ನಿದ್ರೆಯಲ್ಲಿ ಈ ಕನಸುಗಳೇನಾದರೂ ಕಂಡರೆ ನಿಮಗೆ ಅಪಾಯ ಕಾದಿದೆ ಎಂದರ್ಥ! Bad Dreams

Bad Dreams
Published on

Bad Dreams : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ, ಅದು ಕನಸು. ಕನಸು ಕಾಣುವುದು ಸಾಮಾನ್ಯ. ಕೆಲವೊಮ್ಮೆ ಕನಸಿನಲ್ಲಿ ಬೆಟ್ಟಗಳು, ನದಿಗಳು, ಕಾಡುಗಳು, ವಸ್ತುಗಳು ಮತ್ತು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಹಾವು, ಹುಲಿ, ಸಿಂಹ ಮತ್ತು ಆನೆಗಳು ಕಾಣಸಿಕೊಂಡಾಗ ಕೆಲವರು ಭಯ ಪಡುತ್ತಾರೆ. ಮರುದಿನ ಬೆಳಗ್ಗೆ ಎದ್ದಾಗ ಅದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಅಲ್ಲದೆ, ಏನಾಗುತ್ತದೆ ಎಂದು ಚಿಂತಿಸುತ್ತಾರೆ.

ಕನಸಿನಲ್ಲಿ ಏನೇ ಕಂಡರು ಅದರ ಹಿಂದೆ ಒಂದು ಸೂಚನೆ ಇರುತ್ತದೆ ಎಂದು ದೊಡ್ಡವರು ಹೇಳುವುದನ್ನು ನೀವು ಕೇಳುತ್ತೀರುತ್ತೀರಿ. ಅದೇ ರೀತಿ ಕನಸಿನಲ್ಲಿ ಕಾಗೆ ಕಂಡರೂ ಅಲ್ಲೊಂದು ಸೂಚನೆ ಇದೆಯಂತೆ. ಕೆಲವರು ತಮ್ಮ ಕನಸಿನಲ್ಲಿ ಕಾಗೆಗಳನ್ನು ನೋಡುತ್ತಾರೆ. ಈ ರೀತಿ ಕನಸಿನಲ್ಲಿ ಕಾಗೆ ಕಾಣಿಸಿಕೊಂಡರೆ, ಅದು ಅಶುಭದ ಸಂಕೇತವಾಗಿದೆ. ಮುಂದಾಗುವ ಗಂಭೀರ ಅಪಾಯದ ಮುನ್ಸೂಚನೆಯಾಗಿದೆ. ಕಾಗೆಯು ಕನಸಿನಲ್ಲಿ ಬಂದಾಗ, ಸಾವಿನ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ ಎಂದು ಹಿಂದು ಪಂಡಿತರು ಹೇಳುತ್ತಾರೆ.

ಕನಸಿನಲ್ಲಿ ಕಾಗೆಯನ್ನು ನೋಡುವುದು ಎಂದರೆ ನಿಮ್ಮ ಜೀವನವು ಬಹಳಷ್ಟು ಬದಲಾಗುತ್ತದೆ ಎಂದರ್ಥ. ಅಂತಹ ಕನಸುಗಳು ಬಿದ್ದಾಗ, ಮನೆಯ ಹಿರಿಯರು ಮರುದಿನ ಬೆಳಿಗ್ಗೆ ಶನಿ ದೇವರನ್ನು ಭೇಟಿ ಮಾಡಬೇಕೆಂದು ಹೇಳುತ್ತಾರೆ. ಈ ರೀತಿ ಶನಿ ದೇವರನ್ನು ಭೇಟಿ ಮಾಡಿದರೆ ಯಾವುದೇ ಅಪಾಯ ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ.

ಕಾಗೆಯಲ್ಲದೆ, ನಿಮ್ಮ ಕನಸಿನಲ್ಲಿ ಕಪ್ಪು ಬಟ್ಟೆ ಅಥವಾ ಕಪ್ಪು ವಸ್ತುಗಳೇನಾದರೂ ಕಾಣಿಸಿಕೊಂಡರೆ, ಅವು ಅನಾರೋಗ್ಯವನ್ನು ಸೂಚಿಸುತ್ತವೆ. ಕೆಲವರು ನಿದ್ರೆಗೆ ಜಾರಿದಾಗ ಕನಸಿನಲ್ಲಿ ಬಿರುಗಾಳಿ ಅಥವಾ ಮನೆ ಕುಸಿತದಂತಹ ಘಟನೆಗಳನ್ನು ನೋಡುತ್ತಾರೆ. ಅಂತಹ ಕನಸುಗಳು ಬಂದಾಗ, ಬಹಳಷ್ಟು ನಷ್ಟವನ್ನು ಎದುರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ನಿಮ್ಮ ಕನಸಿನಲ್ಲಿ ಚಂದ್ರಗ್ರಹಣ ಅಥವಾ ಸೂರ್ಯಗ್ರಹಣದಂತಹ ದೃಶ್ಯಗಳನ್ನು ನೋಡಿದರೆ, ಅದನ್ನು ಅಶುಭವೆಂದು ಪರಿಗಣಿಸಬೇಕು. ಅಂತಹ ಕನಸು ಕಂಡರೆ, ನಿಮ್ಮ ಜೀವನದಲ್ಲಿ ನೀವು ತುಂಬಾ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕಾಡು ಪ್ರಾಣಿಗಳು ನಿಮ್ಮನ್ನು ಬೆನ್ನಟ್ಟುತ್ತಿರುವಂತೆ ಕನಸು ಕಂಡರೆ, ಅದು ನಕಾರಾತ್ಮಕ ಫಲಿತಾಂಶಗಳ ಸಂಕೇತವಾಗಿದೆ. ಇದಲ್ಲದೆ, ಅಂತಹ ಕನಸುಗಳು ಆರ್ಥಿಕ ನಷ್ಟವನ್ನು ಸೂಚಿಸುತ್ತವೆ. ನಿಮ್ಮ ಕನಸಿನಲ್ಲಿ ನೀವು ಯಾವುದೇ ಶಬ್ದಗಳನ್ನು ಕೇಳಿದರೆ, ಅದನ್ನು ಮನೆಯಲ್ಲಿ ಕುಟುಂಬ ಸದಸ್ಯರ ನಡುವಿನ ಸಂಘರ್ಷದ ಸಂಕೇತವೆಂದು ಪರಿಗಣಿಸಬೇಕು.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net