Kidneys Health : ಮೂತ್ರಪಿಂಡ ಅಥವಾ ಕಿಡ್ನಿಯಲ್ಲಿ ಕಲ್ಲುಗಳ ರಚನೆ ಹಾಗೂ ಕಿಡ್ನಿ ವೈಫಲ್ಯದಂತಹ ಸಮಸ್ಯೆಗಳು ಇತ್ತೀಚೆಗೆ ಜನರಲ್ಲಿ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಮಾನವ ದೇಹದಿಂದ ತ್ಯಾಜ್ಯವನ್ನು ಹೊರಹಾಕುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ. ಇದಲ್ಲದೆ, ಮೂತ್ರಪಿಂಡಗಳು ಹಾರ್ಮೋನುಗಳನ್ನು ಸಹ ಬಿಡುಗಡೆ ಮಾಡುತ್ತವೆ. ಆದ್ದರಿಂದ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿ ಇಡಬೇಕು. ಇದಕ್ಕಾಗಿ ಏನು ಮಾಡಬೇಕೆಂದು ನಾವೀಗ ತಿಳಿಯೋಣ.
ಸಾಕಷ್ಟು ನೀರು ಕುಡಿಯಿರಿ
ನಮ್ಮ ದೇಹದಲ್ಲಿ ಶೇ. 60 ರಷ್ಟು ನೀರಿದೆ. ನಮ್ಮ ದೇಹದ ಯಾವುದೇ ಅಂಗವು ಕಾರ್ಯನಿರ್ವಹಿಸಲು ನೀರಿನ ಅಗತ್ಯವಿದೆ. ಮೆದುಳಿನಿಂದ ಯಕೃತ್ತಿನವರೆಗೆ ಎಲ್ಲದಕ್ಕೂ ನೀರು ಬೇಕು. ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯವನ್ನು ಮೂತ್ರದ ರೂಪದಲ್ಲಿ ಹೊರಹಾಕುತ್ತವೆ. ಕಡಿಮೆ ನೀರು ಕುಡಿದಾಗ ಮೂತ್ರದ ಪ್ರಮಾಣ ಕಡಿಮೆ ಆಗುತ್ತದೆ. ಪರಿಣಾಮವಾಗಿ, ತ್ಯಾಜ್ಯ ವಸ್ತು ಮೂತ್ರಪಿಂಡಗಳಲ್ಲಿ ಉಳಿಯುತ್ತದೆ. ಇದರಿಂದ ಕಿಡ್ನಿ ವೈಫಲ್ಯ, ಕಿಡ್ನಿ ಕಲ್ಲುಗಳಂತಹ ಸಮಸ್ಯೆಗಳು ಉಂಟಾಗುತ್ತವೆ. ವಯಸ್ಸಿಗೆ ಅನುಗುಣವಾಗಿ ಸಾಕಷ್ಟು ನೀರು ಕುಡಿಯುವುದು ಉತ್ತಮ. ಪ್ರತಿದಿನ ಕನಿಷ್ಠ 2 ರಿಂದ 2.5 ಲೀಟರ್ ನೀರು ಕುಡಿಯಲೇಬೇಕು.
ಇದನ್ನೂ ಓದಿ: ಅಯ್ಯೋ ಶ್ರುತಿ ಹಾಸನ್ಗೆ ಏನಾಯಿತು? ಸೌತ್ ಬ್ಯೂಟಿಯ ಕಾಲಿಗೆ ಗಾಯವಾಗಿದ್ದೇಕೆ? Shruti Haasan
ಸರಿಯಾದ ಆಹಾರ
ದೇಹಕ್ಕೆ ಹಾನಿಕಾರಕವಾದ ಕೊಬ್ಬಿನ ಪದಾರ್ಥಗಳನ್ನು ಹೊಂದಿರುವ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಹಣ್ಣುಗಳು, ತರಕಾರಿಗಳು ಮತ್ತು ಕಡಿಮೆ ಕೊಬ್ಬಿನ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಬೇಕು. ಕುರುಕಲು ತಿನಿಸುಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು. ಹೋಟೆಲ್ ಅಥವಾ ಬೀದಿ ಬದಿ ಆಹಾರಗಳನ್ನು ತ್ಯಜಿಸಿ, ಆದಷ್ಟು ಮನೆಯಲ್ಲೇ ಊಟ ಮಾಡುವುದನ್ನು ರೂಢಿಸಿಕೊಳ್ಳಿ.
ಉಪ್ಪು ಕಡಿಮೆ ಮಾಡಿ
ಉಪ್ಪಿಗಿಂತ ರುಚಿಯಿಲ್ಲ ಅದೇ ರೀತಿ ಉಪ್ಪು ಹೆಚ್ಚಾದರೆ ಅದಕ್ಕಿಂತ ದೊಡ್ಡ ಅಪಾಯವಿಲ್ಲ ಎಂಬುದನ್ನು ಮನಸ್ಸಿನಲ್ಲಿಡಿ. ಅಧಿಕ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು. ಇದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುವ ಸಂಭವವಿದೆ. ಹಾಗಾಗಿ ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದರಿಂದ ಕಿಡ್ನಿಗಳು ಆರೋಗ್ಯಕರವಾಗಿರುತ್ತವೆ. ಟೇಬಲ್ ಉಪ್ಪು, ಕಲ್ಲು ಉಪ್ಪು ಹಾಗೂ ಕಪ್ಪು ಉಪ್ಪು ಹೀಗೆ ಹಲವು ಬಗೆಯ ಉಪ್ಪುಗಳಿವೆ. ಒಂದು ದಿನಕ್ಕೆ ವಯಸ್ಕರು 6 ಗ್ರಾಂ ಉಪ್ಪನ್ನು ಮತ್ತು ಮಕ್ಕಳು ಐದು ಗ್ರಾಂ ಉಪ್ಪನ್ನು ಸೇವಿಸುವಂತೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಅದಕ್ಕಿಂತ ಹೆಚ್ಚಿನ ಸೇವನೆಯು ಕರುಳಿನ ಆರೋಗ್ಯಕ್ಕೆ ಅಪಾಯಕಾರಿ. ತಿಂದ ಆಹಾರವು ಜೀರ್ಣಕ್ರಿಯೆ ಮೂಲಕ ಕರುಳನ್ನು ತಲುಪುವುದರಿಂದ ಬಿಪಿಯಿಂದ ಬಳಲುತ್ತಿರುವವರು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಇದನ್ನೂ ಓದಿ: BBKS11: ಬಿಗ್ ಮನೆಯಿಂದ ಹೊರಬಿದ್ದ ನಾಲ್ಕನೇ ಸ್ಪರ್ಧಿ ಹಂಸಾ?
ಧೂಮಪಾನ ತ್ಯಜಿಸಿ
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದರು ಧೂಮಪಾನಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದೊಂದು ಅಪಾಯಕಾರಿ ವ್ಯಸನ ಎಂಬುದು ತಿಳಿದಿರಲಿ. ಧೂಮಪಾನವು ಬಿಪಿಯನ್ನು ಹೆಚ್ಚಿಸುವುದಲ್ಲದೆ ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಕಿಡ್ನಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಅಲ್ಲದೆ, ಅತಿಯಾಗಿ ಆಲ್ಕೋಹಾಲ್ ಸೇವಿಸುವುದರಿಂದಲೂ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.
ಎಷ್ಟು ಪ್ರಮಾಣದಲ್ಲಿ ಉಪ್ಪು ಸೇವಿಸಿದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್? ಇಲ್ಲಿದೆ ಉಪಯುಕ್ತ ಮಾಹಿತಿ… Salt
ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿದ್ರೆ ಆರೋಗ್ಯಕ್ಕೆ ಅಪಾಯವೇ? ಸರಿಯಾದ ಸಮಯ ಯಾವುದು? ಇಲ್ಲಿದೆ ಉತ್ತರ… Milk