ಏಕಕಾಲದಲ್ಲಿ ಯುವಕರಿಬ್ಬರನ್ನು ಮದ್ವೆಯಾಗಲು ಯುವತಿಯಿಂದ ಅರ್ಜಿ ಸಲ್ಲಿಕೆ! ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಗೊಂದಲ

Kerala Girl
Published on

ಕೊಲ್ಲಂ: ಪುರುಷನೊಬ್ಬ ಮಹಿಳೆಯರಿಬ್ಬರನ್ನು ಏಕಕಾಲದಲ್ಲಿ ಮದುವೆಯಾದರೆ ಅದು ಅಷ್ಟೊಂದು ಸುದ್ದಿಯಾಗುವುದಿಲ್ಲ. ಏಕೆಂದರೆ, ಇಂತಹ ಅನೇಕ ನಿದರ್ಶನಗಳಿವೆ. ಆದರೆ, ಓರ್ವ ಹೆಣ್ಣು ತಾನಾಗಿಯೇ ಮುಂದೆ ಬಂದು ಒಂದೇ ಸಮಯದಲ್ಲಿ ಇಬ್ಬರನ್ನು ಮದುವೆಯಾಗುತ್ತೇನೆ ಎಂದು ಹೇಳಿದರೆ, ಅದನ್ನು ಕೇಳಿದವರು ಹುಬ್ಬೇರಿಸದೇ ಇರಲಾರರು. ಇದೀಗ ಅಂಥದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ.

ಕೊಲ್ಲಂನ ಪಠಾಣಪುರಂ ಮೂಲದ ಯುವತಿಯೊಬ್ಬಳು ತನ್ನ ವಿಚಿತ್ರ ನಿಲುವಿನಿಂದ ಇದೀಗ ಎಲ್ಲರ ಗಮನ ಸೆಳೆದಿದ್ದಾಳೆ. ಏಕಕಾಲದಲ್ಲಿ ಇಬ್ಬರನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ. ಪಠಾಣಪುರಂ ಮತ್ತು ಪುನಲೂರಿನ ಸಬ್​ ರಿಜಿಸ್ಟ್ರಾರ್​ ಕಚೇರಿಗಳಿಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿರುವ ಯುವತಿ ಎರಡೂ ಊರಿನ ಇಬ್ಬರು ಯುವಕರನ್ನು ಮದುವೆಯಾಗಲು ಮುಂದಾಗಿದ್ದಾಳೆ.

ಯುವತಿ ವಿಶೇಷ ವಿವಾಹ ಕಾಯಿದೆ ಅಡಿ ಮೊದಲು ಪಠಾಣಪುರಂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದಳು. ನಂತರ ಅದೇ ಹುಡುಗಿ ಪುನಲೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಪುನಲೂರಿನ ಉರುಕುನ್ನು ಮೂಲದ ಯುವಕನ ಜತೆ ಮದುವೆ ಮಾಡಿಕೊಡುವಂತೆ ಮನವಿ ಮಾಡಿದಳು. ಇದರಿಂದ ಗೊಂದಲಕ್ಕೀಡಾದ ಅಧಿಕಾರಿಗಳು ಯುವತಿ ಹಾಗೂ ಯುವಕರನ್ನು ಕರೆಸಿಕೊಳ್ಳಲು ಯತ್ನಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net