More

    ಪದ್ಮಪುರಸ್ಕಾರ 2021 ಆನ್​ಲೈನ್ ಅರ್ಜಿ ಸಲ್ಲಿಕೆಗೆ ಸೆ.15 ರ ತನಕ ಅವಕಾಶ

    ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿರುವ ಪದ್ಮ ಪುರಸ್ಕಾರಕ್ಕೆ ಆನ್​ಲೈನ್ ನಾಮನಿರ್ದೇಶನ ಮಾಡುವುದಕ್ಕೆ ಸೆಪ್ಟೆಂಬರ್ 15ರ ತನಕ ಕಾಲಾವಕಾಶ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2021ನೇ ಸಾಲಿನ ಪದ್ಮಪುರಸ್ಕಾರವನ್ನು 2021ರ ಗಣರಾಜ್ಯೋತ್ಸವ ದಿನ ಪ್ರದಾನಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಆನ್​ಲೈನ್​ ನಾಮ ನಿರ್ದೇಶನ ಪ್ರಕ್ರಿಯೆ ಮೇ 1ರಂದು ಆರಂಭವಾಗಿತ್ತು.

    ಪದ್ಮ ಪುರಸ್ಕಾರಗಳು ಎಂದರೆ ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಪುರಸ್ಕಾರಗಳು. ಇವುಗಳನ್ನು 1954ರಲ್ಲಿ ಪ್ರಾರಂಭಿಸಲಾಗಿದ್ದು, ಪ್ರತಿ ವರ್ಷ ಗಣರಾಜ್ಯೋತ್ಸವದಂದು ಪ್ರದಾನಮಾಡಲಾಗುತ್ತದೆ. ಇದುವರೆಗೆ, ಪೋರ್ಟಲ್ ಮೂಲಕ 8,035 ನಾಮನಿರ್ದೇಶನಗಳಾಗಿವೆ. ಈ ಪೈಕಿ 6,361 ನಾಮನಿರ್ದೇಶನಗಳನ್ನು ಪರಿಶೀಲಿಸಿ ಅರ್ಹವಾದವುಗಳನ್ನು ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಸಾಯುವುದಕ್ಕೆ ಮುನ್ನ ಸುಶಾಂತ್ ಗೂಗಲ್​ನಲ್ಲಿ ಏನು ಹುಡುಕುತ್ತಿದ್ದರು?

    ಪ್ರತಿಷ್ಠಿತ ಪುರಸ್ಕಾರಕ್ಕೆ ಅರ್ಹರನ್ನು ನಾಮ ನಿರ್ದೇಶನ ಮಾಡುವುದಕ್ಕೆ ಇನ್ನೂ ಸಮಯಾವಕಾಶ ಇರುವ ಕಾರಣ, ಪದ್ಮ ಪುರಸ್ಕಾರದ ಪೋರ್ಟಲ್ https://padmaawards.gov.in ಮೂಲಕ ನಾಮ ನಿರ್ದೇಶನ ಮಾಡಬಹುದು. (ಏಜೆನ್ಸೀಸ್)

    ಮುಂದಿನ 50 ವರ್ಷ ಕಾಲ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೇ ಮುಂದುವರಿಯಲಿದೆ ಹೀಗಾದ್ರೆ…: ಗುಲಾಂ ನಬಿ ಆಜಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts