'ರಾಧಾ ಕಲ್ಯಾಣ' ನಟಿಯೀಗ ತುಂಬು ಗರ್ಭಿಣಿ: ಸೀಮಂತದ ಫೋಟೋ ವೈರಲ್​

chaitra
Published on

ಬೆಂಗಳೂರು: ಮನೆ ಮನೆ ಮಾತಾಗಿದ್ದ ಧಾರಾವಾಹಿಗಳಲ್ಲಿ "ರಾಧಾ ಕಲ್ಯಾಣ" ಕೂಡ ಒಂದು. ಈ ಧಾರಾವಾಹಿ ನೋಡಿದವರಿಗೆ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಂಡಿರುವ ವಿಶಾಖಾ ಬಹುತೇಕ ಮಹಿಳೆಯರಿಗೆ ಆಪ್ತಳು. ಈ ನಟಿಯ ಮೂಲ ಹೆಸರು ಚೈತ್ರಾ ರೈ.

ಇತ್ತೀಚೆಗೆ ಮದುವೆಯಾಗಿದ್ದ ನಟಿ ಚೈತ್ರಾ ಈಗ ತುಂಬು ಗರ್ಭಿಣಿಯಾಗಿದ್ದು, ಸೀಮಂತ ಕಾರ್ಯ ನೆರವೇರಿಸಿಕೊಂಡಿದ್ದಾರೆ. ಅದರ ಫೋಟೋವನ್ನು ಇನ್‍ಸ್ಟಾಗ್ರಾಮನ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಂಗಳೂರು ಮೂಲದ ಚೈತ್ರಾ ರೈ ಹಾಗೂ ಪ್ರಸನ್ನ ಶೆಟ್ಟಿ ಅವರಿಗೆ ಇದು ಮೊದಲ ಮಗುವಾಗಿದೆ. ಕೋವಿಡ್‍ನಿಂದಾಗಿ ಚೈತ್ರಾ ರೈ ಅವರ ಸೀಮಂತಕ್ಕೆ ಕೆಲವೇ ಕೆಲವು ಆಪ್ತರನ್ನು ಆಹ್ವಾನಿಸಿದ್ದು ಅಭಿಮಾನಿಗಳಿಗಾಗಿ ಇದರ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ, ಪ್ರೀತಿ ಇರಲಿ. ನನ್ನ ಜೀವನದ ಸುಂದರವಾದ ಹಂತವನ್ನು ಅನುಭವಿಸುತ್ತಿದ್ದೇನೆ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಕನ್ನಡ ಮಾತ್ರವಲ್ಲದೇ ಚೈತ್ರಾ ರೈ ತೆಲುಗು ಕಿರುತೆರೆಯಲ್ಲಿಯೂ ಪ್ರಸಿದ್ಧಿ ಪಡೆದಿದ್ದಾರೆ. ಪ್ರಸನ್ನ ಶೆಟ್ಟಿ ಅವರು ಕತಾರ್​ನಲ್ಲಿ ಉದ್ಯೋಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net