ಗಾಜಿಯಾಬಾದ್: ಪ್ರಸ್ತುತ ಇದು ಡಿಜಿಟಲ್ ಯುಗ. ಅಂದಮೇಲೆ ಸೋಷಿಯಲ್ ಮೀಡಿಯಾದ ಬಳಕೆ ಯಥೇಚ್ಚವಾಗಿಯೇ ಇರಲಿದೆ ಹಾಗೂ ಇದೆ. ಜಾಗತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುವ ನಮ್ಮ ಇಂದಿನ ಯುವಜನತೆ, ಹೊಟ್ಟೆಗೆ ಸಿಗುವ ಊಟಕ್ಕಿಂತ, ದೇಹಕ್ಕೆ ಸಿಗುವ ವಿಶ್ರಾಂತಿಗಿಂತ ಮೊಬೈಲ್ನಲ್ಲಿ ಮಾಡುವ ರೀಲ್ಸ್ ಜಾಲಕ್ಕೆ ಬಹಳ ಸಮಯ ನೀಡುತ್ತಾರೆ. ಅದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಅಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. 6 ಇಂಚಿನ ಸ್ಮಾರ್ಟ್ಫೋನ್ ಕೈಯಲ್ಲಿ ಹಿಡಿಯೋದೆ ತಡ, ತಮ್ಮ ಪಕ್ಕ ಯಾರಿದ್ದಾರೆ? ನಾವೇಲಿದ್ದೀವಿ ಎಂಬ ವಿಷಯವನ್ನೇ ಮರೆಯುವ ಮೊಬೈಲ್ ಗೀಳಿನ ಯುವಜನತೆ, ಇದೀಗ ರೀಲ್ಸ್ ಹುಚ್ಚಾಟಕ್ಕೆ ಸಿಲುಕಿ, ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿರುವ ನಿದರ್ಶನಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆ ಸಾಲಿಗೆ ಇಲ್ಲೊಂದು ಘಟನೆ ಕೂಡ ಹೊಸದಾಗಿ ಸೇರ್ಪಡೆಗೊಂಡಿದೆ.
ಇದನ್ನೂ ಓದಿ: 2024-25ರ ಅಂತಾರಾಷ್ಟ್ರೀಯ ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆ; ಹೀಗಿದೆ ಬಿಸಿಸಿಐ ಹೊಸ ಪ್ರಕಟಣೆ
ವಿಭಿನ್ನ ಪ್ರಯತ್ನದ ಮೂಲಕ ಒಂದೊಳ್ಳೆ ರೀಲ್ ಮಾಡಿ, ಅದನ್ನು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮುಖೇನ ಅಧಿಕ ಸಂಖ್ಯೆಯ ಫಾಲೋವರ್ಸ್ಗಳನ್ನು ಗಳಿಸುವ ಗುಂಗಿನಲ್ಲಿ ಇಲ್ಲೊಬ್ಬಳು ಬಾಲಕಿ ಕಟ್ಟಡದ 6ನೇ ಮಹಡಿಯಿಂದ ಕೆಳಗೆ ಬಿದ್ದ ಭಯಂಕರ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಸಂಭವಿಸಿದೆ. 6ನೇ ಮಹಡಿಯಲ್ಲಿದ್ದ ತನ್ನ ಮನೆಯ ಬಾಲ್ಕನಿಯಲ್ಲಿ ರೀಲ್ ಮಾಡಲೆಂದು ಹೊರಬಂದ ಬಾಲಕಿ, ಕೈ ಜಾರಿದ ಮೊಬೈಲ್ ಹಿಡಿಯಲು ಹೋಗಿ ತಾನು ಕೆಳಗೆ ಜಾರಿಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ದೃಶ್ಯ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
देखिए गाजियाबाद इंदिरापुरम सोसाइटी में मोनिशा अपने फ्लैट की बालकनी में खड़ी होकर अपने मोबाइल से रील वीडियो शूट कर रही थी,तभी उसके हाथ से मोबाईल छूट गया जिसको पकड़ने के चक्कर मैं वह छठवीं मंजिल से नीचे गिर गई गंभीर हालत में अस्पताल में भर्ती कराया #AAPDelhi #delhi pic.twitter.com/COBpeNUDdk
— Lavely Bakshi (@lavelybakshi) August 13, 2024
ಅಮ್ಮ, ಅಪ್ಪನಿಗೆ ಸಹಾಯ ಮಾಡಲು ಕರೆ ಮಾಡು ನನ್ನ ಸೋಂಟ ನೋವ್ತಿದೆ ಎಂದು ಚೀರಾಡುತ್ತಿದ್ದ ಬಾಲಕಿಯನ್ನು ಕಂಡ ಸ್ಥಳೀಯರು, ಒಂದು ನಿಮಿಷ ಭಾರೀ ಆಘಾತಕ್ಕೊಳಗಾಗಿದ್ದಾರೆ. ಮಗಳಿಗೆ ಪ್ರಾರಂಭದಲ್ಲಿ ಬೈಗುಳವಿಟ್ಟ ತಾಯಿ, ತದನಂತರ ಆಕೆಯನ್ನು ನೆರೆಹೊರೆಯವರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ತುರ್ತು ವಿಭಾಗದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಗಾಯಗೊಂಡ ಬಾಲಕಿಯನ್ನು ಮೋನಿಶಾ (16) ಎಂದು ಗುರುತಿಸಲಾಗಿದ್ದು, ಗಾಜಿಯಾಬಾದ್‌ನ ಇಂದಿರಾಪುರಂನ ಕ್ಲೌಡ್-9 ಸೊಸೈಟಿಯ ನಿವಾಸಿ ಎಂದು ವರದಿಯಾಗಿದೆ.
ಇದನ್ನೂ ಓದಿ: ಪವಿತ್ರಾಗೌಡಗೆ ಮತ್ತೊಂದು ಸಂಕಷ್ಟ; ಆಕೆ ಚಪ್ಪಲಿಯಲ್ಲೂ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ
ವರದಿಗಳ ಪ್ರಕಾರ, 6ನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಬಾಲಕಿಯ ಕಾಲು ಮುರಿದಿದ್ದು, ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ರೀಲ್, ವಿಡಿಯೋ ಮಾಡುವಲ್ಲಿ ಸಮಯ ವ್ಯರ್ಥ ಮಾಡುವ ಯುವಜನತೆ ಬಹಳ ಎಚ್ಚರಿಕೆ ವಹಿಸುವುದು ಒಳಿತು. ಒಂದಷ್ಟು ಲೈಕ್, ಫಾಲೋವರ್ಸ್ಗಳಿಗೋಸ್ಕರ ಇಂತಹ ದುಸ್ಸಾಹಸಕ್ಕೆ ಕೈಹಾಕುವವರು ತಮ್ಮ ಪ್ರಾಣವನ್ನೇ ಪಣಕ್ಕಿಡುವುದು ಹುಚ್ಚುತನ ಅಲ್ಲದೇ ಬೇರೇನೂ ಅಲ್ಲ. ಈ ಬಗ್ಗೆ ಎಚ್ಚರವಹಿಸಿ ಎಂದು ಹಲವರು ಜಾಲತಾಣಗಳಲ್ಲಿ ಯುವತಿಯ ವಿಡಿಯೋ ಕೆಳಗೆ ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).
ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ
ವಿನೇಶ್ ಬೆಳ್ಳಿ ಪದಕದ ತೀರ್ಪು ಮತ್ತೆ ಮುಂದೂಡಿಕೆ! ಈ ದಿನದಂದು ಹೊರಬೀಳಲಿದೆ ಮುಂದಿನ ಅಪ್ಡೇಟ್