Girl in darkness : ಕಡು ಕತ್ತಲೆಯಲ್ಲಿ ಕಪ್ಪು ಬಣ್ಣದ ಚೂಡಿದಾರ್ ಧರಿಸಿ ನಿಂತಿದ್ದ ಯುವತಿಯನ್ನು ಕಂಡು ಕೇರಳದ ಪರುಂತುಂಪರಾ ಮತ್ತು ಚಾರುಪಾರ ಗ್ರಾಮದ ನಿವಾಸಿಗಳು ಭಯಭೀತರಾದ ಪ್ರಸಂಗ ಬೆಳಕಿಗೆ ಬಂದಿದೆ. ಯುವತಿಯನ್ನು ಯಕ್ಷಿಣಿ ಎಂದು ಜನರು ಭಾವಿಸಿದ್ದರು. ಈ ಸುದ್ದಿ ತೋಳಿಕೋಡು ಹಾಗೂ ವಿಟೂರ ಪಂಚಾಯಿತಿ ವ್ಯಾಪ್ತಿಯ ಗಡಿ ಭಾಗಗಳಲ್ಲಿ ಹಬ್ಬಿ, ಭಯದ ವಾತಾವರಣ ಉಂಟುಮಾಡಿತ್ತು. ಆದರೆ, ಅಸಲಿ ವಿಚಾರವೇ ಬೇರೆಯಾಗಿತ್ತು.
ಕತ್ತಲೆಯಲ್ಲಿ ಹುಡುಗಿಯೊಬ್ಬಳು ಚೂಡಿದಾರ್ ಧರಿಸಿರುವ ಚಿತ್ರವೂ ವ್ಯಾಟ್ಸ್ಆ್ಯಪ್ಗಳಲ್ಲಿ ಹರಿದಾಡಿದೆ. ಪೊನ್ಮುಡಿ ಬಳಿಯ ತಿರುವನಂತಪುರಂ ರಾಜ್ಯ ಹೆದ್ದಾರಿಯಲ್ಲಿ ಬರುವ ವಿಟೂರ ಚೆನ್ನನಪರ ಸ್ವರಾಜ್ ಗೇಟ್ ಬಳಿ ಈ ದೃಶ್ಯ ಕಂಡುಬಂದಿದೆ. ಹೀಗಾಗಿ ಸ್ಥಳೀಯ ಜನರು ಅಲ್ಲಿ ಓಡಾಡಲು ಕೂಡ ಭಯಪಡುತ್ತಿದ್ದಾರೆ. ಜನರು ಯಕ್ಷಿಣಿ ಇದಾಳೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರೂ ಯಾರೂ ಪತ್ತೆಯಾಗಲಿಲ್ಲ.
ಇದನ್ನೂ ಓದಿ: ಮೊಳಕೆಯೊಡೆದ ಕಾಳುಗಳನ್ನು ತಿಂದರೆ ಈ ಒಂದು ಕಾಯಿಲೆ ಬರೋದೆ ಇಲ್ಲ! ಇಲ್ಲಿದೆ ಉಪಯುಕ್ತ ಮಾಹಿತಿ… Sprouts
ಇನ್ನು ತನಿಖೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ನಿಗೂಢ ಕನ್ಯೆಯ ಹಿಂದೆ ಗಾಂಜಾ ಲಾಬಿಗಳು ಮತ್ತು ನಕಲಿ ಮದ್ಯ ಮಾರಾಟ ಮಾಡುವ ಗ್ಯಾಂಗ್‌ಗಳು ಕೈವಾಡ ಇರುವುದು ಪತ್ತೆಯಾಗಿದೆ. ಪಲಾಟೊ, ನಂದಿ, ಚಾರುಪಾರ ಮಾರ್ಗವಾಗಿ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಈ ಪ್ರದೇಶದಲ್ಲಿ ಬೀದಿ ನಾಯಿ ಹಾಗೂ ಹಂದಿಗಳ ಕಾಟ ಹೆಚ್ಚಾಗಿವೆ. ಇಲ್ಲಿ ಗಾಂಜಾ ಲಾಬಿಗಳು ಮತ್ತು ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಚಾರುಪಾರದ ಯಕ್ಷಿಣಿ ಕಾಲ್ಪನಿಕ ಕಥೆಯ ಹಿಂದೆ ಗಾಂಜಾ ಲಾಬಿಗಳ ಕೈವಾಡವಿರುವುದು ಸದ್ಯ ಸ್ಪಷ್ಟವಾಗಿದೆ. ಈ ಸ್ಥಳದಲ್ಲಿ ಅನೇಕ ಜನರು ಬೈಕ್ ಮತ್ತು ಕಾರುಗಳಲ್ಲಿ ಬಂದು ಗಾಂಜಾ ವಿನಿಮಯ ಮಾಡಿಕೊಳ್ಳುತ್ತಾರೆ. ಪೊಲೀಸರು ಹಾಗೂ ಅಬಕಾರಿ ಇಲಾಖೆ ಈ ಹಿಂದೆ ಇಲ್ಲಿ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶವು ಗಾಂಜಾ ಲಾಬಿಗಳ ಹಿಡಿತದಲ್ಲಿದೆ ಎಂದು ಸ್ಥಳೀಯರು ಇತ್ತೀಚೆಗೆ ದೂರಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಾರಾಟ ಇನ್ನೂ ನಡೆಯುತ್ತಲೇ ಇದೆ. ಜನರು ಇಲ್ಲಿ ಓಡಾಡದೇ ಇರಲಿ ಎನ್ನುವ ಕಾರಣಕ್ಕೆ ಯಕ್ಷಿಣಿ ಎಂಬ ಕಾಲ್ಪನಿಕ ಕಥೆ ಸೃಷ್ಟಿಸಿ, ಭಯದ ವಾತಾವರಣ ಉಂಟು ಮಾಡಿದ್ದಾರೆ. (ಏಜೆನ್ಸೀಸ್)
ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡಲು ಪ್ರತಿದಿನ ನೀವಿದನ್ನು ಮಾಡಲೇಬೇಕು…ಉಪಯುಕ್ತ ಮಾಹಿತಿ ನಿಮಗಾಗಿ | Kidneys Health
ಅಯ್ಯೋ ಶ್ರುತಿ ಹಾಸನ್ಗೆ ಏನಾಯಿತು? ಸೌತ್ ಬ್ಯೂಟಿಯ ಕಾಲಿಗೆ ಗಾಯವಾಗಿದ್ದೇಕೆ? Shruti Haasan