ಈ ಒಟಿಟಿ ಪಾಲಾಯ್ತಾ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ?

WhatsApp Image 2024-05-31 at 1.24.16 PM
Published on

ಆಂಧ್ರಪ್ರದೇಶ: ಕೃಷ್ಣ ಚೈತನ್ಯ ನಿರ್ದೇಶನದ “ಗ್ಯಾಂಗ್ಸ್ ಆಫ್ ಗೋದಾವರಿ” ಚಿತ್ರದಲ್ಲಿ ನಟ ವಿಶ್ವಕ್ ಸೇನ್, ನಟಿ ಅಂಜಲಿ ಮತ್ತು ನೇಹಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಈ ಹಿಂದೆಯೇ ಚಿತ್ರತಂಡ ತಿಳಿಸಿದಂತೆ ಇದೇ ಮೇ.17ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಇಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.

ಬಿಡುಗಡೆಗೊಂಡ ಮೊದಲ ದಿನವೇ ಸಖತ್ ರೆಸ್ಪಾನ್ಸ್​ ಪಡೆಯುತ್ತಿರುವ 'ಗ್ಯಾಂಗ್ಸ್​ ಆಫ್​ ಗೋದಾವರಿ' ಚಿತ್ರದ ಬಗ್ಗೆ ರಿಲೀಸ್​ಗೂ ಮುನ್ನವೇ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಹರಿದಾಡಿದ್ದವು. ಇದೀಗ ಸಿನಿಮಾದ ಡಿಜಿಟಲ್ ಹಕ್ಕುಗಳು ಹೆಸರಾಂತ ಒಟಿಟಿ ಪ್ಲಾಟ್​ಫಾರ್ಮ್​ ಪಾಲಾಗಿದೆ ಎಂಬ ಸುದ್ದಿ ಸದ್ಯ ಸಿನಿಮಾ ಮೂಲಗಳಿಂದ ತಿಳಿದುಬಂದಿದೆ.

ಜನಪ್ರಿಯ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆದ ನೆಟ್‌ಫ್ಲಿಕ್ಸ್ ಭಾರೀ ಮೊತ್ತಕ್ಕೆ ಈ ಸಿನಿಮಾದ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಸದ್ಯ ಈ ಕುರಿತು ಚಿತ್ರತಂಡ ಏನು ಹೇಳಲಿದೆ? ಅಧಿಕೃತವಾಗಿ ಯಾವಾಗ ಮಾಹಿತಿ ಹಂಚಿಕೊಳ್ಳಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಚಿತ್ರದಲ್ಲಿ ನೇಹಾ ಶೆಟ್ಟಿ, ಅಂಜಲಿ, ಸಾಯಿ ಕುಮಾರ್, ನಾಸರ್, ಹೈದರ್ ಆದಿ, ಗೋಪರಾಜು ರಮಣ, ಆಯೇಷಾ ಖಾನ್ ಮುಂತಾದವರ ತಾರಾಗಣವಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್, ಫಾರ್ಚೂನ್ ಫೋರ್ ಸಿನಿಮಾಸ್ ಸಹಯೋಗದಲ್ಲಿ ಮೂಡಿಬಂದಿರುವ ಸಿನಿಮಾಗೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net