ವಿಮಾನ ಪ್ರಯಾಣದ ವೇಳೆ ಮಾಸ್ಕ್ ಧರಿಸದಿದ್ರೆ 'ನೋ ಫ್ಲೈ ಲಿಸ್ಟ್'​ಗೆ ಸೇರ್ಪಡೆ

airport new
Published on

ನವದೆಹಲಿ: ದೇಶಿಯ ವಿಮಾನಗಳಲ್ಲಿ ಪ್ರಯಾಣದ ಅವಧಿಗೆ ಅನುಗುಣವಾಗಿ ಪ್ಯಾಕ್ ಮಾಡಿದ ಆಹಾರ ಹಾಗೂ ಪಾನೀಯಗಳು ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬಿಸಿ ಆಹಾರವನ್ನು ಪೂರೈಸಲು ವಾಯುಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಎಸ್​ಒಪಿಗಳನ್ನು ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿದೆ.

ಆಹಾರ ಮತ್ತು ಪಾನೀಯಗಳನ್ನು ಪೂರೈಸುವಾಗ ಒಂದೇ ಬಾರಿ ಬಳಸುವಂತಹ ಟ್ರೇ ಹಾಗೂ ತಟ್ಟೆಗಳನ್ನು ನೀಡಬೇಕು. ಸಿಬ್ಬಂದಿ ಹೊಸ ಗ್ಲೌಸ್​ಗಳನ್ನು ಧರಿಸಬೇಕು. ಪ್ರಯಾಣಿಕರಿಗೆ ಮನೋರಂಜನಾ ಸೌಲಭ್ಯಗಳನ್ನೂ ಒದಗಿಸಲು ಒಮ್ಮೆ ಉಪಯೋಗಿಸಿ ಬಿಸಾಡಬಹುದಾದ ಅಥವಾ ಸೋಂಕು ರಹಿತವಾಗಿ ಸ್ವಚ್ಛಗೊಳಿಸಿದ ಇಯರ್​ಫೋನ್​ಗಳನ್ನು ಪ್ರಯಾಣಿಕರಿಗೆ ನೀಡಬೇಕು ಎಂದು ಸಚಿವಾಲಯ ತಿಳಿಸಿದೆ.

ಜತೆಗೆ ವಿಮಾನದಲ್ಲಿ ಫೇಸ್​ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ನೋ-ಫ್ಲೈ ಪಟ್ಟಿಯಲ್ಲಿ ಸೇರಿಸಬಹುದು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net