ವಿದೇಶಿ ಹಸ್ತಕ್ಷೇಪವೇ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗಳಿಸಲು ಕಾರಣ: ಶಿವರಾಜ್​ಸಿಂಗ್​ ಚೌಹಾಣ್​

Shivraj Singh Chauhan
Published on

ಜೈಪುರ: ಜೂನ್​ 04ರಂದು ಪ್ರಕಟಗೊಂಡ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವು ಬಹುಮತ ಪಡೆದು ಸರ್ಕಾರ ರಚಿಸಿದ್ದಾರಾದರೂ ನಿರೀಕ್ಷಿತ ಸ್ಥಾನಗಳಲ್ಲಿ ಗೆಲ್ಲುವಲ್ಲಿ ವಿಫಲವಾಗಿದೆ. ಪಕ್ಷದ ಸೋಲಿನ ಕುರಿತು ಮಾತನಾಡಿರುವ ಕೇಂದ್ರ ಕೃಷಿ ಸಚಿವ ಶಿವರಾಜ್​ ಸಿಂಗ್​ ಚೌಹಾಣ್​ ಎನ್​ಡಿಎ ಮೈತ್ರಿಕೂಟವು ಕಡಿಮೆ ಸ್ಥಾನಗಳನ್ನು ಗಳಿಸಲು ವಿದೇಶಿ ಹಸ್ತಕ್ಷೇಪವೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೈಪುರದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚೌಹಾಣ್​ ವಿಪಕ್ಷಗಳಲ್ಲಿ ಕಾಣದ ಕೆಲವು ವಿದೇಶಿ ಕೈಗಳ ಸಕ್ರಿಯವಾಗಿವೆ. ಅವುಗಳು ಬಿಜೆಪಿಯನ್ನು ಸೋಲಿಸಲು ಶ್ರಮಿಸುತ್ತಿರುತ್ತವೆ. 2024ರಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವು ಕಡಿಮೆ ಸ್ಥಾನಗಳಲ್ಲಿ ಗೆಲ್ಲಲು ಇದು ಕೂಡ ಮುಖ್ಯ ಕಾರಣ ಎಂದು ಹೇಳಿದ್ದಾರೆ.

ರಾಜಸ್ಥಾನ ಚುನಾವಣಾ ಉಸ್ತುವಾರಿ ವಿನಯ್​ ಸಹಸ್ರಬುದ್ಧೆ ಚೌಹಾಣ್ ಮಾತನಾಡಿ, ರಾಜಸ್ಥಾನದ 25 ಸ್ಥಾನಗಳ ಪೈಕಿ ನಾವು 11ರಲ್ಲಿ ಸೋತಿದ್ದೇವೆ. ರಾಷ್ಟ್ರವ್ಯಾಪಿ 65 ಸ್ಥಾನಗಳಲ್ಲಿ ಸೋಲು ಕಂಡಿದ್ದೇವೆ. ಪಕ್ಷವು ಈ ವಿಚಾರವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದು, ಲೋಪದೋಷಗಳ ಕುರಿತು ಚರ್ಚೆಯಾಗಬೇಕಿದೆ. ಇದು ಯಾರನ್ನು ದೂಷಿಸುವ ಸಮಯವಲ್ಲ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಭಜನ್​ಲಾಲ್​ ಶರ್ಮಾ ಮಾತನಾಡಿ, ಪಕ್ಷವು ಎಲ್ಲಾ ಕಾರ್ಯಕರ್ತರ ಚಲನಚಲನದ ಮೇಲೆ ಗಮನ ಇಟ್ಟಿರುತ್ತದೆ ಎಂಬುದಕ್ಕೆ ನಾನೇ ಜೀವಂತ ಸಾಕ್ಷಿ. ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಇಂದು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಪಕ್ಷವು ಎಲ್ಲರ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸೂಕ್ತ ಸಮಯದಲ್ಲಿ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ಮುಖ್ಯಮಂತ್ರಿ ಭಜನ್​ಲಾಲ್​ ಶರ್ಮಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net