More

    ಕರಾಳ ಘಟನೆ ‘ಗೋಧ್ರಾ’ ಚಿತ್ರದ ಟೀಸರ್ ರಿಲೀಸ್

    ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘನಘೋರ ಗೋಧ್ರಾ ಘಟನೆಯು 2002ರ ಫೆಬ್ರವರಿ 27ರಂದು ಗುಜರಾತ್‌ನಲ್ಲಿ ನಡೆದಿತ್ತು. ಸದ್ಯ, ಈ ಕುರಿತಾದ ಸಿನಿಮಾವೊಂದು ಬೆಳ್ಳಿತೆರೆಗೆ ಬರಲು ಸಿದ್ಧವಾಗಿದ್ದು, ಆಕಸ್ಮಿಕವೋ ಅಥವಾ ದುರುದ್ಧೇಶವೋ ಗೋಧ್ರಾ(accident or conspiracy godhra) ಎಂಬ ಚಿತ್ರದ ಟೀಸರ್​ ಬಿಡುಗಡೆ ಆಗಿದೆ.

    ಇದನ್ನೂ ಓದಿ: VIDEO | ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ; ಇದು ನಮ್ಮ ಸಂಸ್ಕೃತಿ ಎಂದ ನೆಟ್ಟಿಗರು!

    ಸದ್ಯ ಬಿಡುಗಡೆಯಾಗಿರುವ ಟೀಸರ್‌ನಲ್ಲಿ, ಗೋಧ್ರಾ ದುರಂತದ ಚಿತ್ರಣವನ್ನು ನೋಡಬಹುದಾಗಿದೆ. ಇದು ಸತ್ಯ ಘಟನೆಗಳನ್ನು ಆಧರಿಸಿದ್ದು, ಸಾಬರಮತಿ ಎಕ್ಸ್‌ಪ್ರೆಸ್ ಮೇಲಿನ ದಾಳಿಯನ್ನು ಘೋರ ಎಂದು ಟೀಸರ್​ನಲ್ಲಿ ಕರೆದಿದೆ. ಅನೇಕ ನೆಟ್ಟಿಗರು ಇದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು, ಈ ಘಟನೆಯ ಕುರಿತು ಇಂದಿಗೂ ಆಗಾಗ ವಿವಾದ ಭುಗಿಲೇಳುತ್ತಲೇ ಇರುತ್ತವೆ.

    ಅಂದು ಗೋಧ್ರಾದಲ್ಲಿ ನಡೆದ ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬುದನ್ನು ಚಿತ್ರದಲ್ಲಿ ಸೆರೆ ಹಿಡಿಯಲು ಯತ್ನಿಸಲಾಗಿದೆ. ಚಿತ್ರವನ್ನು ಎಂ.ಕೆ.ಶಿವಾಕ್ಷ್ ನಿರ್ದೇಶಿಸುತ್ತಿದ್ದು, ಬಿ.ಜೆ. ಪುರೋಹಿತ್ ಹಾಗೂ ರಾಮ್​ ಕುಮಾರ್​ ಪಾಲ್​ ಎಂಬುವರು ನಿರ್ಮಿಸುತ್ತಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts