ಇದು 'ಮುತ್ತಿನ' ಕಥೆ: ಸಾರ್ವಜನಿಕ ಸ್ಥಳದಲ್ಲೇ ಕಿಸ್​ ಮಾಡಿ ವೈರಲ್​ ಆದ್ಲು ಶ್ರುತಿ ಹಾಸನ್​

shruthi hassan
Published on

ಮುಂಬೈ: ನಟ, ರಾಜಕಾರಣಿ ಕಮಲ ಹಾಸನ್​ ಅವರ ಪುತ್ರಿ ಶ್ರುತಿ ಹಾಸನ್​ ಇದೀಗ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾಳೆ. ಟಾಲಿವುಡ್​ನ ಈ ಬೆಡಗಿ ಸಕತ್​ ವೈರಲ್​ ಆಗಿರಲು ಕಾರಣ ತನ್ನ ಬಾಯ್​ಫ್ರೆಂಡ್​ಗೆ ಸಾರ್ವಜನಿಕ ಸ್ಥಳದಲ್ಲಿಯೇ ಮುತ್ತು ಕೊಟ್ಟಿರುವುದು.

ತಮ್ಮ ಪ್ರಿಯಕರ ಶಾಂತನು ಹಜಾರಿಕಾ ಜತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿಯೂ ಶಾಂತನು ಜತೆಗೆ ಏಕಾಂತದಲ್ಲಿ ಇರುವ ಫೋಟೋಗಳ ಜತೆಗೆ ಸಾರ್ವಜನಿಕ ಸ್ಥಳದಲ್ಲಿಯೇ ಅಂದರೆ ಸೂಪರ್​ಮಾರ್ಕೆಟ್​ನಲ್ಲಿ ಕಿಸ್​ ಕೊಟ್ಟಿರುವ ದೃಶ್ಯಗಳನ್ನೂ ಹಂಚಿಕೊಂಡಿದ್ದಾರೆ. ಈ ಹಾಟ್​ ಫೋಟೋ ಈಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

35ನೇ ಹುಟ್ಟುಹಬ್ಬದ ಸಮಯದಲ್ಲಿ ಗೆಳೆಯನನ್ನು ತಬ್ಬಿಕೊಂಡು ಫೋಟೋ ತೆಗೆಸಿಕೊಂಡಿರುವ ಶ್ರುತಿ, ತಮ್ಮ ಗೆಳೆಯನ ಹೆಸರನ್ನು ರಿವೀಲ್​ ಮಾಡಿದ್ದರು. ಶಾಂತನುನನ್ನು ತಾವು ಪ್ರೀತಿಯಿಂದ ಆಲೂಗಡ್ಡೆ ಎಂದು ಕರೆಯುತ್ತೇನೆ ಎಂದಿದ್ದರು.

ಕೆಲ ದಿನಗಳ ಹಿಂದಷ್ಟೇ ತಮ್ಮ ಪಾಲಕರು ಮತ್ತು ಶೂಟಿಂಗ್​ ಕುರಿತು ಶ್ರುತಿ ಒಂದಿಷ್ಟು ಮಾಹಿತಿ ಶೇರ್​ ಮಾಡಿದ್ದರು, ತಮ್ಮ ಬಗ್ಗೆ ಹೇಳಿಕೊಂಡಿರುವ ಶ್ರುತಿ, ನನ್ನ ತಂದೆ ನಟ-ರಾಜಕಾರಣಿ ಇರಬಹುದು. ಆದರೆ, ನನ್ನ ಬಿಲ್‍ಗಳನ್ನು ನಾನೇ ಪಾವತಿಸುತ್ತೇನೆ. ಪಾಲಕರ ಬಳಿ ಯಾವಾಗಲೂ ಆರ್ಥಿಕ ಸಹಾಯ ಕೇಳಿದವಳಲ್ಲ ನಾನು. ನನಗೂ ಹಣಕಾಸಿನ ಸಮಸ್ಯೆ ಇದೆ. ಹೀಗಾಗಿ, ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶೂಟಿಂಗ್ ಮಾಡುವಾಗ ಮಾಸ್ಕ್ ಇಲ್ಲದೆ ಕಾಣಿಸಿಕೊಳ್ಳುವುದಕ್ಕೆ ತುಂಬಾನೇ ಭಯವಾಗುತ್ತದೆ. ಆದಾಗ್ಯೂ ಒಪ್ಪಿಕೊಂಡ ಪ್ರಾಜೆಕ್ಟ್​ಗಳನ್ನು ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಖರ್ಚುಗಳನ್ನು ನಿಭಾಯಿಸಲು ಕೆಲಸ ಮಾಡುವುದೊಂದೇ ಆಯ್ಕೆ ಎಂದು ಶ್ರುತಿ ಇತ್ತೀಚೆಗೆ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net