ವೆಜ್​​ ಅಥವಾ ನಾನ್​ ವೆಜ್​ ಎರಡರಲ್ಲಿ ಯಾವ ಆಹಾರ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ? Veg vs Non veg

Veg vs Non veg
Published on

Veg vs Non veg : ಪ್ರಸ್ತುತ ದಿನಗಳಲ್ಲಿ ಹೃದಯಾಘಾತವು ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಇದು ಮುಖ್ಯವಾಗಿ ವ್ಯಕ್ತಿಯ ಜೀವನಶೈಲಿ ಮತ್ತು ಆಹಾರಕ್ರಮಕ್ಕೆ ಸಂಬಂಧಿಸಿದೆ. ಸೇವಿಸುವ ಆಹಾರ ಮತ್ತು ಕುಡಿತದ ಅಭ್ಯಾಸಗಳು ಹೃದಯದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಹೀಗಾಗಿ ನಮ್ಮ ಆಹಾರ ಕ್ರಮ ಸರಿಯಾದ ರೀತಿಯಲ್ಲಿರಬೇಕು.

ಸಸ್ಯಾಹಾರಿ ಆಹಾರವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ಕಾರಣ ಈ ಆಹಾರದಲ್ಲಿ ಹೃದಯಕ್ಕೆ ಹಾನಿಕಾರಕವಾದ ಕೊಬ್ಬಿನಂಶ ಕಡಿಮೆ ಇರುತ್ತದೆ. ಸಸ್ಯಾಹಾರಿ ಆಹಾರವು ಹೆಚ್ಚಾಗಿ ಹಣ್ಣುಗಳು, ತರಕಾರಿಗಳು ಮತ್ತು ಬೀಜಗಳನ್ನು ಒಳಗೊಂಡಿರುತ್ತದೆ. ಇದು ತುಂಬಾ ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಸ್ಯಾಚುರೇಟೆಡ್ ಕೊಬ್ಬುಗಳು ಹೃದಯದ ಆರೋಗ್ಯಕ್ಕೆ ಹಾನಿಕಾರಕ.

ಇನ್ನು ಸಸ್ಯಾಹಾರಿ ಆಹಾರಗಳಾದ ತರಕಾರಿಗಳು ಮತ್ತು ಹಣ್ಣುಗಳು ಫೈಬರ್​ನಲ್ಲಿ ಸಮೃದ್ಧವಾಗಿವೆ. ಫೈಬರ್ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ, ಸಸ್ಯಾಹಾರಿ ಆಹಾರದಲ್ಲಿಯೂ ಸಹ, ಕಡಿಮೆ ಸಂಸ್ಕರಿಸಿದ ಆಹಾರವನ್ನು ಸೇವಿಸುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಇನ್ನು ಮಾಂಸಾಹಾರಿ ಆಹಾರದಲ್ಲಿ ಮಾಂಸ, ಮೀನು ಮತ್ತು ಮೊಟ್ಟೆಗಳು ಸೇರಿವೆ. ಮಾಂಸಾಹಾರಿ ಪ್ರೋಟೀನ್ ಅನ್ನು ನೀಡುತ್ತದೆ ಎಂದು ಕೆಲವರು ನಂಬುತ್ತಾರೆ. ಆದಾಗ್ಯೂ, ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಮಾಂಸಾಹಾರಿ ಆಹಾರಗಳು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಇವು ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. ಇದರಿಂದ ಹೃದ್ರೋಗದ ಸಾಧ್ಯತೆ ಹೆಚ್ಚಾಗುತ್ತದೆ.

Heart Healthy Food

ಇನ್ನು ನಾನ್ ವೆಜ್ ಆಹಾರದಲ್ಲಿ ಫೈಬರ್ ಇರುವುದಿಲ್ಲ. ಈ ಫೈಬರ್​ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೀನನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮವಾದ ಒಮೆಗಾ-3 ಕೊಬ್ಬನ್ನು ಒದಗಿಸುತ್ತದೆ. ಹೀಗಾಗಿ ಮೀನನ್ನು ನಿಯಮಿತವಾಗಿ ಸೇವನೆ ಮಾಡಿ. ಇನ್ನು ಕೆಂಪು ಮಾಂಸವನ್ನು ತಿನ್ನುವುದು ಆರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ.

ಮಾಂಸಾಹಾರಿ ಆಹಾರಗಳಿಗೆ ಹೋಲಿಸಿದರೆ ಸಸ್ಯಾಹಾರಿ ಆಹಾರಗಳು ಹೃದಯಾಘಾತದ ಕಡಿಮೆ ಅಪಾಯನ್ನು ಹೊಂದಿವೆ. ಸಸ್ಯಾಹಾರಿ ಆಹಾರಗಳಲ್ಲಿ ಸ್ಯಾಚುರೇಟೆಡ್ ಕೊಬ್ಬುಗಳು ಕಡಿಮೆ ಇದ್ದು, ಫೈಬರ್ ಹೆಚ್ಚಿದೆ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಕಡಿಮೆ. ಹೀಗಾಗಿ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ನೀವು ಬಯಸಿದರೆ, ನಿಮ್ಮ ಆಹಾರದಲ್ಲಿ ತರಕಾರಿಗಳು, ಹಣ್ಣುಗಳು, ಕಾಳುಗಳು ಮತ್ತು ಬೀಜಗಳನ್ನು ಸೇರಿಸಲು ಪ್ರಯತ್ನಿಸಿ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net