ಇಬ್ಬರು ಸಚಿವರಿಗೆ ಹೆಚ್ಚುವರಿ ಖಾತೆ ಹೊಣೆ; ಯಾರಿಗೆ, ಯಾವುದು?

Vidhanasoudha
Published on

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಸಚಿವ ಸಂಪುಟ ರಚನೆಗೊಂಡಿದ್ದರೂ ಸಚಿವ ಸ್ಥಾನಾಂಕ್ಷಿಗಳ ಅಸಮಾಧಾನ ಇನ್ನೂ ಹೊಗೆಯಾಡುತ್ತಿದೆ. ಇದರ ನಡುವೆಯೇ ಇಬ್ಬರು ಸಚಿವರಿಗೆ ಹೆಚ್ಚುವರಿ ಖಾತೆ ನೀಡಲಾಗಿದೆ.

ನೂತನ ಸಚಿವ ಸಂಪುಟಕ್ಕೆ ಎರಡನೇ ಹಂತದಲ್ಲಿ ಆಯ್ಕೆ ಆಗಿದ್ದ 24 ಸಚಿವರು ಮೇ 27ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಅದರ ಬೆನ್ನಿಗೆ ಯಾರ್ಯಾರಿಗೆ ಯಾವ್ಯಾವ ಖಾತೆ ಎಂಬ ಬಗ್ಗೆ ನಕಲಿ ಪಟ್ಟಿಯೊಂದು ಹರಿದಾಡಿತ್ತು.

ಕೊನೆಗೂ ಮೇ 29ರ ತಡರಾತ್ರಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅಷ್ಟೂ ಸಚಿವರ ವಿವರಗಳನ್ನು ಖಾತೆ ಸಹಿತ ಪ್ರಕಟಿಸಲಾಗಿತ್ತು. ಅದಾದ ಬೆನ್ನಿಗೇ ಕೆಲವರು ಸಚಿವ ಸ್ಥಾನ ಸಿಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಸಚಿವ ಸ್ಥಾನಾಕಾಂಕ್ಷಿಗಳ ಅಸಮಾಧಾನ ಬೂದಿಮುಚ್ಚಿದ ಕೆಂಡಂತಿದೆ.

ಈ ನಡುವೆ ಇಂದು ಇಬ್ಬರು ಸಚಿವರಿಗೆ ಹೆಚ್ಚುವರಿ ಖಾತೆ ಹಂಚಿಕೆ ಆಗಿದೆ. ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆಯ ಜವಾಬ್ದಾರಿ ಹೊತ್ತಿರುವ ಪ್ರಿಯಾಂಕ್ ಖರ್ಗೆಗೆ ಹೆಚ್ಚುವರಿಯಾಗಿ ಐಟಿ-ಬಿಟಿ ಖಾತೆಯನ್ನೂ ಕೊಡಲಾಗಿದೆ. ಹಾಗೆಯೇ ಬೃಹತ್​ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾಗಿರುವ ಎಂ.ಬಿ.ಪಾಟೀಲರಿಗೆ ಹೆಚ್ಚುವರಿಯಾಗಿ ಮೂಲಸೌಕರ್ಯ ಅಭಿವೃದ್ಧಿ ಹೊಣೆಯನ್ನೂ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net