

King Kohli: ಟೀಮ್ ಇಂಡಿಯಾದ ದಿಗ್ಗಜ, ರನ್ ಮಿಷನ್ ವಿರಾಟ್ ಕೊಹ್ಲಿ 12 ವರ್ಷಗಳ ಬಳಿಕ ರಣಜಿ ಟ್ರೋಫಿ ಆಡಲು ಮರಳಿರುವುದರಿಂದ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ದೆಹಲಿಯ ಅರುಣ್ ಜಟ್ಲಿ ಮೈದಾನದಲ್ಲಿ ನೆರದಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಕ್ರೀಡಾಂಗಣಕ್ಕೆ ನುಗ್ಗಿ ಕೊಹ್ಲಿ ಕಾಲಿಗೆರಗಿ ನಮಸ್ಕರಿಸಿದ್ದಾನೆ. ಇದೀಗ ಇದರ ವಿಡಿಯೋ ಕ್ಲಿಪ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿರಾಟ್ 12 ವರ್ಷಗಳ ಬಳಿಕ ದೆಹಲಿ ಪರ ಕಣಕ್ಕಿಳಿದ್ದು, ದೆಹಲಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ, ಅಲ್ಲದೆ, ಮುಂಜಾನೆಯಿಂದಲೇ ಅಪಾರ ಅಭಿಮಾನಿಗಳು ಸ್ಟೇಡಿಯಂನತ್ತ ಧಾವಿಸುತ್ತಿದ್ದಾರೆ. ಕ್ರೀಡಾಂಗಣದ ಹೊರಗೆ ಭಾರಿ ಸಂಖ್ಯೆಯಲ್ಲಿ ಫ್ಯಾನ್ ಜಮಾಯಿಸಿದ್ದು, ಬರೊಬ್ಬರಿ 2 ಕಿಲೊಮೀಟರ್ವರೆಗೂ ಸರದಿ ಸಾಲಲ್ಲಿ ಕ್ರಿಕೆಟ್ ಅಭಿಮಾನಿಗಳು ನಿಂತಿದ್ದಾರೆ. ಅಲ್ಲದೆ ಅಭಿಮಾನಿಗಳ ನುಕು ನುಗ್ಗಲು ಏರ್ಪಟ್ಟಿದೆ ಎಂದು ವರದಿಯಾಗಿದೆ. ಭಾರಿ ಪ್ರಮಾಣದಲ್ಲಿ ಪ್ಯಾನ್ಸ್ ನೆರೆದಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರಣಜಿ ಪಂದ್ಯ ನಡೆಯುತ್ತಿರುವಾ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ನೇರವಾಗಿ ಕೊಹ್ಲಿ ಇದ್ದ ಕಡೆ ಹೋಗಿ ವಿರಾಟ್ ಕಾಲಿಗೆರಗಿ ನಮಸ್ಕಾರ ಮಾಡಿದ್ದಾನೆ. ಕೂಡಲೇ ಎಚ್ಚರ ಭದ್ರತಾ ಸಿಬ್ಬಂದಿಗಳು ಆತನನ್ನು ಹೊರ ಕಳುಹಿಸದರು. ಇದೀಗ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಸದ್ಯಕ್ಕೆ ದೆಹಲಿ ಮತ್ತು ರೈಲ್ವೆಸ್ ತಂಡಗಳ ನಡುವಿನ ಪಂದ್ಯ ನಡೆಯುತ್ತಿದ್ದು, ರೈಲ್ವೆಸ್ ಬ್ಯಾಟಿಂಗ್(ಇನ್ನಿಂಗ್ಸ್) ಬಳಿಕ ಕೊಹ್ಲಿಯ ಬ್ಯಾಟಿಂಗ್ ನೋಡಬಹದು. ಇದಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. (ಏಜೆನ್ಸೀಸ್)