ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ ಪದಕದಾಟದಲ್ಲಿ ಭಾರತೀಯರ ಓಟ ಇದೀಗ ಮುಕ್ತಾಯಗೊಂಡಿದ್ದು, ಇತ್ತೀಚೆಗಷ್ಟೇ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್, ಪಂದ್ಯ ಆರಂಭಕ್ಕೂ ಮುನ್ನ ದೇಹ ತೂಕದಲ್ಲಿ 50 ಕೆಜಿಗಿಂತ 100 ಗ್ರಾಂ ಹೆಚ್ಚಿದ್ದ ಕಾರಣ ಅಂತಿಮ ಸುತ್ತಿನಿಂದ ಅನರ್ಹಗೊಂಡರು.
ಇದನ್ನೂ ಓದಿ: 2024-25ರ ಅಂತಾರಾಷ್ಟ್ರೀಯ ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆ; ಹೀಗಿದೆ ಬಿಸಿಸಿಐ ಹೊಸ ಪ್ರಕಟಣೆ
ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಅವರನ್ನು ಫೈನಲ್ ಪಂದ್ಯದಿಂದ ಐಒಸಿ ಅನರ್ಹಗೊಳಿಸಿತು. ಇದರಿಂದ ವಿನೇಶ್ರಿಗೆ ಯಾವ ಪದಕವು ಬರಲಿಲ್ಲ. ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ಫೋಗಟ್ ಇದೀಗ ಸಿಎಎಸ್ ನ್ಯಾಯಾಲಯದಲ್ಲಿ ತಾನು ಎರಡು ಬೆಳ್ಳಿ ಪದಕಕ್ಕೆ ಅರ್ಹ ಎಂದು ಮನವಿ ಸಲ್ಲಿಸಿದ್ದರು. ಆದ್ರೆ, ಈ ಕುರಿತಾದ ತೀರ್ಪು ಮಾತ್ರ ಇದೀಗ ಪದೇ ಪದೇ ಮುಂದೂಡಿಕೆಯಾಗುತ್ತಿದೆ.
ಈ ಹಿಂದೆ ಆ.10ರಂದು ವಿನೇಶ್ರಿಗೆ ಒಂದಕ್ಕಿಂತ ಹೆಚ್ಚು ಪದಕ ಕೊಡಬೇಕೋ ಅಥವಾ ಏನೂ ಕೊಡದೆ ಅವರನ್ನು ಅನರ್ಹ ಎಂದೇ ಪರಿಗಣಿಸಬೇಕಾ ಎಂಬುದರ ಕುರಿತು ಸಿಎಎಸ್ ಕೋರ್ಟ್ ತೀರ್ಪು ನೀಡುವುದಾಗಿ ತಿಳಿಸಿತ್ತು. ಆದ್ರೆ, ಅಂದು ತೀರ್ಪು ನೀಡದ ನ್ಯಾಯಾಲಯ ಅದನ್ನು ಮರುದಿನಕ್ಕೆ (ಆ.11) ತೆಗೆದುಕೊಂಡು ಹೋಯಿತು. ಅಂದು ಕೂಡ ಪದಕ ಕೊಡುವ ಬಗ್ಗೆ ಸ್ಪಷ್ಟಪಡಿಸದ ಕೋರ್ಟ್ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿತ್ತು. ಆದ್ರೆ, ನಿನ್ನೆಯೂ ಸಹ ಯಾವ ವಿಚಾರಣೆ ನಡೆಸದ ಸಿಎಎಸ್, ಈಗ ಮತ್ತೆ ವಿನೇಶ್ರ ಅರ್ಜಿಯನ್ನು ಇದೇ ಆಗಸ್ಟ್ 16ಕ್ಕೆ ಮೂಂದೂಡಿದೆ,(ಏಜೆನ್ಸೀಸ್).
ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ