Flight Crash : ಕಜಕಿಸ್ತಾನ್ ವಿಮಾನ ಪತನ ಘಟನೆ ಮಾಸುವ ಮುನ್ನವೇ ದಕ್ಷಿಣ ಕೊರಿಯಾದಲ್ಲಿ ಭೀಕರ ವಿಮಾನ ಪತನ ಸಂಭವಿಸಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊರಿಯಾದ ಜೆಜು ಏರ್ ಫ್ಲೈಟ್ನ 179 ಪ್ರಯಾಣಿಕರು ದುರಂತ ಸಾವಿಗೀಡಾಗಿದ್ದಾರೆ. ಭಾನುವಾರ (ಡಿ.29) ಮುಂಜಾನೆ ಈ ಘಟನೆ ನಡೆದಿದೆ. ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಮಾರಣಾಂತಿಕ ವಾಯುಯಾನ ದುರಂತಗಳಲ್ಲಿ ಇದು ಕೂಡ ಒಂದಾಗಿದೆ.
ಬೋಯಿಂಗ್ 737-800 ಸಂಖ್ಯೆಯ ವಿಮಾನವು ರನ್‌ವೇಯಿಂದ ಸ್ಕಿಡ್ ಆಗಿ ವೇಗವಾಗಿ ಗಾರ್ಡ್‌ರೈಲ್‌ಗೆ ಅಪ್ಪಳಿಸಿದ ಪರಿಣಾಮ ದೊಡ್ಡದಾಗಿ ಬೆಂಕಿ ಹೊತ್ತಿಕೊಂಡು, ಇಡೀ ವಿಮಾನವೇ ಸುಟ್ಟು ಕರಕಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಕಲಕಿದೆ. ಈ ಅಪಘಾತದಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ.
🚨 BREAKING VIDEO: New video shows moment Boeing 737-800 plane carrying 181 people onboard crashes at Muan International Airport in South Korea. #Breaking #Muan #SouthKorea
pic.twitter.com/6aBHyRyrF9— Breaking News Video (@BreakingAlerter) December 29, 2024
ವಿಮಾನದ ಲ್ಯಾಂಡಿಂಗ್ ಗೇರ್ ವಿಫಲವಾದ ಕಾರಣ ಪೈಲಟ್ “ಬೆಲ್ಲಿ ಲ್ಯಾಂಡಿಂಗ್” ಗೆ ಪ್ರಯತ್ನಿಸಿದಂತಿದೆ. ವಿಮಾನದ ಅಡಿ ಭಾಗ ಅಂದರೆ ಹೊಟ್ಟೆಯು ರನ್‌ವೇನಲ್ಲಿ ಉಜ್ಜಿಕೊಂಡು ಹೋಗಿದೆ. ತಾಂತ್ರಿಕ ದೋಷದಿಂದ ಲ್ಯಾಂಡಿಂಗ್ ಗೇರ್ ತೆರೆಯದ ಕಾರಣ ಪೈಲಟ್ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವೆಜ್ ಅಥವಾ ನಾನ್ ವೆಜ್ ಎರಡರಲ್ಲಿ ಯಾವ ಆಹಾರ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ? Veg vs Non veg
ಸಾಮಾನ್ಯ ಲ್ಯಾಂಡಿಂಗ್ ವಿಫಲವಾದ ನಂತರ ಪೈಲಟ್ ಕ್ರ್ಯಾಶ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ವಿಮಾನಕ್ಕೆ ಪಕ್ಷಿಗಳ ಹಿಂಡು ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ಪಕ್ಷಿಗಳು ಡಿಕ್ಕಿ ಹೊಡೆದ ನಂತರ ಒಂದರ ಹಿಂದೆ ಒಂದರಂತೆ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದವು. ಲ್ಯಾಂಡಿಂಗ್ ಗೇರ್ ವೈಫಲ್ಯ ಮತ್ತು ಬೆಲ್ಲಿ ಲ್ಯಾಂಡಿಂಗ್ ಅಪಘಾತಕ್ಕೆ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ಅನೇಕ ನೆಟ್ಟಿಗರು ವಿಮಾನ ನಿಲ್ದಾಣದ ಅಧಿಕಾರಿಗಳ ವರ್ತನೆಗೆ ಕೋಪ ವ್ಯಕ್ತಪಡಿಸುತ್ತಿದ್ದಾರೆ. 3 ಕಿ.ಮೀ.ಗಿಂತ ಕಡಿಮೆ ಇರುವ ರನ್‌ವೇಯಲ್ಲಿ ಬೆಲ್ಲಿ ಲ್ಯಾಂಡಿಂಗ್ ನಡೆಯುವಾಗ ಅಗ್ನಿಶಾಮಕ ದಳದವರು ಏಕೆ ಸ್ಥಳದಲ್ಲಿ ಇರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮುವಾನ್ ಅಗ್ನಿಶಾಮಕ ಠಾಣೆಯ ಮುಖ್ಯಸ್ಥ ಲೀ ಜಿಯೋಂಗ್-ಹ್ಯುನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೆಟ್ಟ ಹವಾಮಾನವು ದುರಂತಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ. ಆದಾಗ್ಯೂ, ಜಂಟಿ ತನಿಖೆಯ ನಂತರ ನಾವು ನಿಖರವಾದ ಕಾರಣವನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ. ಈ ಅಪಘಾತಕ್ಕೆ ಜೆಜು ಏರ್ ಫ್ಲೈಟ್ ಸಂಸ್ಥೆ ಕ್ಷಮೆಯಾಚಿಸಿದೆ.
ಅಂದಹಾಗೆ ವಿಮಾನದಲ್ಲಿ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು. 173 ಪ್ರಯಾಣಿಕರು ದಕ್ಷಿಣ ಕೊರಿಯನ್ನರು ಮತ್ತು ಇಬ್ಬರು ಥಾಯ್ ಪ್ರಜೆಗಳು. ಅಪಘಾತದಲ್ಲಿ ಇಬ್ಬರು ಬದುಕುಳಿದಿದ್ದಾರೆ. ಅವರಲ್ಲಿ ಒಬ್ಬ ಪ್ರಯಾಣಿಕ ಮತ್ತು ಇನ್ನೊಬ್ಬ ಸಿಬ್ಬಂದಿ. ವಿಮಾನವು ಸಂಪೂರ್ಣವಾಗಿ ನಾಶವಾಗಿದೆ ಎಂದು ಮುವಾನ್ ಅಗ್ನಿಶಾಮಕ ಕೇಂದ್ರದ ಮುಖ್ಯಸ್ಥ ಲೀ ಜಿಯೋಂಗ್-ಹೈಯಾನ್ ತಿಳಿಸಿದ್ದಾರೆ. (ಏಜೆನ್ಸೀಸ್)
ಓಯೋ ರೂಮ್ ಬುಕ್ಕಿಂಗ್ನಲ್ಲಿ ಈ ವರ್ಷ ಯಾವ ನಗರ ಅಗ್ರಸ್ಥಾನದಲ್ಲಿದೆ? ಇಲ್ಲಿದೆ ಉತ್ತರ… OYO Rooms
ಪವನ್ ಕಲ್ಯಾಣ್ ಕಾರ್ಯಕ್ರಮದಲ್ಲಿ IPS ಅಧಿಕಾರಿಯ ವಿಚಿತ್ರ ವರ್ತನೆ: ಸತ್ಯ ತಿಳಿದು ಪೊಲೀಸರೇ ಶಾಕ್!