More

  VIDEO | ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ; ಇದು ನಮ್ಮ ಸಂಸ್ಕೃತಿ ಎಂದ ನೆಟ್ಟಿಗರು!

  ಅಹಮದಾಬಾದ್: ಆಲ್​ರೌಂಡರ್​ ರವೀಂದ್ರ ಜಡೇಜಾ (15*ರನ್, 6 ಎಸೆತ, 1 ಬೌಂಡರಿ, 1 ಸಿಕ್ಸರ್ ಹಾಗೂ 38ಕ್ಕೆ 1 ವಿಕೆಟ್) ಕೊನೇ ಓವರ್​ನಲ್ಲಿ ನಡೆಸಿದ ದಿಟ್ಟ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡ ಐಪಿಎಲ್-16ರಲ್ಲಿ ಚಾಂಪಿಯನ್ ಪಟ್ಟವೇರಿದೆ. ಗೆಲುವಿನ ರುವಾರಿ ಜಡೇಜಾ ಬ್ಯಾಟಿಂಗ್ ಬಗ್ಗೆ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದ್ದು, ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.

  ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿಗೆ ಕಪ್ ಗೆಲ್ಲಲು ನೆರವಾಗಿರುವ ಜಡೇಜಾ ಪತ್ನಿಯ ಸಂಭ್ರಮಾಚರಣೆಯ ಫೋಟೋ/ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸಿಎಸ್​ಕೆ ವಿಜಯ ಸಾಧಿಸುತ್ತಿದ್ದಂತೆ ಒಂದೆಡೆ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದರೆ, ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಖುಷಿಯಿಂದಲೇ ಕಣ್ಣೀರಿಟ್ಟಿದ್ದಾರೆ.

  ಗೆಲುವಿನ ಸಂಭ್ರಮದೊಂದಿಗೆ ರಿವಾಬಾ ಜಡೇಜಾ ಕಣ್ಣೀರುಡುತ್ತಲೇ ಮೈದಾನದೊಳಗೆ ಆಗಮಿಸುತ್ತಿದ್ದಂತೆ ಜಡೇಜಾ ತಬ್ಬಿಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ಪತ್ನಿ ಜಡೇಜಾ ಕಾಲಿ ಬಿದ್ದು ನಮಸ್ಕರಿಸುತ್ತಾರೆ. ಇದೇ ವೇಳೆ ಓಡಿ ಬಂದ ಮಗಳು ಜಡೇಜಾ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದ್ದಾಳೆ. ಇದೀಗ ರಿವಾಬಾ ಜಡೇಜಾ ಕಾಲಿಗೆ ಬಿದ್ದು ನಮಸ್ಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

  ಜಡೇಜಾ ಪತ್ನಿ ರಿವಾಬಾ ಕಾಲಿ ಬಿದ್ದು ಆಶೀರ್ವಾದ ಪಡೆಯುತ್ತಿರುವ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಈ ಬಗ್ಗೆ ಮೆಚ್ಚುಗೆ ಮಾತುಗಳು ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ‘ಇದು ನಮ್ಮ ದೇಶದ ಸಂಸ್ಕೃತಿ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಜಡೇಜಾ ಪತ್ನಿ ಗುಜರಾತ್​ನ ಜಾಮ್​ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿಯಾಗಿದ್ದಾರೆ. ಪಂದ್ಯದ ಬಳಿಕ ಜಡೇಜಾ ಮಾತನಾಡುತ್ತಾ, ಫೈನಲ್ ಗೆಲುವನ್ನು ಧೋನಿಗೆ ಅರ್ಪಿಸಿದ್ದಾರೆ. ಜತೆಗೆ ಟೂರ್ನಿಯುದ್ಧಕ್ಕೂ ಬೆಂಬಲವನ್ನು ತೋರಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts