌ ನೆಟ್ಟಿಗರ ತಲೆ ಕೆಡಿಸಿದೆ. ಯಾಕೆ ಅಂತೀರಾ ಈ ಸುದ್ದಿ ಓದಿ…..

    ಸಣ್ಣ-ಪುಟ್ಟ ಟೆಡ್ಡಿ ಬೇರ್‌ಗಳಿಂದ ಮಾಡಿದ ವರ್ಣರಂಜಿತ ಜಾಕೆಟ್ ಧರಿಸಿ ಕ್ಯಾಮೆರಾ ಕಣ್ಣಿಗೆ ಉರ್ಫಿ ಪೋಸ್​ ಕೊಟ್ಟಿದ್ದಾರೆ. ಉರ್ಫಿಯ ಯೂನಿಕ್​ ಸ್ಟೈಲ್​​ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಾತ್ರ ಎಂದಿನಂತೆ ವಿಭಿನ್ನವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.

    VIDEO| ಉರ್ಫಿ ಜಾವೇದ್​​ ತೊಟ್ಟ ಬಟ್ಟೆಯನ್ನು ಮೊದಲ ಬಾರಿಗೆ ಮೆಚ್ಚಿದ ನೆಟ್ಟಿಗರು!

    ಮುಂಬೈನಲ್ಲಿ ಕಾಣಿಸಿಕೊಂಡಾಗ ಉರ್ಫಿ ಜಾವೇದ್ ವರ್ಣರಂಜಿತ ಜಾಕೆಟ್ ಧರಿಸಿದ್ದರು. ಕ್ಯೂಟ್​​ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಟ್ರೋಲ್ ಆಗುವ ಬದಲು, ಪ್ರತಿಯೊಬ್ಬರು ಅವಳ ನೋಟವನ್ನು ಇಷ್ಟಪಟ್ಟು ಮೆಚ್ಚಿದ್ದಾರೆ.  ‘ಇದು ತುಂಬ ಕ್ಯೂಟ್​ ಆಗಿದೆ’ ಎಂದು ನಟಿ ನೇಹಾ ಧೂಪಿಯಾ  ಅವರು ಕಮೆಂಟ್​ ಮಾಡಿದ್ದಾರೆ.

    ಈ ಹಿಂದೆ ಊರ್ಫಿ ಮೊಬೈಲ್​ ಫೋನ್​, ಗಾಜಿನ ಚೂರು, ಎಕ್ಸ್​ ರೇ ಶೀಟ್​, ಮಲ್ಲಿಗೆ ಹೂವು, ತಟ್ಟೆ-ಲೋಟ.. ಹೀಗೆ ಹಲವಾರು ವಸ್ತುಗಳನ್ನು ಬಳಸಿ ತಯಾರಿಸಿದ ಬಗೆಬಗೆಯ ಬಟ್ಟೆಗಳನ್ನು ಅವರು ಧರಿಸಿದ್ದುಂಟು. ಆಗ ನೆಟ್ಟಿಗರಿಗೆ ಊರ್ಫಿ ಸ್ಟೈಲ್​, ಆಕೆ ತೊಡುವ ಬಟ್ಟೆ ಇಷ್ಟವಾಗುತ್ತಿರಲಿಲ್ಲ.

    ಸಣ್ಣ ಟೆಡ್ಡಿ ಬೇರ್‌ಗಳಿಂದ ತಯಾರಿಸಿದ ಉದ್ದದ ಜಾಕೆಟ್, ಹಳದಿ ಬಣ್ಣದ ಉಡುಗೆ ಕಿವಿಯೋಲೆ ತೊಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆಕೆಯ ನೋಟಕ್ಕೆ ಪ್ರತಿಕ್ರಿಯಿಸಿದ ಅನೇಕ ನೆಟಿಜನ್‌ಗಳು ಇದು ಉರ್ಫಿ ಜಾವೇದ್? ಇವನರನ್ನು ಹೀಗೆ ನೋಡುವುದು ನಮ್ಮ ಅದೃಷ್ಟವಾಗಿದೆ. ಮುದ್ದಾಗಿ ಕಾಣಿಸುತ್ತಿದ್ದಾರೆಂದು ಕಾಮೆಂಟ್​​ ಮಾಡುತ್ತಿದ್ದಾರೆ.

    ಚಿಕಿತ್ಸೆ ಫಲಕಾರಿಯಾಗದೇ ಸಿನಿಮಾ ನಟನ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts