More

  ಶ್ರೀನಿವಾಸ ಕಲ್ಯಾಣ ಕಥಾಶ್ರವಣದಿಂದ ಪುಣ್ಯ ಪ್ರಾಪ್ತಿ

  ಭದ್ರಾವತಿ: ಶ್ರೀನಿವಾಸ ದೇವರ ಕಲ್ಯಾಣವಾದ ವೈಶಾಖ ಶುದ್ಧ ದಶಮಿಯಂದು ನಡೆಯುವ ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸಕಲ ಪುಣ್ಯ ದೊರೆಯುತ್ತದೆ ಎಂದು ಶಿವಮೊಗ್ಗದ ಪಂಡಿತ ಕೃಷ್ಣಾಚಾರ್ಯ ರಾಯಚೂರು ಹೇಳಿದರು.

  ಸಿದ್ಧಾರೂಢನಗರದ ಶ್ರೀನಿವಾಸ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣ ಸಮಿತಿ ಹಾಗೂ ಶ್ರೀ ಸಂಕರ್ಷಣ ಧರ್ಮಸಂಸ್ಥೆ ಸಹಕಾರದೊಂದಿಗೆ ಶನಿವಾರ ಏರ್ಪಡಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಉಪನ್ಯಾಸ ನೀಡಿದರು.
  ಅನಂತಗುಣ ಸಂಪನ್ನ ಶ್ರೀನಿವಾಸ ದೇವರ ಕಲ್ಯಾಣೋತ್ಸವ ಜಗತ್ತಿಗೆ ಮಂಗಳವನ್ನುಂಟು ಮಾಡುವ ಲಪ್ರದವಾದ ಮಹೋತ್ಸವ. ಶ್ರೀನಿವಾಸ ಕಲ್ಯಾಣದ ಕಥಾಶ್ರವಣವನ್ನು ಮಾಡುವವರಿಗೆ ಕೋಟಿ ಕನ್ಯಾದಾನ, ಭೂದಾನ ಮಾಡಿದಷ್ಟು ಪುಣ್ಯ ದೊರೆಯುವುದೆಂದು ಭವಿಷ್ಯೋತ್ತರ ಪುರಾಣದಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು.
  ಪಂಡಿತ ಗೋಪಾಲಾಚಾರ್ ದೇವಾಲಯದ ಮೂಲ ದೇವರಿಗೆ ಪೂಜೆ ನೆರವೇರಿಸಿದರು. ಉತ್ಸವಮೂರ್ತಿ ಭೂದೇವಿ, ಶ್ರೀದೇವಿಯರನ್ನೊಳಗೊಂಡ ಶ್ರೀನಿವಾಸ ದೇವರಿಗೆ ಕಲ್ಯಾಣೋತ್ಸವದ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಶಾಸೋಕ್ತವಾಗಿ ನೆರವೇರಿಸಲಾಯಿತು.
  ಮಹಾಮಂಗಳಾರತಿ ನಂತರ ಸೇವಾಕರ್ತರು ಹಾಗೂ ಭಕ್ತಾದಿಗಳಿಗೆ ಸಮಿತಿಯಿಂದ ತೀರ್ಥಪ್ರಸಾದ ಮತ್ತು ಲ ಮಂತ್ರಾಕ್ಷತೆ ವಿತರಿಸಲಾಯಿತು. ಶ್ರೀ ಸಂಕರ್ಷಣ ಧರ್ಮಸಂಸ್ಥೆ ಅಧ್ಯಕ್ಷ ವಾಸುದೇವ್, ಶ್ರೀನಿವಾಸ ಕಲ್ಯಾಣ ಸಮಿತಿ ಅಧ್ಯಕ್ಷ ಕಲ್ಲಾಪುರ ರಾಮಚಂದ್ರ, ಕಾರ್ಯದರ್ಶಿ ಜಯತೀರ್ಥ, ವೆಂಕಟೇಶ್, ಶ್ರೀಮಠದ ಅರ್ಚಕ ಮಾಧುರಾವ್, ಜಗನ್ನಾಥಾಚಾರ್, ವೆಂಕಟೇಶ, ಶ್ರೀನಿವಾಸಾಚಾರ್, ಶೇಷಗಿರಿ ಆಚಾರ್, ರಾಘವೇಂದ್ರಾಚಾರ್, ಡಾ. ಸುದರ್ಶನಾಚಾರ್, ರಮಾಕಾಂತ, ಸುಧೀಂದ್ರ ರಾವ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts