ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ: ಸುಟ್ಟು ಕರಕಲಾದ ನಾಲ್ವರು ಭಾರತೀಯರು, DNA ಮೂಲಕ ಗುರುತು ಪತ್ತೆ

Road Accident

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್​ನಲ್ಲಿ ಐದು ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸೇರಿ ಒಟ್ಟು ನಾಲ್ವರು ಭಾರತೀಯರು ದುರಂತ ಸಾವಿಗೀಡಾಗಿದ್ದಾರೆ. ನಾಲ್ವರು ಕೂಡ ಕಾರ್​ಪೂಲಿಂಗ್​ ಆ್ಯಪ್​ ಮೂಲಕ ಪ್ರಯಾಣಿಸುತ್ತಿದ್ದರು. ಅರ್ಕಾನ್ಸಾಸ್‌ನ ಬೆಂಟೊನ್‌ವಿಲ್ಲೆಗೆ ಹೋಗುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.

ಮೃತರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರಿಗೆ ಬೆಂಕಿ ತಗುಲಿದ್ದು, ನಾಲ್ವರ ದೇಹಗಳು ಸುಟ್ಟು ಕರಕಲಾಗಿವೆ. ಡಿಎನ್ಎ ಪರೀಕ್ಷೆಯ ಮೂಲಕ ಅವರನ್ನು ಗುರುತಿಸಲಾಗಿದೆ. ಮೃತರನ್ನು ಆರ್ಯನ್ ರಘುನಾಥ್ ಓರಂಪಾಟಿ, ಫಾರೂಕ್ ಶೇಕ್, ಲೋಕೇಶ್ ಪಾಲಾಚಾರ್ಲ ಮತ್ತು ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ.

ಓರಂಪಾಟಿ ಮತ್ತು ಅವರ ಸ್ನೇಹಿತ ಫಾರೂ ಶೇಕ್ ಡಲ್ಲಾಸ್‌ನಲ್ಲಿರುವ ತನ್ನ ಸೋದರಸಂಬಂಧಿಯನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದರು. ಲೋಕೇಶ್ ಪಾಲಾಚಾರ್ಲ ಅವರು ಬೆಂಟನ್‌ವಿಲ್ಲೆಯಲ್ಲಿ ನೆಲೆಸಿರುವ ತಮ್ಮ ಪತ್ನಿಯನ್ನು ಭೇಟಿ ಮಾಡಲು ತೆರಳಿದ್ದರು. ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ದರ್ಶಿನಿ ವಾಸುದೇವನ್ ಅವರು ಬೆಂಟನ್​ವಿಲ್ಲೆಯಲ್ಲಿರುವ ತಮ್ಮ ಚಿಕ್ಕಪ್ಪನನ್ನು ಭೇಟಿಯಾಗಲು ಹೊರಟಿದ್ದರು. ದರ್ಶಿನಿ ಅವರು ತಮಿಳುನಾಡು ಮೂಲದವರು. ಟೆಕ್ಸಾಸ್‌ನ ಫ್ರಿಸ್ಕೊದಲ್ಲಿ ವಾಸಿಸುತ್ತಿದ್ದರು.

ಮೃತರು ಕಾರ್‌ಪೂಲಿಂಗ್ ಅಪ್ಲಿಕೇಶನ್ ಮೂಲಕ ಸಂಪರ್ಕ ಹೊಂದಿದ್ದರಿಂದ ಅವರನ್ನು ತ್ವರಿತವಾಗಿ ಗುರುತಿಸಲಾಯಿತು. ಆದಾಗ್ಯೂ, ಅಧಿಕಾರಿಗಳು ಡಿಎನ್‌ಎ, ಫಿಂಗರ್‌ಪ್ರಿಂಟಿಂಗ್, ಹಲ್ಲುಗಳು ಹಾಗೂ ಮೂಳೆಯ ಅವಶೇಷಗಳನ್ನು ಪರಿಶೀಲಿಸಿ ನಿಖರ ಗುರುತನ್ನು ಪತ್ತೆಹಚ್ಚಿದ್ದಾರೆ. ದರ್ಶಿನಿ ಅವರ ತಂದೆ ಮೂರು ದಿನಗಳ ಹಿಂದಷ್ಟೇ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಎಕ್ಸ್​ ಖಾತೆಯಲ್ಲಿ ಟ್ಯಾಗ್​ ಮಾಡಿ ತಮ್ಮ ಮಗಳನ್ನು ಹುಡುಕಲು ಸಹಾಯ ಕೋರಿದ್ದರು.

ಡಿಯರ್​ ಸರ್, ನನ್ನ ಮಗಳು ದರ್ಶಿನಿ ವಾಸುದೇವನ್ ಭಾರತೀಯ ಪಾಸ್‌ಪೋರ್ಟ್ ಸಂಖ್ಯೆ – T6215559 ನೊಂದಿಗೆ ಕಳೆದ ಮೂರು ವರ್ಷಗಳಿಂದ ಟೆಕ್ಸಾಸ್‌ನಲ್ಲಿ ವಾಸಿಸುತ್ತಿದ್ದಾರೆ. ಎರಡು ವರ್ಷಗಳ ಎಂಎಸ್ ವ್ಯಾಸಂಗದ ನಂತರ ಒಂದು ವರ್ಷದಿಂದ ಅಲ್ಲಿ ಕೆಲಸ ಮಾಡುತ್ತಿದ್ದಾಳೆ. ನಿನ್ನೆ ಸಂಜೆ ಆಕೆ ಕಾರ್ ಪೂಲಿಂಗ್ ಮೂಲಕ ಪ್ರಯಾಣಿಸುತ್ತಿದ್ದಳು. ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯವರೆಗೂ ಸಂದೇಶ ಕಳುಹಿಸುತ್ತಿದ್ದಳು. ನಂತರ ಆಕೆಗೆ ಎಷ್ಟೇ ಕರೆ ಮಾಡಿದರು ಯಾವುದೇ ಸ್ಪಂದನೆ ಇಲ್ಲ. ಆಕೆಯನ್ನು ಹುಡುಕಿಕೊಡಿ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದರು.

ಆರ್ಯನ್ ರಘುನಾಥ್ ಓರಂಪಾಟಿ ಅವರು ಹೈದರಾಬಾದ್ ಮೂಲದ ಮ್ಯಾಕ್ಸ್ ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಮಾಲೀಕ ಸುಭಾಷ್ ಚಂದ್ರ ರೆಡ್ಡಿ ಅವರ ಪುತ್ರ. ಆರ್ಯನ್ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಪೀಠದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದರು. ಅವರು ಇತ್ತೀಚೆಗೆ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಆರ್ಯನ್ ಅವರ ಪೋಷಕರು ಅವರ ಘಟಿಕೋತ್ಸವದಲ್ಲಿಯೂ ಭಾಗವಹಿಸಿದ್ದರು. ಇನ್ನು ಎರಡು ವರ್ಷ ಅಮೆರಿಕಾದಲ್ಲಿ ಕೆಲಸ ಮಾಡಿ ಮನೆಗೆ ಬರುವುದಾಗಿ ಹೇಳಿದ್ದ. ಆದರೆ, ದುರಾದೃಷ್ಟಕರ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್​)

ಟೀಮ್​ ಇಂಡಿಯಾಗಿಂತ IPL​ ತಂಡಕ್ಕೆ ಕೋಚ್​ ಆಗುವುದೇ ಬೆಸ್ಟ್​! ವೀರೂ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ…

ಕ್ಯಾರವಾನ್​​ನಲ್ಲಿ ಬಟ್ಟೆ ಮಾತ್ರ ಬದಲಿಸಲ್ಲ ಅದು ಕೂಡ ನಡೆಯುತ್ತೆ! ಸ್ಫೋಟಕ ಸಂಗತಿ ಬಿಚ್ಚಿಟ್ಟ ಶಕೀಲಾ

Share This Article

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…