

Gold rate reaches record high: ಫೆ.1ರಂದು ಕೇಂದ್ರ ಬಜೆಟ್ ಮಂಡನೆ ಕಾರಣದಿಂದಾಗಿ ಚಿನ್ನದ ಬಹು ಬೇಡಿಕೆ ಪರಿಣಾಮ ಜನವರಿಯಲ್ಲೇ ಗೋಲ್ಡ್ ರೇಟ್ ಗರಿಷ್ಠ ಮಟ್ಟ ತಲುಪಿದೆ ಎಂದು ವರದಿಯಾಗಿದೆ.
ಹೌದು, ಬಜೆಟ್ಲ್ಲಿ ಚಿನ್ನದ ದರ ಏರಿಕೆ ಆಗುವ ನಿರೀಕ್ಷೆಯಿಂದ ಚಿನ್ನ ಮಾರಾಟ ಮಾಲೀಕರು ಮತ್ತು ಚಿನ್ನ ಖರೀದಿದಾರ ಬೇಡಿಕೆಯಿಂದ ಒಂದೇ ತಿಂಗಳಲ್ಲಿ (ಜ.1ರಿಂದ) ಭಾರೀ ಪ್ರಮಾಣ ಗೋಲ್ಡ್ ರೇಟ್ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದೆ 10 ಗ್ರಾಂ ಚಿನ್ನಕ್ಕೆ 82,840 ರೂ. ಇದ್ದ ದರ ತಿಂಗಳಾಂತ್ಯದಲ್ಲಿ ಇದೀಗ 10 ಗ್ರಾಂಗೆ 83,750 ರೂ.ಗೆ ಏರಿಕೆಯಾಗಿದೆ.
ಜ.1ರಂದು ಪ್ರತಿ 10 ಗ್ರಾಂ ಚಿನ್ನಕ್ಕೆ 79,390 ರೂ. ಇತ್ತು. ಬಳಿಕ ಇದೀಗ 10 ಗ್ರಾಂಗೆ 83,750 ರೂ.ಗೆ ಏರಿಕೆಯಾಗಿದೆ. ಎರಡು ದಿನಗಳ ಕುಸಿತ ನಂತರ ಶೇ. 99.5 ಶುದ್ಧತೆಯ ಚಿನ್ನ 910 ರೂ. ಏರಿಕೆಯಾಗಿದೆ. ಮಾರ್ಕೆಟ್ನಲ್ಲಿ ಒಂದೇ ತಿಂಗಳಲ್ಲಿ ಏರಿಳಿತ ಕಂಡ ಚಿನ್ನದ ದರ 4,400 ರೂ. ಏರಿಕೆಯಾಗಿ ಐತಿಹಾಸಿಕ ಗರಿಷ್ಟ ಮಟ್ಟ ತಲುಪಿದೆ. ಅಲ್ಲದೆ, ಪ್ರತಿ ಕೆಜಿಗೆ 92,000 ರೂಪಾಯಿ ಇದ್ದ ಬೆಳ್ಳಿಯ ಬೆಲೆ ಕೆಜಿಗೆ 1,000 ರೂಪಾಯಿ ಏರಿಕೆಯಾಗಿ 93,000 ರೂಪಾಯಿಗಳಿಗೆ ತಲುಪಿದೆ.
ಫೆಬ್ರವರಿ ತಿಂಗಳಿಗೆ 80,517 ರೂಪಾಯಿಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಲು ಚಿನ್ನವು 228 ರೂಪಾಯಿಗಳಷ್ಟು ಏರಿಕೆಯಾಗಲಿದೆ. ಏಪ್ರಿಲ್ಗೆ 10 ಗ್ರಾಂಗೆ 81,098 ರೂ.ಗೆ ತಲುಪಿದೆ. ಡಾಲರ್ ಸೂಚ್ಯಂಕ ಏರಿಕೆ ಮತ್ತು ಅಮೆರಿಕದಲ್ಲಿ ದುರ್ಬಲ ಗ್ರಾಹಕರ ಬೇಡಿಕೆಯ ದತ್ತಾಂಶದಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಅಮೆರಿಕಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರೀಕ್ಷಿತ ಸುಂಕದ ಯೋಜನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಾಪಾರಿಗಳು ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡುತ್ತಿರುವುದರಿಂದ ಬುಧವಾರ ಚಿನ್ನವು ಏರಿಕೆ ಕಂಡಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ಹಿರಿಯ ವಿಶ್ಲೇಷಕ (ಸರಕು) ಸೌಮಿಲ್ ಗಾಂಧಿ ಹೇಳಿದ್ದಾರೆ.(ಏಜೆನ್ಸೀಸ್)