ದೇವಸ್ಥಾನದ ಪವಿತ್ರ ಕೊಳದಲ್ಲಿ ಮಾನವ ತಲೆಬುರುಡೆ ಪತ್ತೆ; 45 ದಿನಗಳವರೆಗೆ ಈ ನೀರು ಬಳಸುವಂತಿಲ್ಲ...

Human skull found in the holy pond of Tripureshwari temple one of the Shakti Peeths Water will not be used for 45 days
Published on

ಅಗರ್ತಲಾ: ತ್ರಿಪುರಾದ ಗೋಮತಿ ಜಿಲ್ಲೆಯ ಶಕ್ತಿ ಪೀಠಗಳಲ್ಲಿ ಒಂದಾದ ತ್ರಿಪುರೇಶ್ವರಿ ದೇವಸ್ಥಾನದ ಪವಿತ್ರ ಕೊಳದಲ್ಲಿ ಮಾನವನ ತಲೆಬುರುಡೆ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುರುವಾರ ಬೆಳಗ್ಗೆ ಕಲ್ಯಾಣ್ ಸಾಗರದಲ್ಲಿ ತಲೆಬುರುಡೆ ತೇಲುತ್ತಿರುವುದನ್ನು ಗಮನಿಸಿದ ಜನರ ಗುಂಪೊಂದು ಪೊಲೀಸ್​​ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ತ್ರಿಪುರ ಸುಂದರಿ ದೇವಸ್ಥಾನ ಎಂದು ಕರೆಯಲ್ಪಡುವ 500 ವರ್ಷಗಳಷ್ಟು ಹಳೆಯದಾದ ಕಲ್ಯಾಣ್ ಸಾಗರ ಕೊಳಕ್ಕೆ ತಲೆಬುರುಡೆ ಹೇಗೆ ಬಂದಿವೆ ಎಂದು ಪೊಲೀರು ತನಿಖೆ ನಡೆಸುತ್ತಿದ್ದಾರೆ.

ತಲೆಬುರುಡೆ ಪತ್ತೆಯಾದ ನಂತರ ಕಲ್ಯಾಣ್ ಸಾಗರದ ನೀರು ಅಶುದ್ಧವಾಗಿರುವ ಕಾರಣ ಮುಂದಿನ 45 ದಿನಗಳವರೆಗೆ ಬಳಸಲಾಗುವುದಿಲ್ಲ ಎಂದು ದೇವಾಲಯದ ವ್ಯವಸ್ಥಾಪಕ ಮಾಣಿಕ್ ದತ್ತಾ ತಿಳಿಸಿದ್ದಾರೆ. ಕಲ್ಯಾಣ ಸಾಗರವನ್ನು ಮತ್ತೆ ಪವಿತ್ರಗೊಳಿಸಲು ನಾವು 45 ದಿನಗಳ ನಂತರ ಪೂಜೆ ಮಾಡಬೇಕಾಗಿದೆ. ಈ ದೇವಾಲಯವನ್ನು 1501 ರಲ್ಲಿ ಮಹಾರಾಜ ಧಾನ್ಯ ಮಾಣಿಕ್ಯ ನಿರ್ಮಿಸಿದನು. ಸದ್ಯ ಇದರ ಕಾರ್ಯಾಚರಣೆ ರಾಜ್ಯ ಸರ್ಕಾರದ ಕೈಯಲ್ಲಿದೆ.

ಮಾತನಾಡಿದ ಮುಖ್ಯಮಂತ್ರಿ ಮಾಣಿಕ್ ಸಹಾ, “ಪೊಲೀಸರು ತಲೆಬುರುಡೆಯನ್ನು ಪತ್ತೆಹಚ್ಚಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್) ನ ಡೈವರ್‌ಗಳು ಹೆಚ್ಚಿನ ಮಾನವ ಅವಶೇಷಗಳಿವೆಯೇ ಎಂದು ಕಂಡುಹಿಡಿಯಲು ಕೊಳವನ್ನು ಹುಡುಕಿದರು, ಆದರೆ ಬೇರೆ ಏನೂ ಕಂಡುಬಂದಿಲ್ಲ" ಎಂದಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಬಾಬುಲ್ ದಾಸ್ ಮಾತನಾಡಿ, "ಪೊಲೀಸರು ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ, ಆದರೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾವು ಇಡೀ ಗೋಮತಿ ಜಿಲ್ಲೆಯಲ್ಲಿ ಕಾಣೆಯಾದವರ ಪಟ್ಟಿಯನ್ನು ಪರಿಶೀಲಿಸುತ್ತಿದ್ದೇವೆ, ಆದರೆ ಇದುವರೆಗೆ ಯಾವುದೇ ಅನುಮಾನಾಸ್ಪದವಾಗಿ ಕಂಡುಬಂದಿಲ್ಲ "ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net