ಉಡುಗೊರೆ ರೂಪದಲ್ಲಿ ದರ್ಶನ್​ಗೆ ಎರಡು ಕುದುರೆ ಕೊಟ್ಟ ಮಾಜಿ ಸಚಿವ

ದದದದದ
Published on

ಇತ್ತೀಚೆಗಷ್ಟೇ ಧಾರವಾಡದ ಮಾಜಿ ಸಚಿವ ವಿನಯ್​ ಕುಲಕರ್ಣಿ ಫಾರ್ಮ್​ಹೌಸ್​ಗೆ ತೆರಳಿದ್ದ ನಟ ಚಾಲೆಂಜಿಂಗ್​ ಸ್ಟಾರ್ ದರ್ಶನ್​, ಕುದುರೆ, ಆಕಳು ಮತ್ತು ಮೇಕೆಗಳನ್ನು ಖರೀದಿಸಿದ್ದರು. ಅಷ್ಟೇ ಅಲ್ಲ ಎತ್ತಿನ ಬಂಡಿಯಲ್ಲಿ ಒಂದು ಸುತ್ತ ಸುತ್ತಾಡಿದ್ದರು. ಇದೀಗ ದರ್ಶನ್​ ಮತ್ತೆರಡು ಕುದುರೆಯ ಒಡೆಯನಾಗಿದ್ದಾರೆ.

ಹೌದು, ಸದ್ಯ ದಾವಣಗೆರೆಯಲ್ಲಿ ಬೀಡುಬಿಟ್ಟಿರುವ ದರ್ಶನ್​, ಮಾಜಿ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್​ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ವೇಳೆ ವಿದೇಶಿ ತಳಿಯ ಎರಡು ಕುದುರೆಗಳನ್ನು ಮಲ್ಲಿಕಾರ್ಜುನ್​ ಉಚಿತವಾಗಿ ದರ್ಶನ್​ಗೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ದರ್ಶನ್​, ‘ಲಾಕ್​ಡೌನ್​ ಶುರುವಾದ ಮೇಲೆ ಸಿನಿಮಾ ಕೆಲಸಗಳು ನಿಂತಿವೆ. ಹಾಗಾಗಿ ಕುರಿ, ಕೋಳಿ, ಆಕಳು, ಕುದುರೆಗಳನ್ನು ಪಡೆದು ಸಾಕುತ್ತಿದ್ದೇನೆ. ಇತ್ತಿಚೆಗಷ್ಟೇ ವಿನಯ್​ ಕುಲಕರ್ಣಿ ಅವರಿಂದ ಒಂದಷ್ಟು ಜಾನುವಾರು ಪಡೆದುಕೊಂಡಿದ್ದೆ. ಇದೀಗ ಮಲ್ಲಿಕಾರ್ಜುನ್​ ಅವರ ಬಳಿ ಒಳ್ಳೇ ತಳಿಯ ಕುದುರೆಗಳು ಇರುವುದು ಗೊತ್ತಾಯಿತು. ಹಾಗಾಗಿ ಅವುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net