Shruti Haasan : ಸಕಲಕಲಾವಲ್ಲಭ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್, ಗ್ಲಾಮರ್ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಅಂದಹಾಗೆ ತಾರೆಯರ ಬದುಕು ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಭಿನ್ನವಾಗಿರುತ್ತದೆ. ಅದಕ್ಕೆ ಶ್ರುತಿ ಹಾಸನ್ ಕೂಡ ಹೊರತಾಗಿಲ್ಲ. ಏಕೆಂದರೆ, ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸಾಕಷ್ಟು ಸುದ್ದಿಯಾಗುತ್ತಿರುತ್ತಾರೆ.
ಎರಡು ವರ್ಷ ಡೇಟಿಂಗ್ ಮಾಡಿ ಬಾಯ್ಪ್ರೆಂಡ್ ಮೈಕಲ್ ಕೊರ್ಸಲೆ ಜತೆ ಬ್ರೇಕಪ್ ಮಾಡಿಕೊಂಡಿದ್ದರು. ಇದೀಗ ಬಾಯ್ಫ್ರೆಂಡ್ ಶಂತನು ಹಜಾರಿಕಾ ಜತೆಯೂ ಸಂಬಂಧ ಮುರಿದುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಶ್ರುತಿ ಜೀವನದಲ್ಲಿ ಅನೇಕರು ಬಂದು ಹೋಗಿದ್ದಾರೆ. ಸದ್ಯ ಶ್ರುತಿ ಹಾಸನ್ ಅವರ ಬಾಯ್ ಫ್ರೆಂಡ್ ಹುದ್ದೆ ಖಾಲಿ ಇದೆ. ಹೀಗಾಗಿ ಮತ್ತೆ ಸಿನಿಮಾಗಳತ್ತ ಶ್ರುತಿ ಬಿಜಿಯಾಗಿದ್ದಾರೆ.
ತಾಜಾ ಸಂಗತಿ ಏನೆಂದರೆ, ಶ್ರುತಿ ಅವರು ತಮ್ಮ ಕಾಲಿಗೆ ಗಾಯವಾಗಿರುವ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫೋಟೋ ವೈರಲ್ ಆಗಿದೆ. ಅಯ್ಯೋ ಶ್ರುತಿಗೆ ಏನಾಯಿತು ಎಂದು ಅಭಿಮಾನಿಗಳು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಇ.ಡಿ ಕೇಸ್ ಶಿಕ್ಷೆ ಆಗಲ್ಲ ಬಿಡಿ!
ಆದರೆ, ಶ್ರುತಿಗೆ ಏನು ಆಗಿಲ್ಲ. ಅವರು ಮಾನ್ಸ್ಟರ್ ಮೆಶಿನ್ ಆಲ್ಬಮ್ಗೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಕೆಲವು ಫೋಟೋಗಳು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಕಾಲಿಗೆ ಗಾಯವಾಗಿರುವ ಫೋಟೋ ಕೂಡ ಒಂದು. ಆಲ್ಬಮ್ ಶೂಟಿಂಗ್ ವೇಳೆಯ ಕ್ಷಣಗಳನ್ನು ಶ್ರುತಿ ಮೆಲಕು ಹಾಕಿದ್ದಾರೆ.
ಮಾನ್ಸ್ಟರ್ ಮೆಶಿನ್ಗೆ ಈಗ ಒಂದು ವರ್ಷ! ಪ್ರೀತಿಯ ಕತ್ತಲೆ ಮಾಂತ್ರಿಕ ಮತ್ತು ಸಂಪೂರ್ಣ ವಿನೋದದಿಂದ ತುಂಬಿದ ಅದ್ಭತ ಕ್ಷಣ! ಸಂಗೀತದಿಂದ ವಿಡಿಯೋವರೆಗೆ ಅದರಲ್ಲಿ ಕೆಲಸ ಮಾಡಿದ ಇಡೀ ತಂಡಕ್ಕೆ ತುಂಬಾ ಕೃತಜ್ಞರಾಗಿರುತ್ತೇನೆ. ಇನ್ನಷ್ಟು ಬರಲಿದೆ. ನನ್ನ ಧ್ವನಿ ಮತ್ತು ದೃಷ್ಟಿಕೋನಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತೇನೆ. ಈ ಎಲ್ಲ ವರ್ಷಗಳಲ್ಲಿ ನನಗೆ ತಿಳಿದಿರುವ ಒಂದು ವಿಷಯವೆಂದರೆ ನಿಮ್ಮನ್ನು ವಿಲಕ್ಷಣರನ್ನಾಗಿ ಮಾಡುವುದು ಮತ್ತು ನಿಮ್ಮನ್ನು ಸುಂದರವಾಗಿ ಮತ್ತು ಪ್ರಾಮಾಣಿಕರನ್ನಾಗಿ ಮಾಡುವುದು. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದು ಶ್ರುತಿ ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಶ್ರುತಿ ಅವರ ಕೈಯಲ್ಲಿ ಸದ್ಯ ಡಕಾಯಿತ್, ಸಲಾರ್ 2 ಹಾಗೂ ಕೂಲಿ ಸಿನಿಮಾಗಳಿವೆ. (ಏಜೆನ್ಸೀಸ್)
ತಪ್ಪೊಪ್ಪಿಕೊಂಡರೂ ಶಿಕ್ಷೆಗೆ ಪುರಾವೆ ಬೇಕು! ಗಾಂಜಾ ಕೇಸಲ್ಲಿ ಆರೋಪಿ ಖುಲಾಸೆಗೊಳಿಸಿದ ಹೈಕೋರ್ಟ್