8 ಕಾಲು, 2 ಸೊಂಟವಿರುವ ಮೇಕೆಯ ಜನನ! ವೈರಲ್ ಆಯ್ತು ಫೋಟೋ

go
Published on

ಕೋಲ್ಕತ: ಸಾಮಾನ್ಯವಾಗಿ ಮೇಕೆಗೆ ನಾಲ್ಕು ಕಾಲಿರುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಂದು ಕಡೆ ಜನಿಸಿರುವ ಮೇಕೆಗೆ ಬರೋಬ್ಬರಿ ಎಂಟು ಕಾಲುಗಳಿವೆ. ಇನ್ನೂ ವಿಶೇಷವೆಂದರೆ ಸೊಂಟವೂ ಕೂಡ ಒಂದರ ಬದಲಾಗಿ ಎರಡಿದೆ.

ಇಂತದ್ದೊಂದು ವಿಶೇಷ ಮೇಕೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳ ಜಿಲ್ಲೆಯ ಬಂಗಾಂವವ್​ನ ಕಲ್ಮೆಘಾ ಪ್ರದೇಶದಲ್ಲಿ ಜನಿಸಿದೆ. ಸರಸ್ವತಿ ಮೊಂಡಾಲ್ ಹೆಸರಿನ ಮಹಿಳೆ ಮನೆಯಲ್ಲಿ ಹಸು ಮತ್ತು ಮೇಕೆಗಳನ್ನು ಸಾಕಿದ್ದರೆ. ಅದರಲ್ಲಿ ಒಂದು ಮೇಕೆ ಈ ರೀತಿಯ ವಿಶೇಷ ಮರಿಗೆ ಜನ್ಮ ನೀಡಿದೆ. ಗುರುವಾರದಂದು ಜನಿಸಿರುವ ಮರಿಯಲ್ಲಿ ಎರಡು ಸೊಂಟವಿದ್ದು, ಎಂಟು ಕಾಲುಗಳಿವೆ.

ಈ ರೀತಿಯ ವಿಶೇಷ ಮೇಕೆ ಮರಿ ಜನಿಸಿರುವ ವಿಚಾರ ಕೇಳಿದಾಕ್ಷಣ ಸುತ್ತ ಮುತ್ತಲಿನ ಊರಿನ ಜನರೆಲ್ಲರೂ ಸ್ಥಳಕ್ಕೆ ಬಂದು ಮೇಕೆಯನ್ನು ನೋಡಲಾರಂಭಿಸಿದ್ದಾರೆ. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ. ದುರಾದೃಷ್ಟವೆಂದರೆ ಮೇಕೆ ಮರಿ ಹುಟ್ಟಿದ ಐದು ನಿಮಿಷಗಳಲ್ಲಿ ಪ್ರಾಣ ಬಿಟ್ಟಿದೆ. ಅದರ ತಾಯಿ ಆರೋಗ್ಯವಾಗಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net