
Friendship – Money : ಸಣ್ಣಪುಟ್ಟ ಅಗತ್ಯಗಳಿಗೆ ಬ್ಯಾಂಕಿನಿಂದ ಸಾಲ ಪಡೆಯುವ ಬದಲು ಸ್ನೇಹಿತರನ್ನು ಬಳಿ ತೆಗೆದುಕೊಳ್ಳುವುದು ಉತ್ತಮ ಎಂದು ಅನೇಕರು ಭಾವಿಸುತ್ತಾರೆ. ಏಕೆಂದರೆ, ಸ್ನೇಹಿತರಿಂದ ಹಣವನ್ನು ಎರವಲು ಪಡೆಯುವುದರಿಂದ ಹಲವಾರು ಪ್ರಯೋಜನಗಳಿವೆ.
ಬ್ಯಾಂಕಿನಿಂದ ಸಾಲ ಪಡೆಯಲು ಹಲವು ರೀತಿಯ ದಾಖಲೆಗಳು ಬೇಕಾಗುತ್ತವೆ. ಅಲ್ಲದೆ, ವೈಯಕ್ತಿಕ ಸಾಲಗಳಿಗೆ ಭಾರೀ ಬಡ್ಡಿಯನ್ನು ಸಹ ಪಾವತಿಸಬೇಕಾಗುತ್ತದೆ. ನೀವು ತುರ್ತು ಪರಿಸ್ಥಿತಿಯಲ್ಲಿದ್ದರೂ ಸಹ, ಬ್ಯಾಂಕುಗಳಲ್ಲಿ ದೀರ್ಘ ಪ್ರಕ್ರಿಯೆ ಇರುತ್ತದೆ. ಇದರಿಂದಾಗಿ, ಹಣಕ್ಕಾಗಿ ಬಹಳ ಸಮಯ ಕಾಯಬೇಕಾಗುತ್ತದೆ. ಅದಕ್ಕಾಗಿಯೇ ಬಹುತೇಕ ಮಂದಿ ಸ್ನೇಹಿತರಿಂದ ಸಾಲ ಪಡೆಯುತ್ತಾರೆ.
ಆದರೆ, ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಸಂಚಲನಾತ್ಮಕ ವಿಷಯಗಳು ಬಹಿರಂಗವಾಗಿದೆ. ಕೇವಲ 27 ಪ್ರತಿಶತ ಸ್ನೇಹಿತರು ಮಾತ್ರ ತಾವು ಎರವಲು ಪಡೆದ ಹಣವನ್ನು ಹಿಂದಿರುಗಿಸುತ್ತಾರಂತೆ ಉಳಿದ, 73 ಪ್ರತಿಶತ ಜನರು ಅದನ್ನು ವಾಪಸ್ ನೀಡುವುದಿಲ್ಲ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣ ವೇದಿಕೆ ಪ್ಯೂಬಿಟಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಶೇ. 73 ರಷ್ಟು ಜನರು ಸಾಲವಾಗಿ ಪಡೆದ ಹಣವನ್ನು ಸ್ನೇಹಿತರಿಗೆ ಹಿಂತಿರುಗಿಸಿಲ್ಲ ಎಂದು ಹೇಳಿದೆ. ಕೆಲವೊಮ್ಮೆ ಈ ವಿಷಯ ತುಂಬಾ ಗಂಭೀರವಾಗುತ್ತದೆ. ಹೇಗೆಂದರೆ, ಆಪ್ತ ಮಿತ್ರರು ಸಹ ಬದ್ಧ ಹಣದ ವಿಚಾರವಾಗಿ ವೈರಿಗಳಾಗುತ್ತಾರೆ ಎಂದು ಸಮೀಕ್ಷ ಹೇಳಿದೆ.
ಸಮೀಕ್ಷೆಯ ಪ್ರಕಾರ, ಹಣ ನೀಡಿದ ಸ್ನೇಹಿತ ಅದನ್ನು ಹಿಂತಿರುಗಿಸುವಂತೆ ಕೇಳಿದರೆ, ಹಣವನ್ನು ಹಿಂದಿರುಗಿಸಿ ಸ್ನೇಹಕ್ಕೆ ವಿದಾಯ ಹೇಳುತ್ತಾರೆ. ಕೆಲ ಸ್ನೇಹಿತರು ಕೊಟ್ಟ ಹಣ ವಾಪಸ್ ಕೇಳಲು ನಾಚಿಕೆಪಡುವ ಮಟ್ಟಕ್ಕೂ ಹೋಗುತ್ತಾರೆ. ಅನೇಕ ಸ್ನೇಹಿತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಹೀಗಾಗಿ ಪಡೆದ ಹಣವನ್ನು ಹಿಂತಿರುಗಿಸುವುದಿಲ್ಲ. ಒಂದು ವೇಳೆ ಹಿಂದಿರುಗಿಸಿದರೆ ಪಡೆದ ಹಣಕ್ಕಿಂತ ಕಡಿಮೆ ನೀಡುತ್ತಾರೆ.
ಇನ್ನು ಕೆಲವು ಸ್ನೇಹಿತರು ಕುತಂತ್ರಿಗಳು. ಸಣ್ಣ ಮೊತ್ತವನ್ನು ತೆಗೆದುಕೊಂಡ ನಂತರ, ಅವರು ಅದನ್ನು ಮರೆತುಬಿಡುತ್ತಾರೆ. ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಕೇಳಿದರೆ ಕೊಡುವುದೇ ಇಲ್ಲ. ತುಂಬಾ ಸತಾಯಿಸುತ್ತಾರೆ. ಕೊಟ್ಟರೂ ಸ್ನೇಹವನ್ನೇ ಕಡಿದುಕೊಂಡು ಶತ್ರುಗಳಂತೆ ನೋಡುತ್ತಾರೆ. ಕೆಲವರು ತಮ್ಮ ನಡುವಿನ ಸಂಬಂಧ ಎಲ್ಲಿ ಕೈ ತಪ್ಪು ಹೋಗುತ್ತದೆ ಎಂಬ ಭಯದಿಂದ ಕೊಟ್ಟ ಹಣವನ್ನು ವಾಪಸ್ ಕೇಳುವುದೇ ಇಲ್ಲ. ಇದಿಷ್ಟು ತನಿಖೆಯಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್)
ಸರ್ಕಾರಿ ವಾಹನದ ಮೇಲೆ ಹುಟ್ಟುಹಬ್ಬ ಆಚರಣೆ: ಡಿಎಸ್ಪಿ ಪತ್ನಿಯ ಹುಚ್ಚಾಟ ಕಂಡು ನೆಟ್ಟಿಗರು ಗರಂ! DSP Wife
ಆ ಇಬ್ಬರಿಂದಲೇ ನಾವು WTC Final ಗೆದ್ದಿದ್ದು: ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಹೇಳಿಕೆ ವೈರಲ್! Temba Bavuma