More

    ರೈತರು, ಜನರ ಬವಣೆ ಮರೆತು ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳುತ್ತಿರುವ ಸರ್ಕಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಟೀಕೆ

    ಬೆಂಗಳೂರು: ಮುಂಗಾರು ಮಳೆ ವಿಳಂಬದಿಂದ ರಾಜ್ಯದ 21 ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಜನ ಸಮುದಾಯ ಕುಡಿಯುವ ನೀರಿನ ಬವಣೆ ಎದುರಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಅದನ್ನೆಲ್ಲ ಮರೆತು ಗ್ಯಾರಂಟಿ ಯೋಜನೆಗಳಿಂದ ಏನೆಲ್ಲ ಪ್ರಯೋಜನವಾಗುತ್ತಿದೆ ಎಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ ಎಂದು ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

    ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿಗಳ ವಿಚಾರದಲ್ಲಿ ಜನರಿಗೆ ಅದೆಷ್ಟು ಸುಳ್ಳುಗಳನ್ನು ಹೇಳಿದೆ ಎಂದು ಸದನದಲ್ಲಿ ಚರ್ಚಿಸುತ್ತೇವೆ. ರಾಜ್ಯ ಸರ್ಕಾರ ಗ್ಯಾರಂಟಿಗಳ ವಿಷಯದಲ್ಲೇ ಕಾಲಹರಣ ಮಾಡದೇ ಜನರ ಕಷ್ಟ-ಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

    ಇದನ್ನೂ ಓದಿ: ಟೈಟಾನ್​ ನೌಕೆಯ ದುರಂತ ಸಂಭವಿಸಿದ್ಹೇಗೆ? ವೈರಲ್​ ಆಯ್ತು ಅನಿಮೇಷನ್​ ವಿಡಿಯೋ, 6 ಮಿಲಿಯನ್​ಗೂ ಅಧಿಕ​ ವೀಕ್ಷಣೆ

    ಮೋದಿಯೇ ಗುರಿ

    ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಅಂದಾಜು ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನೇ ಗುರಿಯಾಗಿಸಿರುವುದು ಗೊತ್ತಾಗಿದೆ. ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದರು. ಆಡಳಿತದ ಚುಕ್ಕಾಣಿ ಹಿಡಿದ ನಂತರವೂ ಅದನ್ನೇ ಮುಂದುವರಿಸಿದ್ದು, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

    ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿದರು. ಈಗಲೂ ಮುಂದುವರಿಸಿದ್ದು, ಅವ್ಯವಹಾರಗಳಾಗಿದ್ದರೆ ತನಿಖೆ ನಡೆಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ವಾರ್ಷಿಕ ಆರು ಸಾವಿರ ರೂ.ಗಳನ್ನು ಕೇಂದ್ರ ಸರ್ಕಾರ ಕೊಡುತ್ತಿದೆ. ಅದರೊಂದಿಗೆ ರಾಜ್ಯದಿಂದ ನಾಲ್ಕು ಸಾವಿರ ರೂ. ನೀಡುವ ದಿಟ್ಟ ನಿರ್ಧಾರವನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆಗೆದುಕೊಂಡಿದ್ದರು. ಅದನ್ನೀಗ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲೆಂದು ಬಸವರಾಜ ಬೊಮ್ಮಾಯಿ ಅವರು ಸಿಎಂ ವಿದ್ಯಾನಿಧಿ ಪ್ರಾರಂಭಿಸಿದ್ದರು. ಈ ಯೋಜನೆಗೂ ಮಣ್ಣು ಹಾಕುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಬಿ.ವೈ.ವಿಜಯೇಂದ್ರ ಆಕ್ರೋಶ ಹೊರ ಹಾಕಿದರು.

    ಹೊಸದೇನಲ್ಲ

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಂಗ್ರೆಸ್ ಯಾವ ನಿಲುವು ತಳೆದಿದೆ ಎಂಬುದು ಗೊತ್ತಿರುವ ವಿಚಾರ. ಸಂಘದಡಿ ಬರುವ ಜನಸೇವಾ ಶಿಕ್ಷಣ ಕೇಂದ್ರ ಸಾವಿರಾರು ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ. ಅಂತಹ ಸಂಸ್ಥೆಗೆ ನೀಡಿರುವ ಜಮೀನಿಗೆ ತಡೆ ನೀಡಿದೆ.

    ಇದನ್ನೂ ಓದಿ: ಗ್ರಾಹಕರಿಗೆ ತಟ್ಟಲಿದೆ ಹಾಲಿನ ದರ ಏರಿಕೆಯ ಬಿಸಿ? ಸಿಎಂ ಜತೆ ಹಾಲು ಒಕ್ಕೂಟದ ಮಹತ್ವದ ಸಭೆ, ಸಂಜೆ ತೀರ್ಮಾನ ಸಾಧ್ಯತೆ

    ಅಕ್ಕಿ ವಿಷಯದಲ್ಲೂ ಕೇಂದ್ರದ ವಿರುದ್ಧ ಕಾಂಗ್ರೆಸ್ ಸರ್ಕಾರ ಸುಳ್ಳು ಆರೋಪ ಹೊರಿಸುತ್ತಿದೆ. ಬಡವರಿಗೆ ಅಕ್ಕಿ ವಿತರಿಸಲು ಕೊಡುತ್ತಿಲ್ಲ. ಎಥನಾಲ್ ಉತ್ಪಾದನೆಗೆ ಪೂರೈಸುತ್ತಿದೆ ಎಂದಿದೆ. ಪೆಟ್ರೋಲ್ ನಲ್ಲಿ ಶೇಕಡ 25ರಷ್ಟು ಎಥನಾಲ್ ಮಿಶ್ರಣ ಮಾಡಬೇಕು ಎಂಬುದು ಕೇಂದ್ರದ ನೀತಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ನಿಯಂತ್ರಣ ಹಾಗೂ ವಿದೇಶಿ ವಿನಿಮಯ ಉಳಿತಾಯಕ್ಕಾಗಿ ಎಥನಾಲ್ ಉತ್ಪಾದನೆಗೆ ಪ್ರೋತ್ಸಾಹಿಸುತ್ತಿದೆ. ಈ ನಿಜಾಂಶವನ್ನು ಮರೆಮಾಚಿ ಕೇಂದ್ರ ಸರ್ಕಾರ, ಮೋದಿಯವರನ್ನು ಕಾಂಗ್ರೆಸ್ ಸರ್ಕಾರ ಟೀಕಿಸುತ್ತಿದೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

    LIVE| ರಾಜ್ಯ ವಿಧಾನಮಂಡಲ ಅಧಿವೇಶನದ ನೇರ ಪ್ರಸಾರ- 14/07/2023

    ಟೈಟಾನ್​ ನೌಕೆಯ ದುರಂತ ಸಂಭವಿಸಿದ್ಹೇಗೆ? ವೈರಲ್​ ಆಯ್ತು ಅನಿಮೇಷನ್​ ವಿಡಿಯೋ, 6 ಮಿಲಿಯನ್​ಗೂ ಅಧಿಕ​ ವೀಕ್ಷಣೆ

    ಕುಡಿದ ಮತ್ತಿನಲ್ಲಿ ಅರ್ಧಂಬರ್ಧ ಸುಟ್ಟ ಮೃತದೇಹವನ್ನೇ ತಿಂದ ಕುಡುಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts