More

    ಜೆಸಿಬಿ ಮಶಿನ್​ ಹೊತ್ತ ಟ್ರಕ್​ ಸಾಗುತ್ತಿತ್ತು…ಸೇತುವೆ ಕುಸಿದುಬಿತ್ತು; ಭಯಾನಕ ದೃಶ್ಯ ವೈರಲ್​

    ಡೆಹ್ರಾಡೂನ್​: ಭಾರತ-ಚೀನಾ ಗಡಿಯ ಬಳಿ ಇರುವ ಬೈಲಿ ಸೇತುವೆ ಕುಸಿದು ಬಿದ್ದಿದ್ದೆ. ಟ್ರಕ್​​ವೊಂದು ಜೆಸಿಬಿ ಮಶಿನ್​​ನ್ನು ಹೊತ್ತು ಸಾಗುತ್ತಿದ್ದ ಸಂದರ್ಭದಲ್ಲೇ ಸೇತುವೆ ಕುಸಿದಿದ್ದು, ಟ್ರಕ್​ ನೀರಿರುವ ಕಂದಕಕ್ಕೆ ಉರುಳಿಬಿದ್ದಿದೆ. ಈ ಭಯಾನಕ ದೃಶ್ಯದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

    ಉತ್ತರಾಖಂಡ ಜಿಲ್ಲೆಯ ಪಿಥೋರ್​ಗಡ್​ನಲ್ಲಿ ಘಟನೆ ನಡೆದಿದೆ. ಉರುಳಿಬಿದ್ದ ಟ್ರಕ್​​ನ ಚಾಲಕ ಮತ್ತು ಜೆಸಿಬಿ ಚಾಲಕ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸೇತುವೆ 40 ಅಡಿ ಉದ್ದವಿದ್ದು, 2009ರಲ್ಲಿ ಕಟ್ಟಲಾಗಿತ್ತು. ಇದರ ಭಾರ ಹೊರುವ ಸಾಮರ್ಥ್ಯ 18 ಟನ್​. ಆದರೆ ಜೆಸಿಬಿ ಮಶಿನ್ ಹೊತ್ತ ಟ್ರಕ್​ ತೂಕ 26 ಟನ್​ಗಳಷ್ಟಾಗಿತ್ತು. ಅತ್ಯಂತ ಭಾರ ಹೊತ್ತ ಟ್ರಕ್​ ಸಾಗಿದ್ದರಿಂದಲೇ ಸೇತುವೆ ಕುಸಿದುಬಿದ್ದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಸೇತುವೆ ಸಂಪೂರ್ಣವಾಗಿ ನಾಶವಾಗಿದ್ದರಿಂದ ಜೋಹಾರ್​ ಕಣಿವೆಯ ಸಮೀಪ ಗಡಿಯಲ್ಲಿರುವ 15 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಟ್ರಕ್​ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲೀಗ ಮತ್ತೊಂದು ಸೇತುವೆ ನಿರ್ಮಾಣ ಮಾಡಲು 15 ದಿನಗಳಾದರೂ ಬೇಕು ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts