More

    ಬಜಾಜ್ ಚೇತಕ್​ಗೆ ಕಾಂಪಿಟೇಶನ್ ಕೊಡತ್ತಾ ಓಲಾ ಸ್ಕೂಟರ್? ಹೇಗಿರಲಿದೆ ಗೊತ್ತಾ ಓಲಾ ಸ್ಕೂಟಿ?

    ಬೆಂಗಳೂರು: ಓಲಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ಸ್ಕೂಟರ್​ ಅನ್ನು ಮಾರುಕಟ್ಟೆಗೆ ಬಿಡಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನೊಂದು ತಿಂಗಳ ಅವಧಿಯಲ್ಲಿ ಸ್ಕೂಟರ್ ಲಭ್ಯವಾಗುವ ಸಾಧ್ಯತೆಯಿದ್ದು, ಅದು ಬಜಾಜ್​ ಸಂಸ್ಥೆಯ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್​ಗೆ ಕಾಂಪಿಟೇಶನ್ ಕೊಡುಬಹುದು ಎನ್ನುವ ಚರ್ಚೆಗಳು ಆರಂಭವಾಗಿದೆ.

    ಓಲಾ ಸಂಸ್ಥೆಯ ಎಲೆಕ್ಟ್ರಿಕ್ ಸ್ಕೂಟರ್ 18 ನಿಮಿಷಗಳಲ್ಲಿ ಶೇ. 50 ಚಾರ್ಜ್ ಆಗಬಲ್ಲದು ಎನ್ನಲಾಗಿದೆ. ಹಾಗೆಯೇ ಒಮ್ಮೆ ಪೂರ್ತಿ ಚಾರ್ಜ್ ಆದರೆ 150 ಕಿಮೀವರೆಗೆ ಸಾಗಬಲ್ಲದು, ಅರ್ಧ ಚಾರ್ಜ್​ನೊಂದಿಗೆ 75 ಕಿಮೀ ಸಾಗಬಲ್ಲದು ಎನ್ನುವ ಮಾಹಿತಿಯಿದೆ.

    ಬಜಾಜ್​ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಎರಡು ವೇರಿಯೆಂಟ್​ನಲ್ಲಿದೆ. ಈ ಸ್ಕೂಟರ್ ಶೇ. 25 ಚಾರ್ಜ್ ಆಗುವುದಕ್ಕೆ ಒಂದು ಗಂಟೆ ಸಮಯ ಬೇಕು. ಪೂರ್ತಿ ಚಾರ್ಜ್ ಆಗಲು 5 ಗಂಟೆಗಳ ಸಮಯಾವಕಾಶ ಬೇಕು. ಒಮ್ಮೆ ಪೂರ್ತಿ ಚಾರ್ಜ್ ಆದರೆ 95 ಕಿಮೀವರೆಗೆ ಸಾಗಬಲ್ಲದು. 70 ಕಿಮೀ ವೇಗವಾಗಿ ಈ ಗಾಡಿಯನ್ನು ಓಡಿಸಬಹುದು.

    ಸದ್ಯ ಬಜಾಜ್​ ಚೇತಕ್ ಸ್ಕೂಟರ್​ನ ಆನ್​ ರೋಡ್ ಬೆಲೆ 1 ಲಕ್ಷದಷ್ಟಿದೆ. ಹಾಗಾಗಿ ಓಲಾ ಸ್ಕೂಟರ್ ಬೆಲೆಯೂ ಅದೇ ಮಟ್ಟದಲ್ಲಿರಬಹುದು ಎನ್ನುವ ಚರ್ಚೆಗಳು ನಡೆಯುತ್ತಿದೆ.

    ಓಲಾ ಎಲೆಕ್ಟ್ರಿಕ್ ಸ್ಕೂಟರ್​ನ ಮುಂಗಡ ಬುಕ್ಕಿಂಗ್​ ಅನ್ನು ಕೆಲ ದಿನಗಳ ಹಿಂದೆ ಆರಂಭಿಸಲಾಗಿದೆ. ಕೇವಲ 499 ರೂಪಾಯಿಗೆ ಬುಕ್ಕಿಂಗ್ ಅವಕಾಶ ಮಾಡಿಕೊಡಲಾಗಿದ್ದು, ಒಂದೇ ದಿನದಲ್ಲಿ ಲಕ್ಷಕ್ಕೂ ಅಧಿಕ ಸ್ಕೂಟರ್​ಗಳ ಬುಕ್ಕಿಂಗ್ ಆಗಿರುವುದಾಗಿ ಸಂಸ್ಥೆ ತಿಳಿಸಿತ್ತು. (ಏಜೆನ್ಸೀಸ್)

    ನಟ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್​ರನ್ನು 5 ವರ್ಷ ಬ್ಯಾನ್​ ಮಾಡಿ…

    ‘ರಾಧಾ ಕಲ್ಯಾಣ’ ನಟಿಯೀಗ ತುಂಬು ಗರ್ಭಿಣಿ: ಸೀಮಂತದ ಫೋಟೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts