ಮದುವೆ ಮಂಟಪದಲ್ಲಿದ್ದ ವರನನ್ನು ಎಳೆದೊಯ್ದ ಪೊಲೀಸ್​! ಅಷ್ಟಕ್ಕೂ ಅಲ್ಲಾಗಿದ್ದಾದರೂ ಏನು?

mar
Published on

ಲಖನೌ: ಮದುವೆಯಾಗಿ ಹೆಂಡತಿಯನ್ನು ಮನೆ ತುಂಬಿಸಿಕೊಳ್ಳಲು ಕರೆದುಕೊಂಡು ಹೋಗಬೇಕು ಎನ್ನುವ ಸಂತಸದಲ್ಲಿದ್ದ ವರನಿಗೆ ಪೊಲೀಸರು ಮದುವೆ ಮಂಟಪದಲ್ಲೇ ಶಾಕ್​ ನೀಡಿರುವ ಘಟನೆ ಉತ್ತರಪ್ರದೇಶದ ಪಿಲಿಭಿಟ್​ನಲ್ಲಿ ನಡೆದಿದೆ.

ಆ ವ್ಯಕ್ತಿ ಮದುವೆಗೆಂದು ಮಂಟಪದಲ್ಲಿ ಕುಳಿತಿದ್ದ. ಆ ವೇಳೆಗೆ ಅಲ್ಲಿಗೆ ಒಂದು ಹೆಂಗಸು ಪೊಲೀಸರೊಂದಿಗೆ ಬಂದಿದೆ. ಈಗ ಮದುವೆಯಾಗುತ್ತಿರುವ ವರ ನನ್ನ ಗಂಡ. ನಮಗೆ 2012ರಲ್ಲೇ ಮದುವೆಯಾಗಿದೆ. ಆದರೆ ಮದುವೆಯಾದ ಮೇಲೆ ನಮ್ಮಿಬ್ಬರ ನಡುವೆ ಜಗಳವಾಗುತ್ತಿರುತ್ತಿತ್ತು. ಅತ್ತೆ ಮಾವ ಕೂಡ ವರದಕ್ಷಿಣೆಗಾಗಿ ಕಾಡಿಸಲಾರಂಭಿಸಿದ್ದರು. ಅದಕ್ಕಾಗಿ ನಾನು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ನಡುವೆ ಅವರು ಎರಡನೇ ಮದುವೆಯಾಗುತ್ತಿದ್ದಾರೆ ಎಂದು ಆಕೆ ಪೊಲೀಸರಿಗೆ ದೂರು ನೀಡಿ ಕರೆದುಕೊಂಡು ಬಂದಿದ್ದಾಳೆ.

ಸ್ಥಳಕ್ಕೆ ಬಂದ ಪೊಲೀಸರು ಮದುವೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಆರೋಪಿ ಸ್ಥಾನದಲ್ಲಿರುವ ವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ತನಿಖೆಯಿಂದ ಹೊರಬರಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net