

ರಾಜ್ಕೋಟ್: ಕರೊನಾ ಲಾಕ್ಡೌನ್ನಿಂದಾಗಿ ಶಾಲೆಗಳೆಲ್ಲ ಬಂದ್ ಆಗಿವೆ. ಈ ಮಧ್ಯೆ ಕೆಲವು ರಾಜ್ಯಗಳಲ್ಲಿ ಆನ್ಲೈನ್ ಕ್ಲಾಸ್ಗಳೂ ಶುರುವಾಗಿದೆ. ಅದೆಷ್ಟೋ ತೊಡಕುಗಳ ಮಧ್ಯೆಯೂ ಶಿಕ್ಷಕರು ಆನ್ಲೈನ್ ಕ್ಲಾಸ್ ನಡೆಸುತ್ತಿದ್ದಾರೆ. ಮಕ್ಕಳೂ ಕೂಡ ಪಾಲ್ಗೊಳ್ಳುತ್ತಿದ್ದಾರೆ.
ಆದರೆ ಬಡ ವಿದ್ಯಾರ್ಥಿಗಳಿಗೆ ಈ ಸ್ಮಾರ್ಟ್ಫೋನ್, ಕಂಪ್ಯೂಟರ್ಗಳನ್ನು ಖರೀದಿಸುವುದೇ ಸಮಸ್ಯೆಯಾಗುತ್ತಿದೆ. ಮತ್ತೂ ಕೆಲವು ಮಕ್ಕಳು ಆನ್ಲೈನ್ ಕ್ಲಾಸ್ ಒಗ್ಗುತ್ತಿಲ್ಲ. ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಈಗ ಆನ್ಲೈನ್ ಕ್ಲಾಸ್ನಿಂದ ತೀವ್ರ ಒತ್ತಡಕ್ಕೆ ಒಳಗಾದ 12 ವರ್ಷದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗುಜರಾತ್ನ ರಾಜ್ಕೋಟ್ನಲ್ಲಿ ಘಟನೆ ನಡೆದಿದೆ. ಖುಷಿ ಮೃತ ಬಾಲಕಿ. ಇವಳ ತಂದೆ ಆಟೋ ಗ್ಯಾರೇಜ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಬಳಿ ಆನ್ಲೈನ್ ಕ್ಲಾಸ್ಗೆ ಅಗತ್ಯವಾಗಿ ಬೇಕಾದ ಸ್ಮಾರ್ಟ್ಫೋನ್, ಕಂಪ್ಯೂಟರ್ ಏನೂ ಇರಲಿಲ್ಲ. ಲಾಕ್ಡೌನ್ನಿಂದ ಖುಷಿಯ ಕುಟುಂಬವೂ ಸಂಕಷ್ಟದಲ್ಲಿತ್ತು. ಆದರೂ ಅವಳ ತಂದೆ ಕಷ್ಟಪಟ್ಟು ಆಕೆಗೆ 10,000 ರೂ. ಬೆಲೆಯ ಸ್ಮಾರ್ಟ್ಫೋನ್ ಕೊಡಿಸಿದ್ದರು. ತನ್ನ ಮಗಳು ಶಿಕ್ಷಣದಿಂದ ವಂಚಿತಳಾಗಬಾರದು ಎಂಬುದು ಅವರ ಆಶಯವಾಗಿತ್ತು. ಇದನ್ನೂ ಓದಿ: ಜೆಸಿಬಿ ಮಶಿನ್ ಹೊತ್ತ ಟ್ರಕ್ ಸಾಗುತ್ತಿತ್ತು…ಸೇತುವೆ ಕುಸಿದುಬಿತ್ತು; ಭಯಾನಕ ದೃಶ್ಯ ವೈರಲ್
ಆದರೆ ವಿದ್ಯಾರ್ಥಿನಿ ಖುಷಿಗೆ ಆನ್ಲೈನ್ ಕ್ಲಾಸ್ಗೆ ಹೊಂದಿಕೊಳ್ಳಲು ಸಾಧ್ಯವಾಗದೆ ತೀವ್ರ ಒತ್ತಡಕ್ಕೆ ಒಳಗಾಗಿದ್ದಳು. ಶಿಕ್ಷಕರು ಕೊಡುವ ಹೋಂವರ್ಕ್ಗಳನ್ನು ಮಾಡುವುದು ಆಕೆಗೆ ಕಷ್ಟವಾಗುತ್ತಿತ್ತು. ತನ್ನ ಸಹಪಾಠಿಗಳನ್ನು ಭೇಟಿಯಾಗಲಾಗದೆ ತುಂಬ ಬೇಸರ ಮಾಡಿಕೊಂಡಿದ್ದಳು. ಇದೆಲ್ಲ ಸೇರಿ ಆಕೆ ಖಿನ್ನತೆಗೆ ಜಾರುತ್ತಿದ್ದಳು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ನಟಿ ರಾಖಿ ಸಾವಂತ್ ಹೊಟ್ಟೆಯಲ್ಲಿ ಹುಟ್ಟಿಬರಲಿದ್ದಾರಂತೆ ಸುಶಾಂತ್ ಸಿಂಗ್ ರಜಪೂತ್…🤦♀️🙂
ಸೋಮವಾರ ಬೆಳಗ್ಗೆ ಸುಮ್ಮನೆ ಕುಳಿತಿದ್ದ ಖುಷಿಯ ಬಳಿ ಆಕೆಯ ಅಮ್ಮ, ನೀನು ಹೋಂ ವರ್ಕ್ ಬೇಗ ಮುಗಿಸು ಎಂದು ಹೇಳಿದರು. ಆದರೆ ಖುಷಿ, ಸ್ವಲ್ಪ ಹೊತ್ತು ಇರಮ್ಮ..ಎಂದು ಹೇಳಿ ತನ್ನ ರೂಂಗೆ ಹೋದವಳು ಎಷ್ಟೊತ್ತಾದರೂ ವಾಪಸ್ ಬರಲಿಲ್ಲ. ತಾಯಿ ಹೋಗಿ ನೋಡುವಷ್ಟರಲ್ಲಿ ಖುಷಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)