ಮದ್ವೆಯಾದ ಮೂರೇ ದಿನಕ್ಕೆ 13 ಲಕ್ಷಕ್ಕೆ ಪತ್ನಿಯ ಚಿನ್ನಾಭರಣ ಅಡವಿಟ್ಟ ಪತಿಗೆ 3 ವರ್ಷದ ಬಳಿಕ ಬಿಗ್​ ಶಾಕ್! Gold Pledge

Gold Pledge

Gold Pledge : ಮದುವೆಯಾದ ಮೂರೇ ದಿನದಲ್ಲಿ ಪತ್ನಿಯ ಚಿನ್ನಾಭರಣವನ್ನು ಗಿರವಿ ಇಟ್ಟು, ಹಣದೊಂದಿಗೆ ಪರಾರಿಯಾಗಿದ್ದ ಪತಿರಾಯನನ್ನು ಕೇರಳದ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಬಂಧಿತನನ್ನು ನೆಯ್ಯಾಟಿಂಕರ ಮೂಲದ ಅನಂತು (34) ಎಂದು ಗುರುತಿಸಲಾಗಿದೆ. ಈತ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. 2021ರ ಆಗಸ್ಟ್‌ ತಿಂಗಳಲ್ಲಿ ವರ್ಕಳ ಮೂಲದ ಯುವತಿಯನ್ನು ಮದುವೆಯಾಗಿದ್ದ. ಇದಾದ ಮೂರೇ ದಿನಕ್ಕೆ ತನ್ನ ಪತ್ನಿಯ ಚಿನ್ನವನ್ನು ಗಿರವಿ ಇಟ್ಟು 13.5 ಲಕ್ಷ ರೂ.ಗೂ ಹೆಚ್ಚು ಹಣವನ್ನು ತೆಗೆದುಕೊಂಡಿದ್ದ. ಇದಕ್ಕಾಗಿ ಆತ 52 ಸವರನ್​ ಚಿನ್ನವನ್ನು ಗಿರಿವಿ ಇಟ್ಟಿದ್ದ.

ಚಿನ್ನಾಭರಣ ಗಿರಿವಿ ಇಟ್ಟಿದ್ದಲ್ಲದೆ, ಇನ್ನು ಹಣ, ಆಸ್ತಿ ಬೇಕು ಎಂದು ಮನೆಯಲ್ಲಿ ನಿರಂತರವಾಗಿ ಜಗಳವಾಡುತ್ತಿದ್ದ. ಅಲ್ಲದೆ, ಪೂರ್ವಜರ ಆಸ್ತಿಯನ್ನು ತನಗೆ ಒಪ್ಪಿಸುವಂತೆ ಹಿಂಸೆ ನೀಡುತ್ತಿದ್ದ. ಕೊನೆಗೆ ಪತಿಯ ಕಿರುಕುಳ ತಾಳಲಾರದೆ ಮಹಿಳೆ, ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಅನಂತು ಎಸ್ಕೇಪ್​ ಆಗಿದ್ದ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿದ್ರೆ ಆರೋಗ್ಯಕ್ಕೆ ಅಪಾಯವೇ? ಸರಿಯಾದ ಸಮಯ ಯಾವುದು? ಇಲ್ಲಿದೆ ಉತ್ತರ… Milk

ಪ್ರಕರಣ ದಾಖಲಾದಾಗಿನಿಂದ ಕೇರಳದ ವಿವಿಧ ಜಿಲ್ಲೆಗಳಲ್ಲಿ ಅನಂತು ತಲೆಮರೆಸಿಕೊಂಡಿದ್ದ. ಅಲ್ಲದೆ, ಬೆಂಗಳೂರಿನಲ್ಲೂ ಅನಂತು ಬಹಳ ದಿನ ನೆಲೆಸಿದ್ದ. ಕೊನೆಗೂ ವರ್ಕಳ ಪೊಲೀಸರಿಗೆ ಸಿಕ್ಕ ರಹಸ್ಯ ಮಾಹಿತಿ ಮೇರೆಗೆ ಶೋಧ ನಡೆಸಿ, ತಲೆಮರೆಸಿಕೊಂಡಿದ್ದ ಅನಂತುನನ್ನು ಬಂಧಿಸಿದ್ದಾರೆ.

ವರ್ಕಳ ಠಾಣಾಧಿಕಾರಿ (ಎಸ್‌ಎಚ್‌ಒ) ಜೆಎಸ್ ಪ್ರವೀಣ್ ಮತ್ತು ಸಬ್ ಇನ್‌ಸ್ಪೆಕ್ಟರ್ (ಎಸ್‌ಐ) ಎ. ಸಲೀಂ ನೇತೃತ್ವದ ತಂಡ ಅನಂತುವನ್ನು ಬಂಧಿಸಿದೆ.

ಪತ್ನಿಯ ಚಿನ್ನಾಭರಣವನ್ನು ಗಿರವಿ ಇಡುವ ಮುನ್ನ ಎಚ್ಚರ
ಪತ್ನಿಯ ಚಿನ್ನಾಭರಣ ಇದೆ ಅಂತ ಆಕೆಯ ಅನುಮತಿ ಇಲ್ಲದೆ ಗಿರವಿ ಇಡುವ ಮುನ್ನ ಎಚ್ಚರ! ಜೈಲು ಶಿಕ್ಷೆಗೆ ಗುರಿಯಾಗಬೇಕಾದೀತು. ಇಂಥದ್ದೊಂದು ಪ್ರಕರಣ ಕೇರಳದಲ್ಲಿ ಇತ್ತೀಚೆಗೆ ನಡೆದಿದ್ದು, ವ್ಯಕ್ತಿಯೊಬ್ಬ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಮದುವೆಗೆ ಉಡುಗೊರೆಯಾಗಿ ಪಡೆದ ಚಿನ್ನವನ್ನು ಅಥವಾ ಪತ್ನಿಗೆ ಸಂಬಂಧಿಸಿದ ಯಾವುದೇ ಚಿನ್ನವನ್ನು ಆಕೆಯ ಅನುಮತಿಯಿಲ್ಲದೆ ಗಿರವಿ ಇಡುವುದು ನಂಬಿಕೆ ದ್ರೋಹ ಎಂದು ಕೇರಳ ಹೈಕೋರ್ಟ್ ಇತ್ತೀಚೆಗಷ್ಟೇ ತೀರ್ಪು ನೀಡಿದೆ. ಅಲ್ಲದೆ, ಕಾಸರಗೋಡು ಮೂಲದ ವ್ಯಕ್ತಿಯ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿಯುವ ಮೂಲಕ ಖಡಕ್​ ಸಂದೇಶವನ್ನು ರವಾನಿಸಿದೆ.

ಬ್ಯಾಂಕ್​ನ ಲಾಕರ್​ನಲ್ಲಿ ಸೇಫ್​ ಆಗಿ ಇಡುವಂತೆ ಪತ್ನಿ ನೀಡಿದ್ದ 50 ಪವನ್ ಚಿನ್ನವನ್ನು ತನ್ನ ಸ್ವಂತ ಬಳಕೆಗಾಗಿ ವ್ಯಕ್ತಿಯೊಬ್ಬ ಬ್ಯಾಂಕ್​ನಲ್ಲಿ ಗಿರವಿ ಇಟ್ಟಿದ್ದ. ಅಲ್ಲದೆ, ಲಾಕರ್​​ನಲ್ಲಿ ಭದ್ರವಾಗಿ ಇಟ್ಟಿರುವುದಾಗಿ ನಕಲಿ ದಾಖಲೆಗಳನ್ನು ಪತ್ನಿಗೆ ತೋರಿಸಿದ್ದ. ಇದರ ನಡುವೆ ಭಿನ್ನಾಭಿಪ್ರಾಯಗಳಿಂದ ಇಬ್ಬರು ಡಿವೋರ್ಸ್​ ಪಡೆದುಕೊಂಡರು. ಬಳಿಕ ಪತ್ನಿ ತನ್ನ ಚಿನ್ನಾಭರಣವನ್ನು ವಾಪಸ್ ಕೊಡುವಂತೆ ಬೇಡಿಕೆ ಇಟ್ಟಾಗ ಈ ಪ್ರಕರಣ ಬೆಳಕಿಗೆ ಬಂದಿತು. ಇದಾದ ನಂತರ ಮಹಿಳೆ ತನ್ನ ಪತಿ ವಿರುದ್ಧ ಪೊಲೀಸ್ ದೂರು ನೀಡಿದ್ದಳು.

ಇದನ್ನೂ ಓದಿ: ಜೀನ್ಸ್​ ವಿಚಾರದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ… Jeans

ಈ ಪ್ರಕರಣದ ವಿಚಾರಣೆ ಕಾಸರಗೋಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಂಬಿಕೆ ದ್ರೋಹದ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಆರೋಪಿ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದ. ಆದರೆ, ಹೈಕೋರ್ಟ್​ ಕೂಡ ಕಾಸರಗೋಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. (ಏಜೆನ್ಸೀಸ್​)

ಅಂದು ಜ್ಯೋತಿ ಇಂದು ಪ್ರೀತಿ! ಗಂಡನ ತ್ಯಾಗಕ್ಕಿಲ್ಲ ಬೆಲೆ, ಸರ್ಕಾರಿ ಕೆಲ್ಸ ಸಿಗ್ತಿದ್ದಂತೆ ಬದಲಾಯ್ತು ವರಸೆ | Wife Cheats Husband

ಅಂದು ಜ್ಯೋತಿ ಇಂದು ಪ್ರೀತಿ! ಗಂಡನ ತ್ಯಾಗಕ್ಕಿಲ್ಲ ಬೆಲೆ, ಸರ್ಕಾರಿ ಕೆಲ್ಸ ಸಿಗ್ತಿದ್ದಂತೆ ಬದಲಾಯ್ತು ವರಸೆ | Wife Cheats Husband

Share This Article

Acohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Acohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…

ಕಾಂತಿಯುತ ತ್ವಚೆ ನಿಮ್ಮದಾಗಬೇಕೇ?; ಮಲಗುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ | Health Tips

ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ…