More

    ಗೃಹಲಕ್ಷ್ಮಿ ಯೋಜನೆಯ 2000 ರೂ. ಅತ್ತೆಗೋ? ಸೊಸೆಗೋ? ಉತ್ತರ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೇರಿದ ಪ್ರಾರಂಭದ ದಿನದಿಂದಲೂ ವಿರೋಧ ಪಕ್ಷಗಳು, ಕೈ ಪ್ರಣಾಳಿಕೆಯಲ್ಲಿ ನೀಡಿದ 5 ಗ್ಯಾರಂಟಿಗಳ ಜಾರಿ ಬಗ್ಗೆ ಬೆಂಬಿಡದೆ ಪ್ರಶ್ನಿಸುತ್ತಿವೆ. ಈ ಬಗ್ಗೆ ರಾಜ್ಯದ ಜನತೆ ಕೂಡ ಪ್ರಶ್ನೆಗಳ ಹೊಳೆಯನ್ನೇ ಹರಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; 4% ತುಟ್ಟಿ ಭತ್ಯೆ ಹೆಚ್ಚಿಸಿದ ರಾಜ್ಯ ಸರ್ಕಾರ

    ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳ ಮಧ್ಯೆ ಗೃಹಲಕ್ಷ್ಮೀ ಯೋಜನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮಹಿಳೆಯರಿಗೆ ಟ್ವಿಸ್ವ್​ವೊಂದನ್ನು ನೀಡಿದ್ದಾರೆ.

    ರಾಜ್ಯದ ಹಲವು ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಅಡಿ ನೀಡುವ 2000 ರೂ. ಹಣವನ್ನು ಮನೆಯಲ್ಲಿರುವ ಅತ್ತೆಗೆ ಕೊಡುತ್ತೀರೋ, ಸೊಸೆಗೆ ಕೊಡುತ್ತೀರೋ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ಮನೆಯಲ್ಲಿ ಸೊಸೆಗೂ ಮೊದಲು ಅತ್ತೆ ಹಿರಿಯರಾಗಿರುತ್ತಾರೆ. ಮನೆಯಲ್ಲಿ ಹಿರಿಯರಾದ ಅತ್ತೆಗೆ ಪ್ರಾಧಾನ್ಯತೆ ನೀಡಬೇಕಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

    ಇದನ್ನೂ ಓದಿ: ಪ್ರಧಾನಿ ಬಗ್ಗೆ ಮಾತನಾಡುವಷ್ಟು ನೀವು ದೊಡ್ಡ ಮನುಷ್ಯರಲ್ಲ; ಸಿಎಂ ವಿರುದ್ಧ ಪ್ರತಾಪ್ ಸಿಂಹ ಗರಂ

    ಮನೆಯಲ್ಲಿ ಅತ್ತೆ ಹಿರಿಯರಾದ ಕಾರಣ ಅತ್ತೆಗೇ ಮೊದಲ ಆದ್ಯತೆ, ನಮ್ಮ ಸಂಸ್ಕೃತಿಯಲ್ಲಿ ಅತ್ತೆಯೇ ಮನೆಯ ಯಜಮಾನಿ. ಹಾಗಾಗಿ, ಅತ್ತೆಗೆ ಈ ಯೋಜನೆಯ ಹಣ ದೊರೆಯಲಿದೆ ಎಂದು ಹೇಳಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಬೆಂಬಲ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಈ ಯೋಜನೆಯಡಿ ಸಿಗುವ ಹಣವನ್ನು ಸ್ವತಃ ಅತ್ತೆಯೇ ಮುಂದೆ ಬಂದು ಸೊಸೆಗೆ ಹಸ್ತಾಂತರಿಸಲು ಬಯಸಿದರೆ ಮಾತ್ರ ಸೊಸೆಗೆ ನೆರವು ದೊರೆಯಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts