

ನವದೆಹಲಿ: ವರ್ಷದಿಂದ ದಕ್ಷಿಣ ಫ್ರಾನ್ಸ್ನ ಬಾರ್ಬಡೋಕ್ಸ್ನಲ್ಲಿರುವ ಮೇರಿಗ್ನಾಕ್ ವಾಯುನೆಲೆಯಿಂದ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲು ಟೇಕ್ಆಫ್ ಆಗಿವೆ. ಬುಧವಾರ ಹರಿಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಲಿವೆ.
ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಫ್ರೆಂಚ್ ಡಸಾಲ್ಟ್ ಏವಿಯೇಷನ್ ಒಟ್ಟು 36 ಯುದ್ಧ ವಿಮಾನಗಳನ್ನು ಪೂರೈಸಲಿದೆ. ಮೊದಲ ಕಂತಿನಲ್ಲಿ ಐದು ಯುದ್ಧವಿಮಾನಗಳನ್ನು ಹಸ್ತಾಂತರಿಸಿದೆ.
ಜತೆಗೆ, ಭಾರತಿಯ ವಾಯು ಸೇನೆಯ 12 ಪೈಲಟ್ ಹಾಗೂ ಇಂಜಿನಿಯರಿಂಗ್ ಸಿಬ್ಬಂದಿಗೆ ಪೂರ್ಣ ಪ್ರಮಾಣದ ತರಬೇತಿಯನ್ನು ಫ್ರಾನ್ಸ್ ಈಗಾಗಲೇ ನೀಡಿದೆ.
ಆಗಸದಲ್ಲಿಯೇ ಇಂಧನ ಭರ್ತಿ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಯುದ್ಧ ವಿಮಾನಗಳು ಯುಎಇಯಲ್ಲಿರುವ ಫ್ರಾನ್ಸ್ನ ವಾಯುನೆಲೆಯಲ್ಲಿ ನಿಲುಗಡೆಯಾಗಲಿವೆ. ಬಳಿಕ ಬುಧವಾರ ಭಾರತಕ್ಕೆ ಆಗಮಿಸಲಿವೆ ಎಂದು ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು ಹತ್ತು ಯುದ್ಧ ವಿಮಾನಗಳ ಹಸ್ತಾಂತರ ಕಾರ್ಯಕ್ರಮ ಪೂರ್ಣಗೊಂಡಂತಾಗಿದೆ. ಐದು ಯುದ್ಧ ವಿಮಾನಗಳು ತರಬೇತಿ ಉದ್ದೇಶಗಳಿಗಾಗಿ ಫ್ರಾನ್ಸ್ನಲ್ಲಿಯೇ ಇರಲಿವೆ. 2021ರ ಕೊನೆಗೆ ಎಲ್ಲ 36 ಯುದ್ಧ ವಿಮಾನಗಳನ್ನು ಹಸ್ತಾಂತರಿಸಲಾಗುವುದು ಎಂದು ಡಸಾಲ್ಟ್ ತಿಳಿಸಿದೆ.
ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರಿ ಜಾವೇದ್ ಅಶ್ರಫ್ ವಿಮಾನಗಳ ಟೇಕ್ ಆಫ್ಗೂ ಮುನ್ನ ಭಾರತೀಯ ಪೈಲಟ್ಗಳ ಜತೆಗೆ ಮಾತುಕತೆ ನಡೆಸಿದರು.
ಫ್ರಾನ್ಸ್ನ ವಾಯುನೆಲೆಯಿಂದ ತೆರಳುತ್ತಿರುವ ರಫೇಲ್ ಯುದ್ಧ ವಿಮಾನಗಳ ವಿಡಿಯೋ...